ಬೆಂಗಳೂರು: ದೇಶದ ಒಟ್ಟು ಕಾಫಿ ಉತ್ಪಾದನೆಯಲ್ಲಿ ಶೇ.75ರಷ್ಟು ಕರ್ನಾ ಟಕ ನೀಡುತ್ತಿದ್ದು, ಇಡೀ ಏಷ್ಯಾದಲ್ಲೇ ಮೊದಲ ಬಾರಿ ಆಯೋಜಿಸಿರುವ, ಕಾಫಿ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯುತ್ತಿರುವುದು ರಾಜ್ಯದ ಹೆಮ್ಮೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ನಗರದಲ್ಲಿ ಹೋಟೆಲೊಂದರಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ, 2020ರ ಸೆ.7ರಿಂದ 9ರವರೆಗೆ ಬೆಂಗ ಳೂರಿ ನಲ್ಲಿ ನಡೆಯುವ 5ನೇ ವಿಶ್ವ ಕಾಫಿ ಸಮ್ಮೇಳನದ ಸಿದ್ಧತಾ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿ ಹಾಗೂ ಸಮ್ಮೇ ಳನದ ಮಾಹಿತಿ ಕೈಪಿಡಿ (ಬ್ರೌಷರ್) ಬಿಡುಗಡೆ ಮಾಡಿ ಮಾತನಾಡಿದರು.
ದೇಶದಲ್ಲಿ ಕಾಫಿ ಸೇವನೆ ಮತ್ತು ಉತ್ಪಾದನೆ ಎರಡೂ ಕ್ರಮೇಣವಾಗಿ ಹೆಚ್ಚಾಗಿದೆ. ಕೆಫೆ ಕಾಫಿಡೇ ರಾಜ್ಯದ ಕಾಫಿಯನ್ನು ವಿಶ್ವಕ್ಕೆ ಪರಿಚಯ ಮಾಡಿದೆ. ಈ ಮೂಲಕ ರಾಜ್ಯ ಈಗಾಗಲೇ ಕಾಫಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಕಾಫಿ ಬೆಳಗಾರ ಮತ್ತು ಮಾರುಕಟ್ಟೆ ಸಮಸ್ಯೆಗಳ ಕುರಿತ ಚರ್ಚೆಗೆ ಸಹಕಾರಿ ಯಾಗಲಿರುವ ಈ ಸಮ್ಮೇಳನದ ಯಶಸ್ಸಿಗೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಸಹ ಕಾರ ನೀಡಲಿದೆ ಎಂದು ತಿಳಿಸಿದರು. ಸಮ್ಮೇಳನದ ಕುರಿತು ಮಾಹಿತಿ ನೀಡಿದ ಭಾರತೀಯ ಕಾಫಿ ಟ್ರಸ್ಟ್ ಅಧ್ಯಕ್ಷ ಅನಿಲ್
ಕುಮಾರ್ ಭಂಡಾರಿ, ಈವರೆಗೆ ಯೂರೋಪ್, ಅಮೆರಿಕ ಮತ್ತು ಆಫ್ರಿಕಾ ಖಂಡಗಳಲ್ಲಿ ಕೇವಲ 4 ವಿಶ್ವ ಕಾಫಿ ಸಮ್ಮೇಳನಗಳು ನಡೆದಿವೆ. ಮೊದಲ ಬಾರಿಗೆ ಏಷ್ಯಾ ಖಂಡದಲ್ಲಿ ನಡೆಯುತ್ತಿರುವ ಸಮ್ಮೇಳನ ಆಯೋ ಜಿಸುವ ಅವಕಾಶ ಬೆಂಗಳೂರಿಗೆ ಸಿಕ್ಕಿರುವುದು ಹೆಮ್ಮೆಯ ವಿಷಯ ಎಂದರು.
ಭಾರತೀಯ ಕಾಫಿ ಟ್ರಸ್ಟ್‌ನ ಕಾರ್ಯ ನಿರ್ವಾಹಕ ಅಧ್ಯಕ್ಷ ಜಗದೀಶ್ ಪಟಾ ನ್ಕರ್ ಮಾತನಾಡಿ, ಸಮ್ಮೇಳನದಲ್ಲಿ 85ಕ್ಕೂ ಅಧಿಕ ದೇಶಗಳು ಪಾಲ್ಗೊಳ್ಳಲಿದ್ದು, 1500 ಅತಿಥಿಗಳು ಭಾಗವಹಿಸಲಿದ್ದಾರೆ. 500 ಕಾಫಿ ಬೆಳೆಗಾರ ಮತ್ತು ಮಾರಾಟಗಾರ ಸಂಘ ಟನೆಗಳು, 100 ಪ್ರದರ್ಶನ ಮಳಿಗೆಗಳು ಮತ್ತು 10 ಸಾವಿರಕ್ಕೂ ಅಧಿಕ ಜನ ಪಾಲ್ಗೊಳ್ಳಲಿದ್ದಾರೆ ಎಂದರು.
ಮೂರು ದಿನಗಳ ಸಮ್ಮೇಳನ ದಲ್ಲಿ ವಿಶ್ವ ಉದ್ದಿಮೆ ದಾರರ ಸಭೆ, ಕಾರ್ಯ ಗಾರಗಳು ನಡೆಯಲಿದ್ದು, ಕಾಫಿ ಬೆಳೆಗಾಗರರು ತಮ್ಮ ಅಭಿಪ್ರಾಯ ಹಂಚಿ ಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ಈ ವೇಳೆ ಅಂತಾರಾಷ್ಟ್ರೀಯ ಕಾಫಿ ಸಂಘದ ಕಾರ್ಯ ನಿರ್ವಾಹಕ ನಿರ್ದೇ ಶಕ ಜೋಸ್ ಸೆಟ್ಟೆ, ಭಾರತೀಯ ಕಾಫಿ ಬೋರ್ಡ್ ಅಧ್ಯಕ್ಷ ಎಂ.ಎಸ್.ಬೋಜೇ ಗೌಡ, ಕಾಫಿ ಬೋರ್ಡ್ ಹಿರಿಯ ಸಲಹೆಗಾರ ರಘುರಾಮುಲು ಉಪಸ್ಥಿತರಿದ್ದರು.