Advertisement

ಜಾತಿ ಮೀರಿದರೆ ವಿಶ್ವಮಾನವತೆ ಸಾಧ್ಯ

12:56 AM Jan 20, 2020 | Lakshmi GovindaRaj |

ಬೆಂಗಳೂರು: ಅಂತರಂಗ ಒಂದು ದೊಡ್ಡ ವಿಶ್ವವಿದ್ಯಾಲಯ, ಜಾತಿಯನ್ನು ಮೀರಿದರೆ ವಿಶ್ವಮಾನವನಾಗಲು ಅವಕಾಶವಿದೆ ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ಅಭಿಪ್ರಾಯಪಟ್ಟರು.

Advertisement

ಸಂಸ್ಕೃತಿ ಪ್ರಕಾಶನ ವತಿಯಿಂದ ನರಸಿಂಹ ರಾಜ ಕಾಲೋನಿಯಲ್ಲಿರವ ಡಾ.ಸಿ.ಅಶ್ವತ್ಥ್ ಕಲಾಸೌಧದಲ್ಲಿ ಆಯೋಜಿಸಿದ್ದ “ದೀರ್ಘ‌ತಮಸ್‌’ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತೀಯ ಸಮಾಜದಲ್ಲಿ ಯಾವ ವ್ಯಕ್ತಿಯೂ ಜಾತಿಯಿಂದ ಮೇಲೆ ಬಂದಿಲ್ಲ. ಜಾತಿ ವ್ಯವಸ್ಥೆ ಸಾಮಾಜಿಕವಾಗಿ ಒಂದು ಹಂತದವರೆಗೆ ಮಾತ್ರ ಇರುತ್ತದೆ. ಹೀಗಾಗಿ ಜಾತಿ ವ್ಯವಸೆೆ§ಯನ್ನು ಮೀರಿ ಸಾಧನೆ ಮಾರ್ಗದಲ್ಲಿ ನಡೆದರೆ ವಿಶ್ವ ಮಾನವನಾಗಲು ಅವಕಾಶವಿದೆ ಎಂದರು.

ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯನಿಗೆ ವೈಜ್ಞಾನಿಕ ಮತ್ತು ಧಾರ್ಮಿಕ ಎಂಬ ಎರಡು ಆಧಾರ ಸ್ತಂಭಗಳಿರುತ್ತವೆ. ಆದರೆ ಬಡವ ಬಲ್ಲಿದ, ನಾಗರೀಕ ಅನಾಗರಿಕ, ಹಳ್ಳಿಯವ ಪಟ್ಟಣದವ ಇವೆಲ್ಲವನ್ನು ಮೀರಿ ಪ್ರತಿಯೊಬ್ಬ ನಿಗೂ ಅವಕಾಶ ಇರುವುದು ಧಾರ್ಮಿಕ ಸ್ಥಳವಾದ ಅಂತರಂಗದಲ್ಲಿ. ಯಾಕೆಂದರೆ ಅಂತ ರಂಗ ಎಂಬುದು ಒಂದು ದೊಡ್ಡ ವಿಶ್ವವಿದ್ಯಾಲಯ ಎಂದರು.

ಪ್ರೊ.ಕೆ.ಅನಂತರಾಮು ಮಾತನಾಡಿ, ಲೋಕದಲ್ಲಿ ಎರಡು ರೀತಿಯ ಗ್ರಂಥಗಳಿವೆ. ಒಂದು ಗ್ರಂಥ ಮುಟ್ಟಿ ಕೈ ತೊಳೆಯುವುದು ಮತ್ತು ಇನೊಂದು ಕೈ ತೊಳೆದು ಗ್ರಂಥ ಮುಟ್ಟುವುದಾಗಿದೆ. ದೀರ್ಘ‌ತಮಸ್‌ ಕೃತಿಯು ಕೈ ತೊಳೆದು ಮುಟ್ಟುವ ಕೃತಿಯಾಗಿದೆ. ಇದು ಶಾಶ್ವತವುಳ್ಳ ಗ್ರಂಥವಾಗಿದ್ದು, ಯಾವ ಕಾಲಕ್ಕೂ ಹಳೆಯದಾಗದ ಗ್ರಂಥವಾಗಿದೆ. ಆದರೆ ಮೊತ್ತ ಮೊದಲಬಾರಿಗೆ ದೀರ್ಘ‌ತಮಸ್ಸನ್ನು ಕನ್ನಡದಲ್ಲಿ ರಚನೆ ಮಾಡಿರುವ ಕೀರ್ತಿ ಕೃಷ್ಣಮೂರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಋಷಿ ಪರಂಪರೆ, ಸರ್ವೇಜನ ಸುಖೀಃನೋಭವಂತು ಎಂಬುದನ್ನು ಹಾಗೂ ಇಂತಹ ಹಲವಾರು ಅಶಯಗಳನ್ನು ದೀರ್ಘ‌ತಮಸ್‌ ಕೃತಿಯಲ್ಲಿ ಎತ್ತಿಹಿಡಿಯಲಾಗಿದೆ. ಜೊತೆಗೆ ನೂರಾರು ಅರ್ಥಪೂರ್ಣವಾದ ಚಿತ್ರಗಳು, ಕೂಡ ಇದರಲ್ಲಿವೆ. ನಾವೆಲ್ಲರೂ ಅಮೃತ ಪುತ್ರರಾಗಬೇಕಾದರೆ ಈ ಗ್ರಂಥ ಓದಬೇಕು ಎಂದರು.

Advertisement

ಕಾರ್ಯಕ್ರಮದ ಅಧ್ಯಕ್ಷ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್‌ ಮಾತನಾಡಿ, ದೀರ್ಘ‌ತಮಸ್‌ ಕೃತಿಯಲ್ಲಿ ಹಲವಾರು ಅಂಶಗಳು ಒಳಗೊಂಡಿ ದ್ದು, ಓದಲು ಕುಳಿತರೆ ಕುತೂಹಲಗಳು ಹೆಚ್ಚಾಗಿ ಇನ್ನೂ ಓದಬೇಕು ಎಂದು ಆಗುತ್ತದೆ. ದೀರ್ಘ‌ತಮಸ್‌ ಕೃತಿಯಲ್ಲಿ ಆಧುನಿಕತೆಗೆ ಬೇಕಾದ ಹಾಗೂ ಇನ್ನಿತರ ಅಂಶಗಳನ್ನು ಒಳಗೊಂಡಿದೆ. ಎಲ್ಲರೂ ಕೂಡ ಈ ಪುಸ್ತಕ ಖರೀದಿಸಿ ಅದರಲ್ಲಿನ ಅಂಶಗಳನ್ನು ತಿಳಿದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ವೇದ ವಿದ್ವಾಂಸ ಗಂಗಾಧರ ಶಾಸ್ತ್ರಿ , ವಿದ್ವಾನ್‌ ಆದಿತ್ಯ ಅವಾನಿ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವೀರನಾರಾಯಣ ಎನ್‌.ಕೆ. ಪಾಂಡುರಂಗಿ, ದೀರ್ಘ‌ತಮಸ್‌ ಕೃತಿ ಲೇಖಕ ಎಸ್‌.ಜಿ.ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next