Advertisement

ಅವಸಾನದ ಹಾದಿಯಲ್ಲಿ ಸಾಗುತ್ತಿದೆ ಪಾತರಗಿತ್ತಿ ಸಂತತಿ

11:02 AM Mar 14, 2021 | Team Udayavani |

ಚಿಟ್ಟೆಗಳ ಸೊಬಗನ್ನು ಕಂಡುಖುಷಿಪಡದವರಿಲ್ಲ. ಮಕ್ಕಳಿಗಂತೂಚಿಟ್ಟೆ ಒಂದು ಕೌತುಕ ಹಾಗೂಆತ್ಮೀಯ ಸ್ನೇಹಿತ! ಮನಸ್ಸಿಗೆ ಮುದ ನೀಡುವ ಈ ಜೀವಿ, ಇನ್ನುಕೆಲವೇದಶಕಗಳಲ್ಲಿ ಈ ಭೂಮಿಯಿಂದ ಮಾಯವಾಗಲಿವೆ! ಇಂಥದ್ದೊಂದು ಆತಂಕವನ್ನುಪರಿಸರವಾದಿಗಳು ಹಾಗೂ ಚಿಟ್ಟೆಗಳ ತಜ್ಞರು ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ಚಿಟ್ಟೆಗಳ ದಿನಾಚರಣೆಯ (ಮಾ. 14) ದಿನದಂದು ಈ ಆತಂಕದ ಒಳಹೊಕ್ಕು ನೋಡುವ ಪ್ರಯತ್ನ ಮಾಡಲಾಗಿದೆ.

Advertisement

ಆತಂಕವೇನು? :

“ಸೈನ್ಸ್‌’ ನಿಯತಕಾಲಿಕೆಯಲ್ಲಿ ಇತ್ತೀಚೆಗೆ ಪ್ರಕಟಗೊಂಡ ಲೇಖನದಲ್ಲಿ, “ಪರಿಸರ ನಾಶದಿಂದಾಗಿ ಚಿಟ್ಟೆಗಳ ಅನೇಕ ಪ್ರಭೇದಗಳು ಈಗಾಗಲೇ ಮಾಯವಾಗಿವೆ. ಪಶ್ಚಿಮ ಅಮೆರಿಕದಬೆಟ್ಟಗುಡ್ಡಗಳಲ್ಲಿದ್ದ ಅನೇಕ ಜಾತಿಗಳ ಚಿಟ್ಟೆಗಳು ಈಗಾಗಲೇನಾಶವಾಗಿವೆ. ಇನ್ನೂ ಕೆಲವು ಅಳಿವಿನಂಚಿನಲ್ಲಿವೆ. ಚಿಟ್ಟೆಗಳ ಸಂರಕ್ಷಿತ ಪ್ರದೇಶಗಳಿಂದಲೇ ಚಿಟ್ಟೆಗಳು ಮಾಯ ವಾಗುತ್ತಿವೆ’ಎಂದು ಹೇಳಲಾಗಿದ್ದು, ಭಾರತ ದಲ್ಲೂ ಇದೇ ರೀತಿಯ ಸಮಸ್ಯೆಚಿಟ್ಟೆಗಳಿಗೆ ಒದಗಿರುವುದರ ಬಗ್ಗೆ ಪರಿಸರ ತಜ್ಞರು, ಚಿಟ್ಟೆಗಳ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಮನುಷ್ಯನೇ ಕಾರಣ :

ಇದಕ್ಕೆ ಕಾರಣ, ಚಿಟ್ಟೆಗಳ ಆವಾಸಸ್ಥಾನಗಳ ನಾಶ, ಅತಿಯಾದ ಕೀಟನಾಶಕಗಳ ಬಳಕೆ ಹಾಗೂ ಜಾಗತಿಕ ತಾಪಮಾನ ಬದಲಾವಣೆ. ಈ ಮೂರಕ್ಕೂ ಮೂಲ ಕಾರಣ ಮನುಷ್ಯನೇಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹಾಗಾಗಿ, ಚಿಟ್ಟೆಗಳ ಸಂತತಿ ನಾಶಕ್ಕೆ ಮಾನವ ಪರೋಕ್ಷವಾಗಿ ಮುನ್ನುಡಿ ಬರೆದಿದ್ದಾನೆ.

Advertisement

ನಮ್ಮಲ್ಲೂ ಅದೇ ಕಥೆ :

ಭಾರತವೂ ಈ ಶಾಪದಿಂದ ಹೊರತಾಗಿಲ್ಲ. ನಮ್ಮ ಕರ್ನಾಟಕದಲ್ಲೂ ಚಿಟ್ಟೆಗಳ ಆವಾ ಸತಾಣಗಳು ನಾಶವಾಗಿವೆ. ಮಾಲಿನ್ಯ ಹೆಚ್ಚಿದೆ. ಇನ್ನೂ ಅನೇಕ ದುಷ್ಪರಿಣಾಮ ಗಳಿಂದಾಗಿ ಚಿಟ್ಟೆಗಳು ಅಳಿವಿನಂಚಿ ನಲ್ಲಿವೆ. ಕೃಷಿ ಚಟುವಟಿಕೆಗಳಲ್ಲಿ ರಾಸಾಯನಿ ಕಗಳ ಬಳಕೆ ಮಿತಿಮೀರಿ ದೆ. ಚಿಟ್ಟೆಗಳಿಗೆ ಪ್ರಶಸ್ತವಾದಪಶ್ಚಿಮ ಘಟ್ಟಗಳಲ್ಲಿಯೇ ಅನೇಕ ಪ್ರಭೇದಗಳು ನಾಪತ್ತೆಯಾಗಿವೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಹಲವು ಸಂತತಿ ಅಳಿವಿನಂಚಿನಲ್ಲಿವೆ’ :

ಒಂದೊಂದು ಜಾತಿಯ ಚಿಟ್ಟೆಗಳಿಗೆ ಅದರದ್ದೇ ಆದ ಆಹಾರಪದ್ಧತಿಯಿರುತ್ತದೆ. ಅವು ಮನುಷ್ಯರಂತೆ ಒಂದು ಆಹಾರ ಸಿಕ್ಕಿಲ್ಲವೆಂದರೆ ಬೇರೊಂದು ಆಹಾರಕ್ಕೆ ಹಠಾತ್ತಾಗಿಬದಲಾಗುವಂಥವಲ್ಲ. ಅದರಲ್ಲೂ ಚಿಟಗಳೆr ‌ ಜೀವನವಿಕಾಸದ ಪ್ರಮುಖ ಘಟ್ಟವಾದ ಕ್ಯಾಟರ್‌ಪಿಲ್ಲರ್‌ ಹಂತದಲ್ಲಿ ಅವು ಬಕಾಸುರನಂತೆ ತಿನ್ನುವುದರಿಂದ ಅವಕ್ಕೆ ಬೇಕಾದ ಆಹಾರ ಯಥೇಚ್ಛವಾಗಿ ಸಿಗಲೇಬೇಕು. ಆಹಾರ ಸಿಗದೇ ಇದ್ದಾಗ ಅವು ಸಾವನ್ನಪ್ಪುತ್ತಿವೆ ‌ ಎನ್ನುತ್ತಾರೆ ಖ್ಯಾತ ಪರಿಸರವಾದಿ ಶಿವಾನಂದ ಕಳವೆ.

“”ಉದಾಹರಣೆಗೆ, ಮಿಲ್ಕ್ ಮೇಡ್‌ ಬಟರ್‌ ಫ್ಲೈ ಎಂಬುವವು, ಚಿಗುರು, ಎಲೆ ಕಿತ್ತರೆ ಹಾಲು ಬರುವಂಥ ಗಿಡಗಳನ್ನು ಅವಲಂಬಿಸಿರುವಂಥವು. ಆ ಹಾಲನ್ನು ಕುಡಿದೇ ಅವು ಬೆಳೆಯುತ್ತವೆ. ಆ ಗಿಡಗಳು ನಾಶವಾದರೆ ಅವೂ ನಾಶವಾಗುತ್ತವೆ. ಲಿಂಬು ಚಿಟ್ಟೆಗಳು ತಮ್ಮ ಕ್ಯಾಟರ್‌ಪಿಲ್ಲರ್‌ ಹಂತದಲ್ಲಿದ್ದಾಗ ನಿಂಬೆ ಗಿಡಿದ ಎಲೆಗಳನ್ನು ಮಾತ್ರ ತಿಂದು ಬದುಕುತ್ತವೆ. ಮನುಷ್ಯನು ನಿಂಬೆ ಗಿಡಕ್ಕೆ ಕೀಟನಾಶಕ ಸಿಂಪಡಿಸುವುದರಿಂದ ಆ ವಿಷಲೇಪಿತ ಎಲೆಗಳನ್ನು ತಿಂದು ಅವು ಸಾವನ್ನಪ್ಪುತ್ತವೆ ಎಂದು ಶಿವಾನಂದ ವಿವರಿಸುತ್ತಾರೆ.

 

ಓ.ಆರ್‌. ಚೇತನ್‌

Advertisement

Udayavani is now on Telegram. Click here to join our channel and stay updated with the latest news.

Next