Advertisement

Udupi: ಇಂದಿನಿಂದ ವಿಶ್ವ ಬಂಟರ ಸಮ್ಮೇಳನ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಾಲನೆ

12:06 AM Oct 28, 2023 | Team Udayavani |

ಉಡುಪಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನೇತೃತ್ವದ ವಿಶ್ವ ಬಂಟರ ಸಮ್ಮೇಳನಕ್ಕೆ ಇಂದು (ಅ. 28) ಚಾಲನೆ ಸಿಗಲಿದೆ. ದಿನ ಪೂರ್ತಿ ವಿವಿಧ ಕ್ರೀಡಾಕೂಟಗಳು ನಡೆಯಲಿವೆ. ಅ. 29ರಂದು ಸಾಂಸ್ಕೃತಿಕ ಕಾರ್ಯಕ್ರಮಗಳು ಸಮ್ಮೇಳನದ ಮೆರುಗು ಹೆಚ್ಚಿಸಲಿವೆ.

Advertisement

ಶನಿವಾರ ಬೆಳಗ್ಗೆ ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ “ಕ್ರೀಡಾ ಸಂಗಮ’ ಆರಂಭವಾಗಲಿದೆ. ಟ್ರ್ಯಾಕ್‌, ಕಬಡ್ಡಿ ಪಂದ್ಯಾಟಕ್ಕೆ ಕ್ರೀಡಾಂ ಗಣ ಸಜ್ಜುಗೊಂಡಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಾಹ್ನ 1 ಗಂಟೆಗೆ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ ನೀಡುವರು.

ಕ್ರೀಡಾಕೂಟ ಚಾಲನೆಗೂ ಮುನ್ನ ಬೆಳಗ್ಗೆ 9ಕ್ಕೆ ನಗರದ ಬೋರ್ಡ್‌ ಹೈಸ್ಕೂಲ್‌ನಿಂದ ಬೃಹತ್‌ ಸಾಲಂಕೃತ ಮೆರವಣಿಗೆ ಆರಂಭಗೊಂಡು ಕೆ.ಎಂ. ಮಾರ್ಗದ ಮೂಲಕ ಹಳೆ ಡಯಾನ ವೃತ್ತ ಮಾರ್ಗವಾಗಿ ಅಜ್ಜರಕಾಡು ಮೈದಾನದವರೆಗೆ ಸಾಗಲಿದೆ. 100ಕ್ಕೂ ಅಧಿಕ ಬಂಟರ ಸಂಘದ ಸಾವಿರಾರು ಮಂದಿ ಪಾಲ್ಗೊಳ್ಳುವರು.

ಜನಪದ ಕಲಾತಂಡಗಳು, ಉಡುಪಿಯ ಕಡೆಗೋಲು ಕೃಷ್ಣ, ಕಟೀಲು ದುರ್ಗಾ ಪರಮೇಶ್ವರಿ ಸಹಿತ ವಿವಿಧ ಸ್ತಬ್ಧ ಚಿತ್ರಗಳು, ಕಂಬಳದ ಕೋಣಗಳುಹುಲಿ ವೇಷ, ಕೀಲುಕುದುರೆ ಗೊಂಬೆಗಳು ಇತ್ಯಾದಿ ಮೆರವಣಿಗೆಗೆ ಕಳೆ ತುಂಬಲಿವೆ. ಬಳಿಕ ಅಜ್ಜರಕಾಡು ಮೈದಾನದಲ್ಲಿ ಬಂಟರ ಸಂಘಗಳ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಲಿದೆ.

ಪ್ರೊ ಕಬಡ್ಡಿ
ಕ್ರೀಡೋತ್ಸವದಲ್ಲಿ ವಿಶೇಷವಾಗಿ ಮಧ್ಯಾಹ್ನ 3ರಿಂದ ರಾತ್ರಿ 11ರ ವರೆಗೆ ಪ್ರೊ ಕಬಡ್ಡಿ ಮಾದರಿಯಲ್ಲಿ 8 ತಂಡಗಳ ಪಂದ್ಯಾಟ ನಡೆಯಲಿದೆ. ಎಲ್ಲ ವಯೋಮಾನದವರಿಗೆಆ್ಯತ್ಲೆಟಿಕ್‌ ಜತೆಗೆ ವಾಲಿಬಾಲ್‌, ಹಗ್ಗ ಜಗ್ಗಾಟ, ತ್ರೋಬಾಲ… ಮತ್ತಿತರ ಪಂದ್ಯಗಳಿವೆ. 2 ಸಾವಿರಕ್ಕೂ ಅಧಿಕ ಕ್ರೀಡಾಳುಗಳು ಭಾಗವಹಿಸುವರು.

Advertisement

ವಾಹನ ನಿಲುಗಡೆ
ಅಜ್ಜರಕಾಡು ವಿವೇಕಾನಂದ ಸರಕಾರಿ ಶಾಲೆ ಮತ್ತು ಸೈಂಟ್‌ ಸಿಸಿಲಿ ಶಾಲೆಯ ಮೈದಾನದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಸಾಂಸ್ಕೃತಿಕ ವೈಭವಕ್ಕೆ ಗುತ್ತಿನ ಮನೆ ವೇದಿಕೆ
ಅ. 29ರಂದು ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದ ಆವರಣದಲ್ಲಿ ತೆರೆದ ವೇದಿಕೆಯಲ್ಲಿ ಸಾಂಸ್ಕೃತಿಕ ವೈಭವ ಜರಗಲಿದೆ. 20 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವರು. ಗುತ್ತಿನ ಮನೆ ಹೋಲುವ ಬೃಹತ್‌ ವೇದಿಕೆ ನಿರ್ಮಿಸಿದ್ದು. ಗುತ್ತಿನ ಮನೆಯ ಕಲಾಸ್ಪರ್ಶ ಸಮ್ಮೇಳನಕ್ಕೆ ಮೆರುಗು ನೀಡಲಿದೆ. ಕುಂದಾಪುರ, ಸುಳ್ಯ, ಉತ್ತರ ಕನ್ನಡ ಜಿಲ್ಲೆಯ 250 ವರ್ಷ ಹಿಂದಿನ ಗುತ್ತಿನ ಮನೆಗಳ ಕಂಬಗಳನ್ನು ಇದಕ್ಕೆ ಬಳಸಿರುವುದು ವಿಶೇಷ.

ಊಟೋಪಚಾರ
ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಸಸ್ಯಾಹಾರಿ, ಮಾಂಸಹಾರಿ ಭೋಜನ, ಸಂಜೆ ಉಪಾ ಹಾರ, ರಾತ್ರಿ ಭೋಜನ ವ್ಯವಸ್ಥೆ ಮಾಡಲಾಗಿದೆ. ನೂರಾರು ಬಾಣಸಿ ಗರು ಶುಕ್ರವಾರದಿಂದಲೇ ಅಡುಗೆ ತಯಾರಿಯಲ್ಲಿದ್ದಾರೆ. ಕುಡಿಯುವ ನೀರು, ಸುಲಭ ಶೌಚಾಲಯ ಸಹಿತ ಅಗತ್ಯ ಮೂಲಸೌಕರ್ಯವನ್ನು ಅಜ್ಜರಕಾಡು ಮೈದಾನದಲ್ಲಿ ರೂಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next