Advertisement

ವಿಶ್ವ ಬಾಕ್ಸಿಂಗ್‌: ಮಂಜುಗೆ ಚಿನ್ನದ ನಿರೀಕ್ಷೆ, ಮೇರಿಗೆ ಕಂಚು

09:45 AM Oct 13, 2019 | sudhir |

ನವದೆಹಲಿ: ಭಾರೀ ನಿರೀಕ್ಷೆ ಮೂಡಿಸಿದ್ದ ಮೇರಿ ಕೋಮ್‌ ರಷ್ಯಾ ಮಹಿಳಾ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌’ ಸೆಮಿಫೈನಲ್‌ನಲ್ಲಿ ಸೋಲನುಭವಿಸಿ ಕಂಚಿನ ಪದಕಕ್ಕೆ ಸಮಾಧಾನಪಟ್ಟಿದ್ದಾರೆ. ಇವರೊಂದಿಗೆ ಸೆಮಿಗೆ ಲಗ್ಗೆ ಇರಿಸಿದ್ದ ಜಮುನಾ ರಾಣಿ, ಲವಿÉನಾ ಬೊರ್ಗೊಹೇನ್‌ ಕೂಡ ಪರಾಭವಗೊಂಡಿದ್ದಾರೆ. ಆದರೆ ಇದೇ ಮೊದಲ ಸಲ ಕಣಕ್ಕಿಳಿದ ಮಂಜುರಾಣಿ ಫೈನಲ್‌ಗೆ ನೆಗೆದಿದ್ದು, ಚಿನ್ನದ ಪದಕದ ಸಾಧ್ಯತೆಯನ್ನು ತೆರೆದಿರಿಸಿದ್ದಾರೆ.

Advertisement

ಚಿನ್ನದ ರಾಣಿಯಾಗುವರೇ ಮಂಜು?
6ನೇ ಶ್ರೇಯಾಂಕದ ಮಂಜುರಾಣಿ 48 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ನ‌ ಚುತಮತ್‌ ರಕ್ಸತ್‌ ವಿರುದ್ಧ 4-1 ಅಂತರದ ಗೆಲುವು ಸಾಧಿಸಿದರು. ಭಾನುವಾರದ ಪ್ರಶಸ್ತಿ ಕಾಳಗದಲ್ಲಿ ಅವರು ಆತಿಥೇಯ ರಷ್ಯಾದ 2ನೇ ಶ್ರೇಯಾಂಕದ ಎಕಟೆರಿನಾ ಪಲ್ಸೇವಾ ವಿರುದ್ಧ ಸೆಣಸಲಿದ್ದಾರೆ. ಮಂಜು ಚಿನ್ನದ ರಾಣಿಯಾಗುವರೇ ಎಂಬ ಕುತೂಹಲ ಗರಿಗೆದರಿದೆ.

54 ಕೆ.ಜಿ ವಿಭಾಗದಲ್ಲಿ ಜಮುನಾ ಬೋರೊ ಚೈನೀಸ್‌ ತೈಪೆಯ ಅಗ್ರ ಶ್ರೇಯಾಂಕಿತೆ ಹಾಂಗ್‌ ಸಿಯಾವೊ ವೆನ್‌ ವಿರುದ್ಧ 0-5 ಅಂತರದಿಂದ ಪರಾಭವಗೊಂಡರು. ಲವಿÉನಾ ಬೊರ್ಗೊಹೇನ್‌ (69 ಕೆಜಿ) ಅವರನ್ನು ಚೀನಾದ ಯಾಂಗ್‌ ಲಿಯು 3-2ರಿಂದ ಮಣಿಸಿದರು.

ತೀರ್ಪಿನ ವಿರುದ್ಧ ಮೇರಿ ಅಸಮಾಧಾನ
ಶನಿವಾರದ ಮೊದಲ ಸೆಮಿಫೈನಲ್‌ನಲ್ಲಿ 3ನೇ ಶ್ರೇಯಾಂಕದ ಮೇರಿ ಕೋಮ… (51 ಕೆ.ಜಿ) ಅವರನ್ನು ಟರ್ಕಿಯ ಬುಸೆನಾಜ್‌ ಕಾಕಿರೊಗುÉ  4-1 ಅಂತರದಿಂದ ಹಿಮ್ಮೆಟ್ಟಿಸಿದರು. ಕಾಕಿರೊಗುÉ ಯುರೋಪಿಯನ್‌ ಚಾಂಪಿಯನ್‌ಶಿಪ್‌ ಹಾಗೂ ಯುರೋಪಿಯನ್‌ ಗೇಮ್ಸ್ ಚಾಂಪಿಯನ್‌ ಕೂಡ ಆಗಿದ್ದಾರೆ. ಆರಂಭಿಕ ಸುತ್ತಿನಲ್ಲಿ ಮೇರಿ ಮುಂದಿದ್ದರೂ ಬಳಿಕ ಮಂಕಾದರು. ಎದುರಾಳಿಯ ಹೊಡೆತಕ್ಕೆ ಪ್ರತಿತಂತ್ರ ರೂಪಿಸುವುದು ಅವರಿಗೆ ಕಠಿಣವಾಗಿ ಪರಿಣಮಿಸಿತು. ಈ ನಡುವೆ ರೆಫ್ರಿ ನೀಡಿದ ತೀರ್ಪು ಕೂಡ ಮೇರಿಗೆ ಸಮಾಧಾನ ತರಲಿಲ್ಲ. ನನಗೆ ಇದರಿಂದ ಬಹಳ ಬೇಸರವಾಗಿದೆ. ನಾನು ಅತ್ಯುತ್ತಮ ರೀತಿಯಲ್ಲೇ ಹೋರಾಡಿದ್ದೇನೆ. ಸೋಲಿಗೆ ನಾನು ಖಂಡಿತ ಅರ್ಹಳಾಗಿರಲಿಲ್ಲ’ ಎಂದು ಮೇರಿ ಪ್ರತಿಕ್ರಿಯಿಸಿದ್ದಾರೆ. ಇದರಿಂದ ನೊಂದ ಅವರು, ಸೆಮಿಫೈನಲ್‌ ವೀಡಿಯೋವನ್ನು ಟ್ವೀಟ್‌ ಮಾಡಿ, ಇದನ್ನು ವಿಶ್ವವೇ ನೋಡಲಿ ಎಂದಿದ್ದಾರೆ.

ತೀರ್ಪನ್ನು ಪುನರ್‌ ಪರಿಶೀಲಿಸಬೇಕೆಂಬ ಮೇರಿ ಕೋಮ್‌ ಮನವಿಯನ್ನು ಅಂತಾರಾಷ್ಟ್ರೀಯ ಬಾಕ್ಸಿಂಗ್‌ ಅಸೋಸಿಯೇಶನ್‌ (ಎಐಬಿಎ) ತಳ್ಳಿಹಾಕಿದೆ. 3-2 ಅಥವಾ 3-1 ಅಂತರವಿದ್ದರಷ್ಟೇ ಇಂಥ ಮನವಿಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಎಐಬಿಎ ತಿಳಿಸಿದೆ.

Advertisement

ಮೇರಿಗೆ ದಾಖಲೆ 8ನೇ ಪದಕ
ಈ ಫ‌ಲಿತಾಂಶದ ಹೊರತಾಗಿಯೂ ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ ಇತಿಹಾಸದÇÉೇ ಅತ್ಯಧಿಕ 8 ಪದಕ ಗೆದ್ದ ದಾಖಲೆಗೆ ಮೇರಿ ಕೋಮ್‌ ಭಾಜನರಾದರು. ಇದರಲ್ಲಿ 6 ಚಿನ್ನ, ಒಂದು ಬೆಳ್ಳಿ, ಒಂದು ಕಂಚು ಸೇರಿದೆ. ಪುರುಷರ ವಿಭಾಗದ ವಿಶ್ವ ಚಾಂಪಿಯನ್‌ಶಿಪ್‌ಗೆ ಹೋಲಿಸಿದರೂ ಮೇರಿ ಕೋಮ್‌ ಅವರೇ ಅಗ್ರಸ್ಥಾನದಲ್ಲಿರುವುದು ಭಾರತದ ಪಾಲಿಗೊಂದು ಹೆಮ್ಮೆ.

Advertisement

Udayavani is now on Telegram. Click here to join our channel and stay updated with the latest news.

Next