Advertisement

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌: ಭಾರತಕ್ಕೆ ಕನಿಷ್ಠ 4 ಬೆಳ್ಳಿ ಖಚಿತ

10:11 PM Mar 23, 2023 | Team Udayavani |

ನವದೆಹಲಿ: ನಿಖತ್‌ ಜರೀನ್‌ ಮತ್ತು ನೀತು ಘಂಘಾಸ್‌ ಅವರು ಸುಲಭ ಗೆಲುವಿನೊಂದಿಗೆ ವನಿತೆಯರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ ಹಂತಕ್ಕೇರಿದ್ದಾರೆ. 50 ಕೆಜಿ ವಿಭಾಗದಲ್ಲಿ ಹಾಲಿ ಚಾಂಪಿಯನ್‌ ನಿಖತ್‌, ರಿಯೊ ಒಲಿಂಪಿಕ್ಸ್‌ ಕಂಚು ವಿಜೇತೆ ಕೊಲಂಬಿಯದ ಇಂಗ್ರಿಟ್‌ ವೆಲೆನ್ಸಿಯಾ ಅವರನ್ನು 5-0 ಅಂತರದಿಂದ ಉರುಳಿಸಿದರು. ತನ್ನ ವೇಗ ಮತ್ತು ತಂತ್ರಗಳಿಂದ ವೆಲೆನ್ಸಿಯಾ ಅವರನ್ನು ಸುಲಭವಾಗಿ ನೆಲಕ್ಕುರುಳಿಸಿದ ನಿಖತ್‌ ಪ್ರಶಸ್ತಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಇನ್ನೊಂದು ಹೆಜ್ಜೆ ಮುಂದೆ ಇಟ್ಟರು. 48 ಕೆಜಿ ವಿಭಾಗದಲ್ಲಿ ನೀತು, ಕಝಕಸ್ತಾನದ ಅಲುವಾ ಬಲ್ಕಿಬೆಕೋವಾ ಅವರನ್ನು 5-2 ಅಂಕಗಳಿಂದ ಮಣಿಸಿದರು. ಇನ್ನು 75 ಕೆಜಿ ವಿಭಾಗದಲ್ಲಿ ಲವಿನಾ ಅವರು ಚೀನಾದ ಲಿ ಖೀಯಾನ್‌ರನ್ನು ಮಣಿಸಿದರು. ಗುರುವಾರ ರಾತ್ರಿಯಷ್ಟೊತ್ತಿಗೆ ಭಾರತಕ್ಕೆ ಮತ್ತೂಂದು ಶುಭಸುದ್ದಿ ಬಂತು. ಸಾವೀತಿ ಬೂರಾ 81 ಕೆಜಿ ವಿಭಾಗದಲ್ಲಿ ಆಸ್ಟ್ರೇಲಿಯದ ಎಮ್ಮಾ ಗ್ರೀನ್‌ಟ್ರೀಯನ್ನು ಮಣಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next