Advertisement
ಇದೇ ಮೊದಲ ಸಲ ವಿಶ್ವ ಚಾಂಪಿ ಯನ್‌ಶಿಪ್‌ನಲ್ಲಿ ಕಣಕ್ಕಿಳಿದ ಜಮುನಾ ಬೋರೊ ಆಲ್ಜೀರಿಯಾದ 5ನೇ ಶ್ರೇಯಾಂಕಿತ ಬಾಕ್ಸರ್ ಔದಾದ್ ಫೌ ಅವರನ್ನು ಮಣಿಸಿದರು. ಫೌ ಆಫ್ರಿಕನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ಸಾಧಕಿಯಾಗಿದ್ದಾರೆ. 3ನೇ ಶ್ರೇಯಾಂಕದ ಲವ್ಲಿನಾ ಬೊರ್ಗೊ ಹೇನ್ ಮೊರೊಕ್ಕೋದ ಔಮಾಯಾ¾ ಬೆಲ್ ಅಬಿಬ್ ವಿರುದ್ಧ 5-0 ಗೆಲುವು ಸಾಧಿಸಿದರು.
ಗುರುವಾರ ನಡೆಯುವ ಕ್ವಾರ್ಟರ್ ಫೈನಲ್ ಕಾಳಗದಲ್ಲಿ ಜಮುನಾ ಬೋರೊ ಜರ್ಮನಿಯ ಉರ್ಸುಲಾ ಗೋತ್ಲಾಬ್ ಅವರನ್ನು ಎದುರಿಸಲಿದ್ದಾರೆ. ದಿನದ ಇನ್ನೊಂದು ಸ್ಪರ್ಧೆಯಲ್ಲಿ ಉರ್ಸುಲಾ ಯುರೋಪಿಯನ್ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತೆ, 4ನೇ ಶ್ರೇಯಾಂಕದ ಬೆಲರೂಸ್ ಎದುರಾಳಿ ಯುಲಿಯಾ ಅಪನಾಸೋವಿಕ್ ವಿರುದ್ಧ 3-2 ಅಂತರದ ಮೇಲುಗೈ ಸಾಧಿಸಿದರು. ಕಳೆದ ಸಲ ಕಂಚಿನ ಪದಕ ಜಯಿಸಿದ್ದ ಲವಿÉನಾ ಬೊರ್ಗೊಹೇನ್ ಪೋಲೆಂಡ್‌ನ 6ನೇ ಶ್ರೇಯಾಂಕದ ಬಾಕ್ಸರ್ ಕ್ಯಾರೋಲಿನಾ ಕೊಸೆjàವ್‌ಸ್ಕಾ ವಿರುದ್ಧ ಸೆಣಸಲಿದ್ದಾರೆ. ಕಳೆದ ವರ್ಷದ ಯುರೋಪಿಯನ್ ಗೇಮ್ಸ್‌ನಲ್ಲಿ ಕೊಸೆjàವ್‌ಸ್ಕಾ ಚಿನ್ನದ ಪದಕ ಜಯಿಸಿದ್ದರು.
Related Articles
ಇವರಿಬ್ಬರ ಮುನ್ನಡೆಯೊಂದಿಗೆ ಭಾರತದ ಒಟ್ಟು 5 ಮಂದಿ ಈ ಪ್ರತಿಷ್ಠಿತ ಕೂಟದ ಕ್ವಾರ್ಟರ್ ಫೈನಲ್ ಪ್ರವೇಶಿಸಿ ದಂತಾಯಿತು. ಉಳಿದ ವರೆಂದರೆ, 6 ಬಾರಿಯ ಚಾಂಪಿಯನ್ ಎಂ.ಸಿ. ಮೇರಿ ಕೋಮ್ (51 ಕೆಜಿ), ಮಂಜುರಾಣಿ (48 ಕೆಜಿ) ಮತ್ತು ಕವಿತಾ ಚಹಲ್ (+81 ಕೆಜಿ).
Advertisement
+81 ಕೆಜಿ ವಿಭಾಗದಲ್ಲಿ ಕವಿತಾ ಚಹಲ್‌ಒಂದೂ ಪಂದ್ಯವಾಡದೆ ನೇರವಾಗಿ ಕ್ವಾ. ಫೈನಲ್ ತಲುಪಿರುವುದು ವಿಶೇಷ. ಅವರ ವಿಭಾಗದಲ್ಲಿ ಹೆಚ್ಚು ಮಂದಿ ಸ್ಪರ್ಧಿಗಳಿಲ್ಲದಿರುವುದೇ ಇದಕ್ಕೆ ಕಾರಣ.