Advertisement

ವೇಗ ಪಡೆಯಲಿದೆ ಜಿಡಿಪಿ

07:30 AM Mar 15, 2018 | |

ನವದೆಹಲಿ: ಭಾರತದ ಅರ್ಥ ವ್ಯವಸ್ಥೆ ಅತ್ಯಂತ ವಿಶ್ವಾಸಾರ್ಹವಾಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ದರ ಶೇ. 6.3ರಷ್ಟು ಆಗಲಿದೆ ಎಂದು ವಿಶ್ವಬ್ಯಾಂಕ್‌ ಹೇಳಿದೆ. 2018-19ನೇ ಸಾಲಿನಲ್ಲಿ ಶೇ.7.3ರಷ್ಟಾಗಲಿದ್ದರೆ, 2019-20ರ ವೇಳೆಗೆ ಶೇ. 7.5 ರ ವೇಗಕ್ಕೆ ಜಿಗಿಯಲಿದೆ ಎಂದು ಹೇಳಿದೆ. ಆರು ತಿಂಗಳಿಗೊಮ್ಮೆ ಪ್ರಕಟವಾಗುವ ವಿಶ್ವ ಬ್ಯಾಂಕ್‌ನ ಆರ್ಥಿಕ ವರದಿಯಲ್ಲಿ ಈ ಅಂಶವನ್ನು ಪ್ರಸ್ತಾಪಿಸಲಾಗಿದೆ. ದೇಶದ ಅರ್ಥ ವ್ಯವಸ್ಥೆ ಶೇ. 8ರ ವೇಗದಲ್ಲಿ ಅಭಿವೃದ್ಧಿ ಸಾಧಿಸಿದರೆ, ಸಾಲ, ಹೂಡಿಕೆ ಮತ್ತು ಇತರ ಹಣಕಾಸು ಚಟುವಟಿಕೆಗಳು ಸರಾಗವಾಗಿ ಸಾಗಲಿವೆ. ಭಾರತದ ಆರ್ಥಿಕತೆಯು ನೋಟು ಅಮಾನ್ಯ ಮತ್ತು ಜಿಎಸ್‌ಟಿ ಆಘಾತದಿಂದ ಚೇತರಿಸಿಕೊಳ್ಳುತ್ತಿದೆ. ಅಲ್ಪಾವಧಿಯಲ್ಲಿ ಈ ಎರಡೂ ಕ್ರಮಗಳು ಬಾರಿ ಆಘಾತ ನೀಡಿದ್ದವು. ಪ್ರಸ್ತುತ ಹಣಕಾಸು ವರ್ಷದ ಏಪ್ರಿಲ್‌-ಜೂನ್‌ ತ್ತೈಮಾಸಿಕದಲ್ಲಿ ಕಳೆದ ಮೂರು ವರ್ಷಗಳಲ್ಲೇ ಕನಿಷ್ಠಕ್ಕೆ ಇಳಿಕೆಯಾಗಿತ್ತು.

Advertisement

ಹಣದುಬ್ಬರ ಇಳಿಕೆ:  ಆಹಾರ ಸಾಮಗ್ರಿಗಳು ಮತ್ತು ತರಕಾರಿಗಳ ಬೆಲೆ ಫೆಬ್ರವರಿಯಲ್ಲಿ ಇಳಿಕೆಯಾಗಿದ್ದರಿಂದ. ಸಗಟು ಹಣದುಬ್ಬರ ಶೇ. 2.48ಕ್ಕೆ ಇಳಿಕೆಯಾಗಿದೆ. ಇದು ಕಳೆದ ಏಳು ತಿಂಗಳಲ್ಲೇ ಅತ್ಯಂತ ಕಡಿಮೆಯದ್ದಾಗಿದೆ. ಜನವರಿಯಲ್ಲಿ ಸಗಟು ಹಣದುಬ್ಬರ ಸೂಚ್ಯಂಕವು ಶೇ. 5.51ರಲ್ಲಿ ಇತ್ತು. ಕಳೆದ ವರ್ಷದ ಜುಲೈನಲ್ಲಿ ಇದು ಶೇ. 1.88 ಆಗಿತ್ತು. 

ಈರುಳ್ಳಿ ಬೆಲೆ ಏರಿಕೆ ಗತಿ ನಿಧಾನಗೊಂಡಿದ್ದರೆ, ಆಲೂಗಡ್ಡೆ ಬೆಲೆ ಭಾರಿ ಇಳಿಕೆಯಾಗಿದೆ. ಧಾನ್ಯಗಳು ಹಾಗೂ ಗೋಧಿ ಹಣದುಬ್ಬರ ಋಣಾತ್ಮಕ ಅಂಕಿಗಳಲ್ಲೇ ಮುಂದುವರಿದಿದೆ. ಅಲ್ಲದೆ ಮೊಟ್ಟೆ, ಮೀನು ಮತ್ತು ಮಾಂಸದ ಹಣದುಬ್ಬರವೂ ಋಣಾತ್ಮಕವಾಗಿಯೇ ಇದೆ.

Advertisement

Udayavani is now on Telegram. Click here to join our channel and stay updated with the latest news.

Next