Advertisement

ಕೋವಿಡ್ ವೈರಸ್ ತಡೆಗಟ್ಟಲು ವಿಶ್ವಸಂಸ್ಥೆಯಿಂದ ಭಾರತಕ್ಕೆ ಒಂದು ಬಿಲಿಯನ್ ಡಾಲರ್ ಆರ್ಥಿಕ ನೆರವು

09:04 AM Apr 04, 2020 | Nagendra Trasi |

ವಾಷಿಂಗ್ಟನ್:ಮಾರಣಾಂತಿಕ ಕೋವಿಡ್ 19 ವೈರಸ್ ತಡೆಗಟ್ಟಲು ವಿಶ್ವಬ್ಯಾಂಕ್ ತುರ್ತಾಗಿ ಭಾರತಕ್ಕೆ 1 ಬಿಲಿಯನ್ (7,600ಕೋಟಿ) ಅಮೆರಿಕನ್ ಡಾಲರ್ ಆರ್ಥಿಕ ನೆರವು ನೀಡಲು ಅನುಮತಿ ನೀಡಿದೆ. ಭಾರತದಲ್ಲಿ ಕೋವಿಡ್ 19 ವೈರಸ್ ಗೆ 53 ಮಂದಿ ಬಲಿಯಾಗಿದ್ದು, 2000 ಜನರು ಸೋಂಕು ಪೀಡಿತರಾಗಿದ್ದಾರೆ.

Advertisement

ಕೋವಿಡ್ 19 ಸೋಂಕು ವಿರುದ್ಧ ಹೋರಾಡಲು ವಿಶ್ವಬ್ಯಾಂಕ್ ಮೊದಲ ಆರ್ಥಿಕ ನೆರವಿನ ಪಟ್ಟಿಯಲ್ಲಿ 1.9 ಬಿಲಿಯನ್ ಡಾಲರ್ ಹಣ ನಿಗದಿಪಡಿಸಿದ್ದು, 25 ದೇಶಗಳಿಗೆ ಧನ ಸಹಾಯ ನೀಡುವುದಾಗಿ ತೀರ್ಮಾನಿಸಿತ್ತು. ಅಲ್ಲದೇ ನಂತರ 40ಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್ ವಿರುದ್ಧ ಕ್ಷಿಪ್ರವಾಗಿ ಕಾರ್ಯಾಚರಣೆ ಮಾಡಲು ಆರ್ಥಿಕ ನೆರವು ನೀಡುವುದಾಗಿ ವಿಶ್ವಬ್ಯಾಂಕ್ ತಿಳಿಸಿದೆ.

ತುರ್ತು ಆರ್ಥಿಕ ನೆರವಿನಲ್ಲಿ ಭಾರತಕ್ಕೆ ಹೆಚ್ಚಿನ ಪಾಲು (ಒಂದು ಬಿಲಿಯನ್ ಅಮೆರಿಕನ್ ಡಾಲರ್) ಸಂದಾಯವಾದಂತಾಗಿದೆ. ಭಾರತಕ್ಕೆ ದೊರತ ಒಂದು ಬಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕ ಸಹಾಯದಲ್ಲಿ ಕೋವಿಡ್ ಸೋಂಕಿತರ ಪತ್ತೆ, ಸ್ಕ್ರೀನಿಂಗ್ ಹಾಗೂ ಲ್ಯಾಬೋರೇಟರಿ, ವೈಯಕ್ತಿಕ ರಕ್ಷಣಾ ಉಪಕರಣ, ನೂತನ ಐಸೋಲೇಶನ್ ವಾರ್ಡ್ ಗಳ ನಿರ್ಮಾಣಕ್ಕೆ ಸಹಾಯಕವಾಗಲಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next