Advertisement

ತೇಜಿಂದರ್‌ ತೂರ್‌, ಜಿನ್ಸನ್‌ ಜಾನ್ಸನ್‌ ವಿಫ‌ಲ

08:23 PM Oct 04, 2019 | Team Udayavani |

ದೋಹಾ: ಏಶ್ಯನ್‌ ಗೇಮ್ಸ್‌ನಲ್ಲಿ ಬಂಗಾರದ ಪದಕ ಗೆದ್ದ ಶಾಟ್‌ಪುಟರ್‌ ತೇಜಿಂದರ್‌ ಪಾಲ್‌ ಸಿಂಗ್‌ ತೂರ್‌ ಮತ್ತು 1,500 ಮೀ. ಓಟಗಾರ ಜಿನ್ಸನ್‌ ಜಾನ್ಸನ್‌ ವಿಶ್ವ ಆ್ಯತ್ಲೆಟಿಕ್ಸ್‌ ಕೂಟದ ಅರ್ಹತಾ ಸುತ್ತಿನಲ್ಲೇ ವೈಫ‌ಲ್ಯ ಅನುಭವಿಸಿ ಹೊರಬಿದ್ದಿದ್ದಾರೆ.

Advertisement

ಶಾಟ್‌ಪುಟ್‌ ಅರ್ಹತಾ ಸುತ್ತಿನಲ್ಲಿ ತೇಜಿಂದರ್‌, 20.43 ಮೀ. ದೂರ ಎಸೆದು ಪ್ರಸಕ್ತ ಋತುವಿನಲ್ಲೇ ಅತ್ಯುತ್ತಮ ಸಾಧನೆಗೈದರೂ ಫೈನಲ್‌ ಪ್ರವೇಶಿಸಲು ಸಫ‌ಲರಾಗಲಿಲ್ಲ. ಗ್ರೂಪ್‌ “ಬಿ’ ಸುತ್ತಿನಲ್ಲಿ ಅವರು 8ನೇ, ಒಟ್ಟಾರೆ 18ನೇ ಸ್ಥಾನಿಯಾಗಿ ನಿರಾಸೆ ಮೂಡಿಸಿದರು. ಒಟ್ಟು 34 ಸ್ಪರ್ಧಿಗಳು ಅರ್ಹತಾ ಸುತ್ತಿನಲ್ಲಿದ್ದರು. ಹಾಲಿ ವಿಶ್ವ ಚಾಂಪಿಯನ್‌, ರಿಯೋ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ನ್ಯೂಜಿಲ್ಯಾಂಡಿನ ಥಾಮಸ್‌ ವಾಲ್ಶ್ ಫೈನಲಿಸ್ಟ್‌ಗಳಲ್ಲಿ ಅಗ್ರಸ್ಥಾನಿಯಾಗಿ ಮೂಡಿಬಂದರು (21.92 ಮೀ.).

ತೇಜಿಂದರ್‌ 2018ರ ಜಕಾರ್ತಾ ಏಶ್ಯಾಡ್‌ನ‌ಲ್ಲಿ 20.75 ಮೀ. ದೂರದ ಸಾಧನೆ ಯೊಂದಿಗೆ ಚಿನ್ನದ ಪದಕ ಜಯಿಸಿದ್ದರು. ಕಳೆದ ಎಪ್ರಿಲ್‌ನಲ್ಲಿ ಇಲ್ಲೇ ನಡೆದ ಏಶ್ಯನ್‌ ಚಾಂಪಿಯನ್‌ಶಿಪ್‌ನಲ್ಲೂ ಬಂಗಾರಕ್ಕೆ ಮುತ್ತಿಟ್ಟಿದ್ದರು (20.22 ಮೀ.).

ಜಿನ್ಸನ್‌ ಜಾನ್ಸನ್‌ ಮೊದಲ ಸುತ್ತಿನ ಹೀಟ್ಸ್‌ನಲ್ಲಿ 39.86 ಸೆಕೆಂಡ್‌ನೊಂದಿಗೆ 10ನೇ ಸ್ಥಾನಕ್ಕೆ ಕುಸಿದರು. 43 ಮಂದಿ ಓಟಗಾರರಲ್ಲಿ ಅವರಿಗೆ ಲಭಿಸಿದ್ದು 34ನೇ ಸ್ಥಾನ.

Advertisement

Udayavani is now on Telegram. Click here to join our channel and stay updated with the latest news.

Next