Advertisement
ಎಚ್‌ಐವಿ ಸೋಂಕು ಮನುಕುಲಕ್ಕೆ ಬಂದೊದಗಿದ ವಿಪತ್ತು. ಎಚ್‌ಐವಿಸೋಂಕನ್ನು ಬರದಂತೆ ತಡೆಯಲು ಯಾವ ಲಸಿಕೆಯೂ ಇಲ್ಲ. ಪೂರ್ಣಮಟ್ಟದಲ್ಲಿ ಗುಣಪಡಿಸುವ ಔಷಧಿಗಳೂ ಇಲ್ಲ.ಸಾರ್ವಜನಿಕರಲ್ಲಿ ಅರಿವು ಮೂಡಿಸುವುದೊಂದೇ ಈಸೋಂಕಿನ ತಡೆಗಿರುವ ಏಕೈಕ ಮಾರ್ಗ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಏಡ್ಸ್ ಸೋಂಕಿನ ಬಗ್ಗೆ ಜನಜಾಗೃತಿ ಮೂಡಿಸಲು ಡಿ. 1ರಂದು ವಿಶ್ವ ಏಡ್ಸ್ ದಿನಾಚರಣೆ ಹಮ್ಮಿಕೊಂಡು ಜಾಗೃತಿ ಮೂಡಿಸಲಾಗಿತು.ಏಡ್ಸ್ ರೋಗದ ಲಕ್ಷಣ: ಈ ರೋಗಕ್ಕೆ ನಿರ್ದಿಷ್ಠವಾದ ಚಿಹ್ನೆಗಳಿಲ್ಲ. ಆದರೆ ಬಹುಮಟ್ಟಿಗೆ ಯಾವುದೇ ಕಾರಣವಿಲ್ಲದೆ ಒಂದು ತಿಂಗಳ ಅವಧಿಯಲ್ಲಿ ಶೇ.10ಕ್ಕಿಂತಲೂ ಹೆಚ್ಚು ಶರೀರದ ತೂಕ ಕಡಿಮೆಯಾಗುತ್ತದೆ.ಯಾವುದೇ ಚಿಕಿತ್ಸೆಗೆ ಗುಣವಾಗದೇ ಒಂದು ತಿಂಗಳಿಗಿಂತಲೂ ಹೆಚ್ಚು ಕಂಡು ಬರುವ ಜ್ವರ ಹಾಗೂಬೇಧಿ ಏಡ್ಸ್ ರೋಗದ ಮುಖ್ಯ ಲಕ್ಷಣಗಳಾಗಿವೆ. ಈ ರೋಗ ಅಸುರಕ್ಷಿತ ಲೈಂಗಿಕ ಕ್ರಿಯೆ, ಸೋಂಕಿರುವ ವ್ಯಕ್ತಿಯ ರಕ್ತ ಪಡೆಯುವುದು, ಸೋಂಕಿರುವ ವ್ಯಕ್ತಿಯು ಉಪಯೋಗಿಸಿದ ಸಿರಿಂಜ್ ಸೂಜಿ ಮತ್ತು ಉಪಕರಣಗಳನ್ನು ಸಂಸ್ಕರಿಸದೆ ಬಳಸುವುದು, ಸೋಂಕಿರುವ ತಾಯಿಯುಮಗುವಿಗೆ ಜನ್ಮ ನೀಡುವುದರಿಂದ ಎಚ್ ಐವಿ ಸೋಂಕು ಹರಡುತ್ತದೆ.
Related Articles
Advertisement
ಕಳೆದ 5 ವರ್ಷಗಳಲ್ಲಿ ಸೋಂಕು ಇಳಿಕೆ : ಜಿಲ್ಲೆಯಲ್ಲಿ ಒಟ್ಟು 29 ಲಕ್ಷ ಜನಸಂಖ್ಯೆಯಿದ್ದು, 2015ರ ಎಚ್.ಐ.ವಿ ಸೆಂಟಿನಲ್ ಸರ್ವೆಲೆನ್ಸ್‌ಪ್ರಕಾರ ಎಚ್.ಐ.ವಿ ಪ್ರಿವಿಲೆನ್ಸ್ ರೇಟ್ ಶೇ.0.25 ರಷ್ಟಿತ್ತು. ಕಳೆದ 5 ವರ್ಷದ ಅಂಕಿ ಅಂಶಗಳನ್ನು ಗಮನಿಸಿದರೆ ಜಿಲ್ಲೆಯಲ್ಲಿ ಏಡ್ಸ್ ಪೀಡಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿ ಶೇ.1 ರಷ್ಟು ಆಗಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸನತ್ ತಿಳಿಸಿದ್ದಾರೆ.
ಕಳೆದ ಏಳು ವರ್ಷದ ಅಂಕಿ ಅಂಶವನ್ನು ಗಮನಿಸಿದರೆ 2014-15ರಲ್ಲಿ ಎಚ್.ಐ.ವಿ ಸಾಮಾನ್ಯ ಪರೀಕ್ಷೆ ಮಾಡಿಸಿ ಕೊಂಡವರು 87,916 ಅದರಲ್ಲಿ ಸೋಂಕಿತರು-942, ಪರೀಕ್ಷೆಗೆ ಒಳಪಟ್ಟ ಗರ್ಭಿಣಿಯರು 54,159, ಅದರಲ್ಲಿ ಏಡ್ಸ್ ಸೋಂಕಿತರು 45, 2015-16ರಲ್ಲಿ ಸಾಮಾನ್ಯ ಪರೀಕ್ಷೆ ಮಾಡಿಸಿ ಕೊಂಡವರು 81,063 ಅದರಲ್ಲಿ ಸೋಂಕಿತರು-887, ಪರೀಕ್ಷೆಗೆ ಒಳಪಟ್ಟ ಗರ್ಭಿಣಿಯರು 44,442, ಅದರಲ್ಲಿ ಏಡ್ಸ್ ಸೋಂಕಿತರು 44, 2016-17 ರಲ್ಲಿ ಸಾಮಾನ್ಯ ಪರೀಕ್ಷೆ ಮಾಡಿಸಿ ಕೊಂಡವರು 88,751 ಅದರಲ್ಲಿ ಸೋಂಕಿತರು-780, ಪರೀಕ್ಷೆಗೆ ಒಳಪಟ್ಟಗರ್ಭಿಣಿಯರು 47,374, ಅದರಲ್ಲಿ ಏಡ್ಸ್ ಸೋಂಕಿತರು 25, 2017-18ರಲ್ಲಿ ಸಾಮಾನ್ಯ ಪರೀಕ್ಷೆ ಮಾಡಿಸಿ ಕೊಂಡವರು 96,469 ಅದರಲ್ಲಿಸೋಂಕಿತರು-769, ಪರೀಕ್ಷೆಗೆ ಒಳಪಟ್ಟ ಗರ್ಭಿಣಿಯರು 46,760, ಅದರಲ್ಲಿ ಏಡ್ಸ್
ಸೋಂಕಿತರು 44, 2017-18 ಸಾಮಾನ್ಯ ಪರೀಕ್ಷೆ ಮಾಡಿಸಿಕೊಂಡವರು 96,469 ಅದರಲ್ಲಿ ಸೋಂಕಿತರು 760 ಪರೀಕ್ಷೆಗೆ ಒಳಪಟ್ಟ
ಗ ರ್ಭಿಣಿಯರು 46,760, ಅದರಲ್ಲಿ ಏಡ್ಸ್ ಸೋಂಕಿತರು 47 ಏಡ್ಸ್ ಸೋಂಕಿತರು,2018-19 ಸಾಮಾನ್ಯ ಪರೀಕ್ಷೆ ಮಾಡಿಸಿಕೊಂಡವರು 1,04,017 ಅದರಲ್ಲಿ ಸೋಂಕಿತರು 711, ಪರೀಕ್ಷೆಗೆ ಒಟ್ಟು ಗರ್ಭಿಣಿಯರು 50,754, ಅದರಲ್ಲಿ ಏಡ್ಸ್ ಸೋಂಕಿತರು ರು 29 ಏಡ್ಸ್‌ಸೋಂಕಿತರು .2020 ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ ಸಾಮಾನ್ಯ ಪರೀಕ್ಷೆ ಮಾಡಿಸಿಕೊಂಡವರು 33,136 ಅದರಲ್ಲಿ ಸೋಂಕಿತರು 198 ಪರೀಕ್ಷೆಗೆ ಒಳ ಪಟ್ಟ ಗರ್ಭಿಣಿಯರು 27,988, ಅದರಲ್ಲಿ ಏಡ್ಸ್ ಸೋಂಕಿತರು 19 ಮಾತ್ರ ಏಡ್ಸ್ ಸೋಂಕಿತರು ಇದ್ದಾರೆ. ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.
2008 ರಿಂದ 2020 ರ ವರೆಗೆ 13,000 ಏಡ್ಸ್ ಸೋಂಕಿತರು ಕಂಡು ಬಂದಿದ್ದು ಅದರಲ್ಲಿ 6,954 ಜನರು ಚಿಕಿತ್ಸೆ ಪಡೆದಿದ್ದಾರೆ, 4500 ಜನರು ನಿಧನ ಹೊಂದಿದ್ದಾರೆ ಜಿಲ್ಲೆಯನ್ನು 2030 ರೊಳಗೆ ಸಂಪೂರ್ಣಏಡ್ಸ್ ಮುಕ್ತ ಜಿಲ್ಲೆಯನ್ನಾಗಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ. ಡಾ.ಸನತ್ ತಿಳಿಸಿದ್ದಾರೆ.
-ಚಿ.ನಿ.ಪುರುಷೋತ್ತಮ್