Advertisement

ಎಚ್‌ಐವಿ ಸೋಂಕಿತರಿಗೆ ಸರ್ಕಾರಿ ಸೌಲಭ್ಯ ತಲುಪಿಸಿ

01:34 PM Dec 02, 2020 | Suhan S |

ಕೋಲಾರ: ಎಚ್‌ಐವಿ ಸೋಂಕು ಪೀಡಿತರಿಗೆ ಮಾನಸಿಕ ಬೆಂಬಲ ನೀಡಿ ನಮ್ಮ ಕುಟುಂಬ ಸದಸ್ಯರ ರೀತಿಯಲ್ಲಿ ವರ್ತಿಸಿ ಅವರಿಗೆ ಸರ್ಕಾರದ ಸೌಲಭ್ಯಗಳು ನೇರವಾಗಿ ತಲುಪುವಂತಾಗಬೇಕು ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ಎಂ.ಎಲ್‌. ರಘುನಾಥ್‌ ತಿಳಿಸಿದರು.

Advertisement

ನಗರದ ಹೊರ ವಲಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಏಡ್ಸ್‌ ನಿಯಂತ್ರಣ ಘಟಕ ವತಿಯಿಂದ ವಿಶ್ವ ಏಡ್ಸ್‌ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ನೀಡಿ: ಮನುಷ್ಯನ ಜೀವಿತಾವಧಿಯಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿದ್ದು, ಅದರಂತೆಯೇ ಎಚ್‌ಐವಿ, ಕೋವಿಡ್‌ ಕಾಣಿಸಿಕೊಳ್ಳುತ್ತಿವೆ. ಸೋಂಕಿತರನ್ನು ಕೀಳಾಗಿ ಕಾಣದೇ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದರು.

ಹಿಂದಿನಿಂದಲೂ ನಿಸರ್ಗದ ವಿರುದ್ಧ ದಿಕ್ಕಿನಲ್ಲಿ ನಡೆದಿದ್ದರಿಂದ ಸಾಕಷ್ಟು ಪರಿಣಾಮಗಳು ಉಂಟಾಗಿವೆ. ಮರಗಳ ನಾಶ, ನೀರಿನ ಮೂಲಗಳ ನಾಶದಿಂದ ಪ್ರಕೃತಿ ವಿಕೋಪಗಳಾಗಿವೆ. ಆರೋಗ್ಯಕರ ಆಹಾರಪದ್ಧತಿಗಳು ಪ್ರಾಚೀನ ಕಾಲದ ಸಂಸ್ಕೃತ ಪದ್ಧತಿಗಳು ನಾಶವಾಗಿ ಅನೇಕ ರೋಗಗಳುಬಂದಿವೆ. ಮನುಷ್ಯ ಜವಾಬ್ದಾರಿಯಿಂದ ವರ್ತಿಸಿ ಇಂತಹ ರೋಗಗಳನ್ನು ಶಾಶ್ವತವಾಗಿ ನಾಶ ಮಾಡಬೇಕಾಗಿದೆ ಎಂದರು.

ಏಡ್ಸ್‌ ಬಗ್ಗೆ ಜನರಲ್ಲಿ ಬೇರೂರಿರುವ ತಪ್ಪು ಕಲ್ಪನೆ ತೊಡೆದು ಹಾಕಬೇಕು. ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಿಗೆಜಾಗೃತಿಮೂಡಿಸ ಬೇಕು. ಎಚ್‌ಐವಿ ಸೋಂಕಿತರಿಗೆ ಸರ್ಕಾರದ ಸೌಲಭ್ಯಗಳು ಮತ್ತು ಯೋಜನೆಗಳ ಅರಿವು ಮೂಡಿಸಬೇಕು. ಜತೆಗೆ ಅವರಿಗೆ ಸಕಾಲದಲ್ಲಿ ಸೌಲಭ್ಯ ತಲುಪಿಸಬೇಕು ಎಂದು ಸೂಚಿಸಿದರು.

Advertisement

ಅರಿವು ಮೂಡಿಸುವುದು ಮುಖ್ಯ :

ಜಿಲ್ಲಾ ಏಡ್ಸ್‌ ನಿಯಂತ್ರಣಾಕಾರಿ ಡಾ.ಎಂ.ಜಗದೀಶ್‌ ಮಾತನಾಡಿ, ಎಚ್‌ಐವಿ ಸೋಂಕು ಹರಡುವ ವಿಧಾನಗಳ ಬಗ್ಗೆ ಅರಿವು ಮೂಡಿಸುವುದು ಮುಖ್ಯವಾಗಿದೆ. ಜಾಗತಿಕವಾಗಿ ಭಾರತ ಸೇರಿದಂತೆ ವಿಶ್ವವೇ ಆರೋಗ್ಯ ವ್ಯವಸ್ಥೆಗೆ ಒತ್ತು ನೀಡುತ್ತಿದೆ. ಎಚ್‌ಐವಿ ಸೋಂಕು ಪೀಡಿತರು ಹಲವು ಸಂಕಟ ಅನುಭವಿಸುತ್ತಿದ್ದಾರೆ. ಎಚ್‌ಐವಿ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು. ಅಸುರಕ್ಷಿತ ಲೈಂಗಿಕತೆ, ಪರೀಕ್ಷಿಸದ ರಕ್ತ ಸರಬರಾಜು, ಸಂಸ್ಕರಿಸದ ಅಥವಾ ಉಪಯೋಗಿಸಿದ ಸಿರಂಜ್‌ ಬಳಕೆ ಹಾಗೂ ಸೋಂಕಿತ ತಾಯಿಯಿಂದ ಮಗುವಿಗೆ ಎಚ್‌ಐವಿ ಸೋಂಕು ಹರಡುತ್ತದೆ.ಕುಷ್ಠರೋಗದ ಬಗ್ಗೆ ಪತ್ತೆ ಹಚ್ಚಲು60 ಸಾವಿರ ಮನೆಗಳಿಗೆ ಭೇಟಿ ನೀಡಲಿದ್ದು, ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next