Advertisement

Elephant ತುಳಿತದಿಂದ ಜೀವ ಹಾನಿ ತಡೆಗೆ ಕಾರ್ಯಾಗಾರ

12:33 AM Jul 03, 2024 | Team Udayavani |

ಬಂಟ್ವಾಳ: ಮಾನವ-ಪ್ರಾಣಿ ಸಂಘರ್ಷದ ಭಾಗವಾಗಿ ಆನೆ ತುಳಿತ ದಿಂದ ಸಾಕಷ್ಟು ಮಂದಿ ಜೀವ ಕಳೆದುಕೊಂಡಿದ್ದು, ಇದರ ಶಾಶ್ವತ ತಡೆಯ ಜತೆಗೆ ವನ್ಯಜೀವಿ, ಅರಣ್ಯ ಸಂರಕ್ಷಣೆಯ ಹಿನ್ನೆಲೆಯಲ್ಲಿ ಆನೆಯ ಚಲನ-ವಲನಗಳನ್ನು ಅಧ್ಯಯನ ಮಾಡಿರುವ ತಜ್ಞರನ್ನು ಕರೆಸಿ ಆಗಸ್ಟ್‌ನಲ್ಲಿ ಅಂತಾರಾಷ್ಟ್ರೀಯ ಕಾರ್ಯಾಗಾರವನ್ನು ನಡೆಸುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯಿಂದ ಸಾಮಾಜಿಕ ಅರಣ್ಯೀದಡಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ರಾಜ್ಯಾದ್ಯಂತ ದಶ ಲಕ್ಷ ಗಿಡಗಳ ನಾಟಿ ಕಾರ್ಯಕ್ರಮಕ್ಕೆ ಮಂಗಳವಾರ ಬಂಟ್ವಾಳದ ಆಲಂ ಪುರಿ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನದಲ್ಲಿ ಚಾಲನೆ ನೀಡಿ ಮಾತನಾಡಿದರು.

ರಾಜ್ಯದಲ್ಲಿ ಸುಮಾರು 65 ಮಂದಿ ವನ್ಯಜೀವಿಗಳಿಂದ ಪ್ರಾಣ ಕಳೆದು ಕೊಂಡಿದ್ದು, ಆನೆ ತುಳಿತದಿಂದಲೇ ಹೆಚ್ಚಿನ ಸಾವು ಸಂಭವಿಸಿದೆ. ಪ್ರಾಣಿಗಳು ನಾಡಿಗೆ ಬರದಂತೆ ರೈಲ್ವೇ ಬೇಲಿ, ಸೋಲಾರ್‌ ಫೆನ್ಸಿಂಗ್‌ ಹಾಕಿದರೂಪ್ರಯೋಜನ ವಾಗಿಲ್ಲ. ಹೀಗಾಗಿ ಕಾರ್ಯಾಗಾರದ ಮೂಲಕ ಆನೆಗಳ ಮಾನ ಸಿಕತೆಯನ್ನು ತಿಳಿಯಲಾಗುವುದು ಎಂದರು.

ಪ್ರಸ್ತುತ ಅರಣ್ಯ ಅಭಿವೃದ್ಧಿ ಅನಿ ವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಹೆಗ್ಗಡೆಯವರು ನಾಡಿಗೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ತಮ್ಮ ರಾಜ್ಯ ಸಭಾ ನಿಧಿಯಿಂದಲೂ ಅನುದಾನ ನೀಡಿ ಬೀದರ್‌ ಜಿಲ್ಲೆಯ ಹಾಲು ಉತ್ಪಾ ದನೆ ಹೆಚ್ಚಳಕ್ಕೆ ಕಾರಣರಾಗಿದ್ದಾರೆ ಎಂದರು.

ಸಸಿ ವಿತರಿಸಿದ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಮಾತನಾಡಿ, ಅರಣ್ಯ ಇಲಾಖೆಯ ಕಾರ್ಯವನ್ನು ಗ್ರಾಮಾಭಿವೃದ್ಧಿ ಯೋಜನೆ ಮಾಡು ತ್ತಿದ್ದು, 50 ಲಕ್ಷ ಮಂದಿಯ ದೊಡ್ಡ ತಂಡ ಇದರಲ್ಲಿ ತೊಡಗಿದೆ ಎಂದರು.

Advertisement

ಪುತ್ತೂರು ನರಿಮೊಗರಿನ ಅವಿನಾಶ್‌ ಕೊಡಂಕಿರಿ ಅವರಿಗೆ ಅರಣ್ಯ ಮಿತ್ರ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಪ್ರಶಸ್ತಿ ವಿತರಿಸಿದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಅರಣ್ಯ ಇಲಾಖೆಯ ಸಿಎಸ್‌ಆರ್‌ ನಿಧಿಯನ್ನು ಬಳಸಿ ಆಲಂಪುರಿ ಉದ್ಯಾನವನ್ನು ಇನ್ನ ಷ್ಟು ಅಭಿವೃದ್ಧಿ ಪಡಿಸಬೇಕು ಎಂದರು.

ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಡಿ.ಎಸ್‌.ಮಮತಾ ಗಟ್ಟಿ, ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕಮಲಾ ಕರಿಕಾಲನ್‌, ಅರಣ್ಯ ಇಲಾಖೆ ಮಂಗಳೂರು ವೃತ್ತ ಸಿಸಿಎಫ್‌ ಡಾ| ವಿ.ಕರಿಕಾಲನ್‌, ಡಿಸಿಎಫ್‌ ಆಂಟೋನಿ ಮರಿಯಪ್ಪ ವೈ.ಕೆ., ಎಸಿಎಫ್‌ ಪಿ.ಶ್ರೀಧರ್‌, ವನ್ಯಜೀವಿ ವಿಭಾಗದ ಶಿವರಾಮ ಬಾಬು, ಬಂಟ್ವಾಳ ವಲಯ ಅರಣ್ಯಾಧಿಕಾರಿ ಪ್ರಫುಲ್‌ ಶೆಟ್ಟಿ, ಕಾವಳಪಡೂರು ಗ್ರಾ.ಪಂ.ಅಧ್ಯಕ್ಷ ಲಕ್ಷ್ಮೀನಾರಾಯಣ ಶರ್ಮ ಮತ್ತಿತರರು ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಮುಂದಿನ ಜನಾಂಗಕ್ಕಾಗಿ ಈಗಲೇ ಗಿಡಗಳನ್ನು ಬೆಳೆಸುವ ಕಾರ್ಯವಾಗಬೇಕಿದೆ. ಇರುವ ಗಿಡಗಳ ರಕ್ಷಣೆಗೆ ಮೊದಲು ಆದ್ಯತೆ ನೀಡಬೇಕು. ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಈಗಾಗಲೇ ಲಕ್ಷಾಂತರ ಗಿಡಗಳ ನಾಟಿ ನಡೆದಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಗೇರು ಬೀಜ ಗಿಡಗಳನ್ನೂ ನೆಟ್ಟಿದ್ದೇವೆ. ಸುಮಾರು 600 ಕೆರೆಗಳ ಹೂಳೆತ್ತುವಿಕೆ ನಡೆದಿ ದ್ದು, 100 ದಿನಗಳಲ್ಲಿ 100 ಕೆರೆಗಳ ಹೂಳು ತೆಗೆಯುವ ಕಾರ್ಯ ನಡೆದಿ ದೆ. ಗಿಡ ನಾಟಿಯಲ್ಲಿ ಕ್ರಾಂತಿ ಮಾಡಿದ ಸಾಲು ಮರದ ತಿಮ್ಮಕ್ಕ ಅವರ ಜೀವನೋ ಪಾಯಕ್ಕೆ ಪ್ರತಿ ತಿಂಗಳು 7 ಸಾವಿರ ರೂ. ನೀಡಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next