Advertisement

ಖಾಸಗಿ ಕ್ಲಿನಿಕ್‌ ವೈದ್ಯರಿಗೆ ಕಾರ್ಯಾಗಾರ

05:21 PM Apr 11, 2020 | Suhan S |

ಪಿರಿಯಾಪಟ್ಟಣ: ತಾಲೂಕು ಆಡಳಿತ ಭವನದಲ್ಲಿ ಶುಕ್ರವಾರ ಸಾರ್ವಜನಿಕ ಆರೋಗ್ಯ ಇಲಾಖೆಯಿಂದ ಖಾಸಗಿ ವೈದ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಕೋವಿಡ್ 19 ಕುರಿತ ಕಾರ್ಯಾಗಾರ ನಡೆಯಿತು.

Advertisement

ವೈದ್ಯಾಧಿಕಾರಿ ಡಾ.ರವಿಕುಮಾರ್‌, ಕೋವಿಡ್ 19 ಹರಡದಂತೆ ಸಾರ್ವಜನಿಕರು ಮುಂಜಾಗ್ರತೆ ಕ್ರಮ ವಹಿಸಬೇಕು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಕೊರೊನಾ ಲಕ್ಷಣಗಳು, ಅನುಸರಿಸಬೇಕಾದ ಮಾರ್ಗಗಳ ಮಾಹಿತಿ ನೀಡಬೇಕು ಎಂದರು. ಶಾಸಕ ಕೆ.ಮಹದೇವ್‌, ತಹಶೀಲ್ದಾರ್‌ ಶ್ವೇತಾ ಎನ್‌ ರವೀಂದ್ರ, ತಾಲೂಕು ಆರೋಗ್ಯಾಧಿಕಾರಿ ಡಾ.ನಾಗೇಶ್‌, ಹಿರಿಯ ಆರೋಗ್ಯ ನಿರೀಕ್ಷಕ ಕೆ.ಆರ್‌.ಪ್ರಕಾಶ್‌, ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಲತಾ, ವೈದ್ಯ ರಾದ ಡಾ.ಪ್ರಕಾಶ್‌ ಬಾಬುರಾವ್‌, ಡಾ.ಚಂದ್ರ ಶೇಖರ್‌, ಡಾ.ಮಹದೇವಸ್ವಾಮಿ, ಡಾ.ಬಸವರಾಜು, ಡಾ.ಜಾಧವ್‌, ಸುಬ್ರಹ್ಮಣ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next