ಆಪ್ತ ಕಾರ್ಯದರ್ಶಿಗಳಿಗೆ ಆಯೋಜಿಸಲಾಗಿದ್ದ ಕಾರ್ಯಾಗಾರಕ್ಕೆ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಚಾಲನೆ ನೀಡಿದರು.
Advertisement
ಬಹಳಷ್ಟು ಜನಪ್ರತಿನಿಧಿಗಳು ಆಪ್ತ ಸಹಾಯಕರ ಮೇಲೆ ನಂಬಿಕೆಯಿಟ್ಟು ಕಡತಗಳು, ದಾಖಲೆ, ಪತ್ರಗಳಿಗೆ ಸಹಿ ಮಾಡುತ್ತಾರೆ. ಹಾಗಾಗಿ ನಂಬಿಕೆ ಉಳಿಸಿಕೊಂಡು ಹೋಗುವ ಜತೆಗೆ ಜನಪ್ರತಿನಿಧಿಗಳ ವರ್ಚಸ್ಸು ಹೆಚ್ಚಿಸುವ ರೀತಿಯಲ್ಲಿ ಆಪ್ತ ಸಹಾಯಕರು ಕಾರ್ಯ ನಿರ್ವಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು. ಕಾರ್ಯಾಗಾರದಲ್ಲಿ ಜನಪ್ರನಿಧಿ ಗಳು ಹಾಗೂ ಸಾರ್ವಜನಿಕರು, ಕಾರ್ಯಕರ್ತರೊಂದಿಗೆ ಸಂಪರ್ಕ, ಸ್ಪಂದನೆ, ಸೌಜನ್ಯದ ನಡವಳಿಕೆ, ಸಂಸದರು, ಶಾಸಕರಾಗಿ ಏಕೆ ಗೆಲ್ಲಬೇಕು, ಅವರಕಾರ್ಯ ಜವಾಬ್ದಾರಿಗಳೇನು, ಪಕ್ಷದ ಸಿದ್ಧಾಂತ, ಕಾರ್ಯಯೋಜನೆ, ಆದ್ಯತೆ ಇತರೆ ವಿಚಾರಗಳ ಬಗ್ಗೆ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಯಿತು. ಜತೆಗೆ ವ್ಯಕ್ತಿತ್ವ ವಿಕಸನ, ಕೌಶಲ್ಯ ತರಬೇತಿ, ಮಾಧ್ಯಮ ನಿರ್ವಹಣೆ ಬಗ್ಗೆಯೂ ವಿಷಯ ತಜ್ಞರು, ಹಿರಿಯರು ಮಾಹಿತಿ ನೀಡಿದರು.
ಆಯೋಜಿಸಲಾಗಿತ್ತು. ಕರ್ನಾಟಕ ಸೇರಿ ಆಂಧ್ರ ಪ್ರದೇಶ, ತಮಿಳುನಾಡು, ತೆಲಂಗಾಣ, ಪಾಂಡಿಚೇರಿ, ಕೇರಳದಿಂದ ಒಟ್ಟು 130 ಆಪ್ತ ಸಹಾಯಕರು ಪಾಲ್ಗೊಳ್ಳಬೇಕಿತ್ತು. ಸೋಮವಾರ 97 ಮಂದಿ ಪಾಲ್ಗೊಂಡಿದ್ದರು. ಇದರಲ್ಲಿ 84 ಮಂದಿ ರಾಜ್ಯದವರಾಗಿದ್ದರೆ 13 ಮಂದಿ ಅನ್ಯ ರಾಜ್ಯದವರಾಗಿದ್ದರು. ಮಂಗಳವಾರವೂ ಕಾರ್ಯಾಗಾರ ಮುಂದುವರಿಯಲಿದೆ ಎಂದು ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ಜಗದೀಶ್ ಹಿರೇಮನಿ ತಿಳಿಸಿದರು. ಬಿಜೆಪಿ ಕೇಂದ್ರೀಯ ಪ್ರಶಿಕ್ಷಣ ಪ್ರಕೋಷ್ಠದ ಸದಸ್ಯ ರವೀಂದ್ರ ಸಾಠೆ, ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಮಧುಶ್ರೀ ಇತರರು ಉಪಸ್ಥಿತರಿದ್ದರು.