Advertisement
ಪಂಪ್‌ವೆಲ್‌ನಿಂದ ಕಂಕನಾಡಿ ಸಂಪರ್ಕ ರಸ್ತೆಯ ಗಣೇಶ್ ಮೆಡಿಕಲ್ ಎದುರು ಒಂದು ತಿಂಗಳಿನಿಂದ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಒಂದು ಭಾಗದ ರಸ್ತೆಯನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ಎರಡೂ ಬದಿ ಸಂಚಾರ ಏಕಮುಖ ರಸ್ತೆಯಲ್ಲಿ ಮಾಡಲಾಗಿದ್ದು, ಸದಾ ವಾಹನ ದಟ್ಟಣೆಯಾಗುತ್ತಿದೆ.
ಮಳೆ ನೀರು ಸರಾಗವಾಗಿ ಹರಿಯಲು ಅನುಕೂಲವಾಗುವ ನಿಟ್ಟಿನಲ್ಲಿ ಕಳೆದ ಕೆಲ ದಿನಗಳಿಂದ ಕಾಂಕ್ರೀಟ್ ಚರಂಡಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಕೊನೆಯ ಹಂತದಲ್ಲಿದೆ. ಇನ್ನು ರಸ್ತೆಗೆ ಕಾಂಕ್ರೀಟಿಕರಣ ಬಾಕಿ ಇದೆ. ಅಂದಾಜು ಎರಡು ವಾರಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.
- ಸಂದೀಪ್, ಸ್ಥಳೀಯ ಕಾರ್ಪೊರೇಟರ್
Related Articles
Advertisement