Advertisement

ಜಿಯೋ ಜೊತೆಗೆ ಕೈ ಜೋಡಿಸಿದ ಗೂಗಲ್ : ಸದ್ಯದಲ್ಲೇ ಬರಲಿದೆ ಕಡಿಮೆ ದರದ ಸ್ಮಾರ್ಟ್ ಫೋನ್  

02:39 PM May 28, 2021 | Team Udayavani |

ನವ ದೆಹಲಿ : ಇವತ್ತು ಜಗತ್ತೇ ಅಂಗೈಯೊಳಗೆ ಕೂತಿದೆ. ಒಂದು ಸ್ಮಾರ್ಟ್ ಫೋನ್ ನಲ್ಲಿ ಇಡೀ ಜಗತ್ತಿನಲ್ಲಿ ಏನೆಲ್ಲಾ ಬೆಳವಣಿಗೆಯಾಗುತ್ತಿದೆ ಎನ್ನುವುದರ ಬಗ್ಗೆ ಕೂತಲ್ಲೇ ನೋಡಬಹುದು.

Advertisement

ಪ್ರತಿಯೊಬ್ಬರು ಇಂದು ಸ್ಮಾರ್ಟ್ ಫೋನ್ ನನ್ನು ಆಧರಿಸಿ ಇದ್ದಾರೆ ಎಂದರೆ ತಪ್ಪಿಲ್ಲ. ಹೀಗಿರುವಾಗ ಸ್ಮಾರ್ಟ್ ಫೋನ್ ಗಳ ಬೆಲೆಯೂ ಆಕಾಶಕ್ಕೆ ಏರುತ್ತಿವೆ ಎಂದರೇ ತಪ್ಪಿಲ್ಲ. ಬೇಡಿಕೆಗೆ ತಕ್ಕಂತೆ ಹೊಸ ಹೊಸ ವಿಶೇಷತೆಗಳೊಂದಿಗೆ ದುಬಾರಿ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಕಾಲಿಡುತ್ತಿರುವಾಗ. ಜಗತ್ತಿನ ದೈತ್ಯ ಡಿಜಿಟಲ್ ಸಂಸ್ಥೆ ಗೂಗಲ್ ಕೈಗೆಟುಕು ದರದಲ್ಲಿ ಜನರಿಗೆ ಸ್ಮಾರ್ಟ್ ಫೋನ್ ವೊಂದನ್ನಯ ನೀಡಲು ನಿರ್ಧರಿಸಿದೆ.

ಇದನ್ನೂ ಓದಿ : ತಾಕತ್ತಿದ್ದರೆ ರೋಹಿಣಿ ಸಿಂಧೂರಿಯವರನ್ನು ವರ್ಗಾವಣೆ ಮಾಡಿಸು: ಪ್ರತಾಪ್ ಸಿಂಹಗೆ ಜಿಟಿಡಿ ಸವಾಲು

ಹೌದು, ಕೈಗೆಟುಕುವ ದರದಲ್ಲಿ ಸ್ಮಾರ್ಟ್‌ ಫೋನ್ ತಯಾರಿಸುವ ಯೋಜನೆಗೆ ರಿಲಯನ್ಸ್ ಜಿಯೋ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಮುಂದಾಗಿದೆ.

ಈ  ಬಗ್ಗೆ ಪ್ರತಿಕ್ರಿಯಿಸಿದ ಗೂಗಲ್ ಸಂಸ್ಥೆಯ ಸಿಿಒ ಸುಂದರ್ ಪಿಚೈ,  ರಿಲಯನ್ಸ್ ಜಿಯೋ ಸಂಸ್ಥೆಯೊಂದಿಗೆ ಕಡಿಮೆ ದರದಲ್ಲಿ  ಆರ್ಥಿಕ ಸ್ಥಿತಿಯಲ್ಲಿ ಕೇಳಗಿರುವಂತಹ ವರ್ಗದವರಿಗೂ ಕೈಗೆಟುಕುವಂತಹ ಸ್ಮಾರ್ಟ್ ಫೋನ್ ನಿರ್ಮಾಣಕ್ಕೆ ಮಾತುಕತೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Advertisement

ವರ್ಚುವಲ್ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಪಿಚೈ,  ಕಡಿಮೆ ಬೆಲೆಯ ಫೋನ್ ತಯಾರಿಕೆಯತ್ತ ನಾವು ಗಮನ ಹರಿಸಿದ್ದೇವೆ. ಅದಕ್ಕಾಗಿ ಜಿಯೋ ಜೊತೆಗೆ ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ.

ಇನ್ನು,  2020ರಲ್ಲಿ ಗೂಗಲ್ ಕಂಪನಿಯು ಜಿಯೋ ಪ್ಲಾರ್ಟ್‌ ಫಾರ್ಮ್‌ ನಲ್ಲಿ ಶೇಕಡಾ 7.7ರಷ್ಟು ಪಾಲನ್ನು ಅಥವಾ 33,737 ಕೋಟಿ ರೂಪಾಯಿಗಳ ಮೌಲ್ಯದ ಷೇರುಗಳನ್ನು ಖರೀದಿಸಿತ್ತು. ಇದೇ ವೇಳೆಯಲ್ಲಿ ಕೈಗೆಟುಕುವ ಬೆಲೆಯಲ್ಲಿ ಸ್ಮಾರ್ಟ್‌ ಫೋನ್ ನಿರ್ಮಾಣದ ಬಗ್ಗೆಯೂ ಪ್ರಸ್ತಾಪವನ್ನು  ಮಾಡಿತ್ತು.

ಈ ವಹಿವಾಟಿನೊಂದಿಗೆ, ಜಿಯೋ ಪ್ಲಾಟ್‌ ಫಾರ್ಮ್‌ಗಳಲ್ಲಿ ಭಾರೀ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಿದ ಫೇಸ್‌ ಬುಕ್‌ ನಂತಹ ಜಾಗತಿಕ ಹೂಡಿಕೆದಾರರ ಪಟ್ಟಿಗೆ ಗೂಗಲ್ ಸೇರಿಕೊಂಡಿದೆ.

ಭಾರತದಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಕೆಗೆ ವೇಗ ನೀಡಲು ಹಾಗೂ ಡಿಜಿಟಲ್ ವ್ಯವಸ್ಥೆಯನ್ನು ಬಲಪಡಿಸಲು ಮುಂದಿನ ಐದರಿಂದ ಏಳು ವರ್ಷಗಳಲ್ಲಿ 75,000 ಕೋಟಿ ರೂಪಾಯಿ ಹೂಡಿಕೆ ಮಾಡುವ ಯೋಜನೆಯನ್ನು ಸುಂದರ್‌ ಪಿಚೈ ಕಳೆದ ವರ್ಷ ಜುಲೈನಲ್ಲಿ ಪ್ರಸ್ತಾಪಿಸಿದ್ದರು.

ಇನ್ನು, ಭಾರತದಲ್ಲಿನ ಕೋವಿಡ್-19 ಸೋಂಕಿನ ಎರಡನೇ ಅಲೆಯ ಬಗ್ಗೆ ಮಾತನಾಡಿದ ಅವರು, ಸಾಂಕ್ರಾಮಿಕವು ಜನರ ಜೀವನದಲ್ಲಿ ತಂತ್ರಜ್ಞಾನವು ವಹಿಸುವ ಮಹತ್ವವನ್ನು ಎತ್ತಿ ತೋರಿಸಿದೆ ಎಂದಿದ್ದಾರೆ.

ಇದನ್ನೂ ಓದಿ : ನೆನಪಿಡಿ… ನಿಮ್ಮ ಬದುಕು ನಿಮ್ಮನ್ನು ಚೆಂದಾಗಿ ಬದುಕಿಸುತ್ತದೆ..!

Advertisement

Udayavani is now on Telegram. Click here to join our channel and stay updated with the latest news.

Next