ಸಾರ್ವತ್ರಿಕ ಮುಷ್ಕರದಲ್ಲಿ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ಭಾಗವಹಿಸಿಲ್ಲ.ಮುಷ್ಕರದ ಹಿನ್ನೆಲೆಯಲ್ಲಿ ಕಾಸರ ಗೋಡು ಜಿಲ್ಲೆಯಲ್ಲಿ ಸರಕಾರಿ ಹಾಗೂ ಖಾಸಗಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಸರಕಾರಿ ಕಚೇರಿಗಳು, ಅಂಗಡಿ ಮುಂಗಟ್ಟುಗಳು, ಕೈಗಾರಿಕಾ ಕೇಂದ್ರಗಳು ತೆರೆಯಲಿಲ್ಲ. ಕೆಲವೊಂದು ಖಾಸಗಿ ವಾಹನಗಳು ಮಾತ್ರವೇ ರಸ್ತೆಯಲ್ಲಿ ಓಡಾಡುತ್ತಿದ್ದವು. ಮುಷ್ಕರ ನಿರತ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಕಾಸರಗೋಡು ನಗರದಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಯನ್ನು ಸಿಐಟಿಯು ಮುಖಂಡ ಟಿ.ಕೆ. ರಾಜನ್ ಉದ್ಘಾಟಿಸಿದರು.
ಎಸ್‌ಟಿಯು ಮುಖಂಡ ಅಶ್ರಫ್ ಎಡ ನೀರು ಅಧ್ಯಕ್ಷತೆ ವಹಿಸಿದರು. ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ಟಿ. ಕೃಷ್ಣನ್, ಬಿನೋಯ್ ಮ್ಯಾಥ್ಯೂ, ಕರಿವೆಳ್ಳೂರು ವಿಜಯನ್, ಡಿ.ಎಂ.ಕೆ. ಜಲೀಲ್, ಕೆ. ಬಾಲಕಿರಣ್, ಮುತ್ತಲಿಬ್, ಹಸೈನಾರ್ ಉಳಿಯತ್ತಡ್ಕ ಮಾತನಾಡಿ ದರು. ವಿನಯ ಕುಮಾರ್ ಸ್ವಾಗತಿಸಿದರು. ಮುಷ್ಕರದಲ್ಲಿ 16 ಕಾರ್ಮಿಕ ಸಂಘಟನೆಗಳು ಭಾಗವಹಿಸಿದ್ದವು. ಪತ್ರಿಕೆ, ಹಾಲು, ಆಸ್ಪತ್ರೆ, ಔಷಧಿ ಅಂಗಡಿಗಳು, ವಿವಾಹ ಹಾಗೂ ವಿಮಾನಗಳಿಗೆ ಮುಷ್ಕರದಿಂದ ವಿನಾಯಿತಿ ನೀಡಲಾಗಿತ್ತು.
ಪರೀಕ್ಷೆ ಮುಂದೂಡಿಕೆ
ಕಾರ್ಮಿಕರ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ಮಹಾತ್ಮಾಗಾಂಧಿ ವಿಶ್ವವಿದ್ಯಾನಿಲಯ, ಕೇರಳ ವಿಶ್ವವಿದ್ಯಾನಿಲಯ, ಕಲ್ಲಿಕೋಟೆಯ ವಿಶ್ವವಿದ್ಯಾನಿಲಯ, ಕಣ್ಣೂರು ವಿಶ್ವವಿದ್ಯಾನಿಲಯ ಮತ್ತು ಕೇರಳ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯಗಳು ಸೋಮವಾರ ನಿಗದಿಯಾಗಿದ್ದ ಎಲ್ಲ ಪರೀಕ್ಷೆಗಳನ್ನು ಮುಂದೂಡಿವೆ.
Advertisement
ಚಿತ್ರ: ಶ್ರೀಕಾಂತ್ ಕಾಸರಗೋಡು