Advertisement

ಸೌಭಾಗ್ಯ ಅನರ್ಹರ‌ ಪಾಲು-ಪ್ರತಿಭಟನೆ

01:10 PM Aug 27, 2019 | Team Udayavani |

ಶಿಗ್ಗಾವಿ: ಸೌಭಾಗ್ಯ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳ ಬದಲಾಗಿ ನಕಲಿ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದು ಆರೋಪಿಸಿ ರಾಜ್ಯ ಕಾರ್ಮಿಕರ ವಿಕಾಸ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ರಾಜ್ಯಾಧ್ಯಕ್ಷ ಅಬ್ದುಲ್ ಕರಿಂ ಮೊಗಲಲ್ಲಿಯವರ ನೇತೃತ್ವದಲ್ಲಿ ಶಿಗ್ಗಾವಿ ಮತ್ತು ಬಂಕಾಪೂರ ಪದಾಧಿಕಾರಿಗಳು ಹೆಸ್ಕಾಂ ಕಚೇರಿ ಎದುರು ಪ್ರತಿಭಟಿಸಿ ಎಇಇ ಜಿ. ರಮೇಶ ಅವರಿಗೆ ಮನವಿ ಸಲ್ಲಿಸಿದರು.

ಪುರಸಭೆ ಸದಸ್ಯ ಸುಭಾಷ ಚೌಹಾಣ್‌ ಮಾತನಾಡಿ, ನನ್ನ ಗಮನಕ್ಕೂ ತರದೇ ಮೀಟರ್‌ ಅಳವಡಿಕೆ ಕಾರ್ಯ ನಡೆಯುತ್ತಿದೆ. ಯೋಜನೆ ನಿಜವಾದ ಫಲಾನುಭವಿಗಳಿಗೆ ತಲುಪುವ ಬದಲಾಗಿ ಎಜೆಂಟರ್‌ ಹಾವಳಿಯಿಂದಾಗಿ ನಕಲಿ ಫಲಾನುಭವಿಗಳ ಪಾಲಾಗುತ್ತಿದೆ ಎಂದು ಆರೋಪಿಸಿದರು.

ಅಬ್ದುಲ್ ಕರೀಂ ಮೊಗಲಲ್ಲಿಯವರ ಮಾತನಾಡಿ, ಕೊಳಚೆ ನಿವಾಸಿಗಳಿಗಾಗಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಇದಾಗಿದೆ. ಆದರೆ, ಫಲಾನುಭವಿಗಳ ಆಯ್ಕೆ ಮಾತ್ರ ಪಾರದರ್ಶಕವಾಗಿಲ್ಲ. ನೈಜ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು. ಜಿಲಾನಿ ಜಂಗ್ಲಿ, ಇಮಾಮ್‌ಹುಸೇನ್‌ ಅದಂಬಾಯಿ, ವೆಂಕಟೇಶ ಬಂಡಿವಡ್ಡರ, ರಮೇಶ ವನಹಳ್ಳಿ, ಶಿವಾನಂದ ದೇವಗೇರಿ, ನಾಜಿಲ್ ಸವಣೂರ, ಮಹಮ್ಮಶಫಿ ಸವಣೂರ, ವೆಂಕಟೇಶ ಭಜಂತ್ರಿ, ಲಕ್ಷ ್ಮಣ ವಡ್ಡರ, ಮಂಜುನಾಥ ಮದುರಕರ, ಮುಕ್ತಾರಬಾನು ತಿಮ್ಮಾಪೂರ ಹನಮಂತ ಶಿವಳ್ಳಿ ಹಾಗೂ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next