Advertisement

ಇಎಸ್‌ಐ ಬೇಡಿಕೆಗಾಗಿ ಕಾರ್ಮಿಕರ ಧರಣಿ

12:27 PM Apr 19, 2022 | Team Udayavani |

ಕುಂದಾಪುರ: ಇಎಸ್‌ಐ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಲು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ, ಉಡುಪಿ ಜಿಲ್ಲಾ ಹೆಂಚು ಕಾರ್ಮಿಕರ ಸಂಘ (ಸಿಐಟಿಯು)ದ ನೇತೃತ್ವದಲ್ಲಿ ಸೋಮವಾರ ಅಪರಾಹ್ನ ಕುಂದೇಶ್ವರ ದೇವಸ್ಥಾನ ರಸ್ತೆಯ ಬಳಿ ಇಎಸ್‌ಐ ಆಸ್ಪತ್ರೆ ಕಚೇರಿ ಎದುರು ಕಾರ್ಮಿಕರ ಬೃಹತ್‌ ಧರಣಿ ಮುಷ್ಕರ ಪ್ರತಿಭಟನೆ ನಡೆಯಿತು.

Advertisement

ಕುಂದಾಪುರ ಭಾಗದಲ್ಲಿ ಸುಮಾರು 10 ಸಾವಿರ ಮಂದಿ ಇಎಸ್‌ಐ ಕಾರ್ಡುದಾರರಿದ್ದಾರೆ. ಆದರೆ ಇಲ್ಲಿನ ಡಿಸ್ಪೆನ್ಸರಿಯಲ್ಲಿ ಖಾಯಂ ವೈದ್ಯರಿಲ್ಲ. ಕಳೆದ 1 ವರ್ಷದಿಂದ ವಿಮಾ ವೈದ್ಯಾಧಿಕಾರಿಗಳ ಹುದ್ದೆ ಖಾಲಿಯಿದೆ. ಇಎಸ್‌ಐ ಜತೆ ಒಪ್ಪಂದ ಮಾಡಿಕೊಂಡ ಆಸ್ಪತ್ರೆಗಳಿಗೆ ಬಾಕಿಯಾದ ಮೊತ್ತವನ್ನು ನೀಡಬೇಕು. ಅವರ ಮೊತ್ತ ಹೆಚ್ಚಿಸದ ಕಾರಣ ಅವರು ನಾನಾ ನಮೂನೆಯಲ್ಲಿ ಕಾರ್ಮಿಕ ರೋಗಿಗಳಿಂದ ವಸೂಲಿ ಮಾಡುತ್ತಾರೆ, ಅನಾದರ ಮಾಡುತ್ತಾರೆ. ಆದ್ದರಿಂದ ಅಂತಹ ಆಸ್ಪತ್ರೆಗಳನ್ನು ನಿಯಂತ್ರಿಸಲು ವಿಮಾ ವೈದ್ಯಾಧಿಕಾರಿಗೆ ಹೆಚ್ಚಿನ ಅಧಿಕಾರ ನೀಡಬೇಕು. ಕುಂದಾಪುರದಲ್ಲಿ ಇಎಸ್‌ಐ ಕಚೇರಿ ಬಾಡಿಗೆ ಕಟ್ಟಡದಲ್ಲಿದ್ದು ಮೊದಲ ಮಹಡಿಯಲ್ಲಿ ಇಕ್ಕಟ್ಟಿನಲ್ಲಿದೆ. ಸ್ವಂತ ಕಟ್ಟಡವನ್ನು ಸರಕಾರಿ ನಿವೇಶನದಲ್ಲಿ ನಿರ್ಮಿಸಬೇಕು. ಕುಂದಾಪುರದಲ್ಲಿ ಇಎಸ್‌ಐ ಸ್ಥಳೀಯ ಕಚೇರಿ ತೆರೆಯಬೇಕು.

ಚಿಕಿತ್ಸಾಲಯದ ಸಮಯ ಬದಲಿ ಸಬೇಕು. ವರ್ಷಪೂರ್ತಿ ಗುಣಮಟ್ಟದ ಔಷಧ ನೀಡಬೇಕು. ಸುಸಜ್ಜಿತ ಲ್ಯಾಬೋರೇಟರಿ ನೀಡಬೇಕು. ಉಡುಪಿ ಜಿಲ್ಲೆಗೊಂದು ಸುಸಜ್ಜಿತ ಇಎಸ್‌ಐ ಆಸ್ಪತ್ರೆ ಮಂಜೂರು ಮಾಡಬೇಕೆಂಬ ಬೇಡಿಕೆಗಳನ್ನು ಇಡಲಾಯಿತು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಉಡುಪಿ ಜಿಲ್ಲಾ ಹೆಂಚು ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವಿ.ನರಸಿಂಹ, ಕಾರ್ಯದರ್ಶಿ ಎಚ್‌. ನರಸಿಂಹ, ಸಿಐಟಿಯು ಜಿಲ್ಲಾಧ್ಯಕ್ಷ ಕೆ. ಶಂಕರ್‌, ಜಿಲ್ಲಾ ಉಪಾಧ್ಯಕ್ಷ ಮಹಾಬಲ ವಡೇರಹೋಬಳಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವೆಂಕಟೇಶ ಕೋಣಿ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next