Advertisement

ಮಾತಿಗೆ ತಪ್ಪಿದ ಅಧಿಕಾರಿಗಳು: ನೌಕರರು ಅಸಹಾಯಕ

04:00 PM Jun 12, 2022 | Team Udayavani |

ಚಿಕ್ಕನಾಯಕನಹಳ್ಳಿ: ಪಟ್ಟಣದ ಪುರಸಭೆ ಹೊರಗುತ್ತಿಗೆ ನೌಕರರಿಗೆ ಪಿಎಫ್ ಹಣ ಕೈ ಸೇರುವ ಲಕ್ಷಣ ಕಾಣುತ್ತಿಲ್ಲ, ಪಿಎಫ್ ಹಣ ಬರುವ ನಿರೀಕ್ಷೆಯಲ್ಲಿಯೇ ಈವರೆಗೆ 5 ಮಂದಿ ನೌಕರರು ಸಾವನಪ್ಪಿದ್ದಾರೆ. ಅನಿರ್ಧಿಷ್ಟಾವಧಿ ಮುಷ್ಕರದಲ್ಲಿದ್ದ ನೌಕರರಿಗೆ ಮೂರು ತಿಂಗಳಲ್ಲಿ ಪಿಎಫ್ ಹಣ ನೀಡುವ ಭರವಸೆ ನೀಡಿ, ಐದು ತಿಂಗಳು ಕಳೆದರೂ ಸಹ ಪಿಎಫ್ ಹಣ ಬಂದಿಲ್ಲ. ಅಧಿಕಾರಿಗಳೇ ಸುಳ್ಳು ಅಶ್ವಾಸನೆ ನೀಡಿದರೆ ಈ ಬಡ ನೌಕರರ ಗತಿಯೇನು.

Advertisement

ಪಟ್ಟಣದ ಪುರಸಭೆಯ ಹೊರಗುತ್ತಿಗೆ ನೌಕರರು, ಕಳೆದ 8 ವರ್ಷಗಳಿಂದ ಪಿಎಫ್ ಹಣ ಬಾಕಿ ಇದ್ದು, ಕೂಡಲೇ ಪಿಎಫ್ ಹಣವನ್ನು ನಮ್ಮ ಖಾತೆಗೆ ವರ್ಗಾಹಿಸುವಂತೆ ಕಳೆದ ಫೆಬ್ರವರಿ ತಿಂಗಳಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿದ್ದರು. ಪುರಸಭೆ ಮುಂದೆಯೇ ತಿಂಡಿ, ಊಟ ತಯಾರಿಸಿ ಪ್ರತಿಭಟನೆ ಮಾಡಿದ್ದರು. ಆದರೆ, ಮುಷ್ಕರ ಕೈಬಿಡುವಂತೆ ತುಮಕೂರು ಯೋಜನ ನಿರ್ದೇಶಕರು, ಹೊರಗುತ್ತಿಗೆ ನೌಕರರ ಮನವೊಲಿಸಿ ಮುಷ್ಕರ ಕೈ ಬಿಡುವಂತೆ ತಿಳಿಸಿ, ಈ ದಿನದಿಂದ ಮುಂದಿನ ಮೂರು ತಿಂಗಳಿನಲ್ಲಿ ಬಾಕಿ ಇರುವ ಪಿಎಫ್ ಹಣ ಖಾತೆಗೆ ವರ್ಗಾವಣೆ ಮಾಡ ಲಾಗುತ್ತದೆ ಎಂದು ತಿಳಿಸಿದ್ದರು. ಮೂರು ತಿಂಗಳಲ್ಲಿ ಹಣ ಕೈ ಸೇರುವ ಖುಷಿಯಲ್ಲಿ ಹೊರಗುತ್ತಿಗೆ ನೌಕರರು ಮುಷ್ಕರವನ್ನು ಕೈ ಬಿಟ್ಟು ಕೆಲಸಕ್ಕೆ ಹಾಜರಾಗಿದ್ದರು. ಆದರೆ, ಹೇಳಿದ ಮಾತನ್ನು ಉಳಿಸಿಕೊಳ್ಳಲು ಯೋಜನ ನಿರ್ದೇಶಕರು ತಪ್ಪಿದ್ದು, ಆಸೆಯಿಂದ ಪಿಎಫ್ ಹಣಕ್ಕಾಗಿ ಕಾಯುತ್ತಿದ್ದ ಹೊರಗುತ್ತಿಗೆ ನೌಕರರಿಗೆ ನಿರಾಸೆ ಉಂಟಾಗಿದೆ.

ಸುಳ್ಳು ಆಶ್ವಾಸನೆ, ಕನಸಾದ ಪಿಎಫ್ ಹಣ: 2011 ರಿಂದ ಸುಮಾರು 84 ಹೊರಗುತ್ತಿಗೆ ನೌಕರರಿಗೆ ಪಿಎಫ್ ಅವರ ವೈಯಕ್ತಿಕ ಖಾತೆಗೆ ಬಂದಿಲ್ಲ. ಹಲವಾರು ಹೋರಾಟಗಳು, ಪ್ರತಿಭಟನೆಗಳನ್ನು ನಡೆಸಿರುವ ನೌಕರರು, ಫೆಬ್ರವರಿ 2022ರಂದು ಪುರಸಭೆ ಮುಂ ಭಾಗ ಕಂಪ್ಯೂಟರ್‌ ಆಪರೇಟರ್, ನೀರು ಸರಬರಾಜು ನೌಕರರು, ವಾಹನ ಚಾಲಕರು ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿದ್ದರು. ಈ ಮುಷ್ಕರಕ್ಕೆ ಕೆಲ ಪುರಸಭೆ ನೌಕರರು ಬೆಂಬಲ ನೀಡಿದ್ದರು. ಒಂದು ವಾರ ಮುಷ್ಕರ ನಡೆಸಲಾಗಿತ್ತು. ಮಷ್ಕರ ಸ್ಥಳಕ್ಕೆ ತುಮಕೂರು ಯೋಜನ ನಿರ್ದೇಶಕರು ಆಗಮಿಸಿ, ಮುಂದಿನ ಮೂರು ತಿಂಗಳಲ್ಲಿ ನಿಮ್ಮ ಎಲ್ಲಾ ಪಿಎಫ್ ಹಣ ನೀಡುವುದಾಗಿ ತಿಳಿಸಿ, ಪ್ರತಿಭಟನೆ ಕೈಬಿಡುವಂತೆ ಮಾಡಿದ್ದರು. ಆದರೆ, ಸುಮಾರು ಐದು ತಿಂಗಳು ಕಳೆದರೂ ನಾಯಪೈಸೆ ಪಿಎಫ್ ಹಣ ನೌಕರರ ಖಾತೆಗೆ ವರ್ಗಾವಣೆಯಾಗಿಲ್ಲ. ಸುಳ್ಳು ಆಶ್ವಾಸನೆ ನೀಡುವಲ್ಲಿ ಅಧಿಕಾರಿಗಳು ರಾಜಕಾರಣಿಯನ್ನೇ ಮಿರಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ನೌಕರರಿಗೆ ನಿರಾಸೆ: ಹೊರಗುತ್ತಿಗೆ ನೌಕರರು ಅರ್ಥಿಕ ಮುಗ್ಗಟ್ಟು ಅನುಭವಿಸುತ್ತಿದ್ದು, ಸರಿ ಸಮಯಕ್ಕೆ ಸಂಬಳ ಸಿಗುತ್ತಿಲ್ಲ. ಪಿಎಫ್ ಹಣ ಬರುವ ಭರವಸೆ ಯಲ್ಲಿ ಸಾಲ ಮಾಡಿಕೊಂಡಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಇವರ ಜೀವನ ಕಷ್ಟವಾಗಿದೆ. ಪಿ ಎಫ್ ಹಣ ಬರುವ ನಿರೀಕ್ಷೆಯಲ್ಲಿ ಸುಮಾರು 5 ಜನ ನೌಕರರು ಸಾವನಪ್ಪಿದ್ದಾರೆ. ತಾವು ದುಡಿದು ಉಳಿಸಿದ ಹಣ ಬೇಜಾವಬ್ದಾರಿ ನೌಕರರಿಂದ ಕೈ ಸೇರದಂತಾಗಿದೆ ಎಂಬ ನಿರಾಸೆ ನೌಕರರಲ್ಲಿ ಮನೆ ಮಾಡಿದೆ.

ಶೀಘ್ರದಲ್ಲಿ ಖಾತೆಗೆ ಹಣ ವರ್ಗಾಯಿಸಿ : ಪಿಎಫ್ ಹಣ ಬರುವ ನಿರೀಕ್ಷೆಯಲ್ಲಿ ಕೈ ಸಾಲ ಮಾಡಿಕೊಂಡಿದ್ದು, ಜೀವನ ಕಷ್ಟವಾಗಿದೆ. ನಮ್ಮ ಹಣವನ್ನು ನಮಗೆ ನೀಡಲು ಇಷ್ಟು ವರ್ಷ ಬೇಕಾ, ಅಧಿಕಾರಿಗಳು ನಮ್ಮ ಪಿಎಫ್ ಹಣವನ್ನು ಶೀಘ್ರದಲ್ಲಿ ನಮ್ಮ ಖಾತೆಗೆ ವರ್ಗಾಹಿಸಬೇಕು ಎಂದು ಪುರಸಭೆ ಹೊರಗುತ್ತಿಗೆ ನೌಕರರು ಆಗ್ರಹಿಸಿದ್ದಾರೆ.

Advertisement

ಸಮಸ್ಯೆ ಪರಿಹಾರ ನೀಡಲು ದಕ್ಷತೆಯಲ್ಲಿ ಪೌರಾಡಳಿತ ಯೋಜನಾ ನಿರ್ದೇಶಕರು ಬಂದು ಹೋದರೆವರತು, ಬಡ ನೌಕರರ ಸಮಸ್ಯೆ ಬಗೆಹರಿಸಲಿಲ್ಲ. ಪ್ರತಿಭಟನೆ ನಡೆಸುತ್ತಿದ್ದ ನೌಕರರಿಗೆ ಪಿಎಫ್ ಹಣ ಇನ್ನೂ ಬಂದಿಲ್ಲ. ಮಾತು ಕೊಟ್ಟ ಅಧಿಕಾರಿಗಳು ಹಣವನ್ನು ನೌಕರರ ಖಾತೆಗೆ ವರ್ಗಾಹಿಸಬೇಕು. -ರೇಣುಕ ಪ್ರಸಾದ್‌, ಪುರಸಭೆ ಸದಸ್ಯ

 

-ಚೇತನ್‌

Advertisement

Udayavani is now on Telegram. Click here to join our channel and stay updated with the latest news.

Next