Advertisement

ಕಾರ್ಮಿಕರ ಪರ ಧ್ವನಿಯೆತ್ತಿದ ಮೊದಲಿಗರು: ಚೇತನ್‌ ಶೆಟ್ಟಿ

08:39 PM Apr 05, 2019 | Sriram |

ಕುಂದಾಪುರ: ಭಾರತದ ಮೊದಲ ಉಪ ಪ್ರಧಾನಿ ಡಾಣ ಬಾಬು ಜಗಜೀವನ್‌ ರಾಂ ಅವರು ಶೋಷಿತರ, ದುಡಿಯುವ ವರ್ಗದ, ತಳ ಸಮುದಾಯದ, ಕಾರ್ಮಿಕರ ಪರ ಧ್ವನಿಯೆತ್ತಿದ ಮೊದಲಿಗರು. ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯನಂತರದ ಎರಡೂ ಕಾಲಘಟ್ಟದಲ್ಲಿಯೂ ಗುರುತರವಾದಂತಹ ಸೇವೆ ಸಲ್ಲಿಸಿದ ಮಹಾನ್‌ ವ್ಯಕ್ತಿತ್ವ ಇವರದು ಎಂದು ಕುಂದಾಪುರದ ಡಾಣ ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊಣ ಚೇತನ್‌ ಶೆಟ್ಟಿ ಕೋವಾಡಿ ಹೇಳಿದರು.

Advertisement

ತಾ.ಪಂ. ಸಭಾಂಗಣದಲ್ಲಿ ನಡೆದ ತಾ.ಪಂ. ಕುಂದಾಪುರ, ಕಂದಾಯ ಇಲಾಖೆ, ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಸಿರು ಕ್ರಾಂತಿಯ ಹರಿಕಾರ, ಮೊದಲ ಉಪಪ್ರಧಾನಿ ಡಾಣ ಬಾಬು ಜಗಜೀವನ್‌ ರಾಂ ಅವರ 112 ನೇ ಜನ್ಮ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.

ಜಗಜೀವನ್‌ ರಾಂ ಅವರು ತಂದೆ ಬ್ರಿಟೀಷ್‌ ಸರಕಾರದಲ್ಲಿ ಸೇವೆ ಸಲ್ಲಿಸಿ ಅಧಿಕಾರ ತ್ಯಜಿಸಿದ ತಂದೆ ಹಾಗೂ ಜಾತಿ ಪದ್ದತಿ ವಿರುದ್ಧ ತಿಳಿ ಹೇಳಿದ ತಾಯಿಯಿಂದ ಅಪಾರವಾಗಿ ಪ್ರಭಾವಿತರಾಗಿದ್ದರು. ತಳಸಮುದಾಯದಲ್ಲಿ ಹುಟ್ಟಿದ ಇವರು ಎಳವೆಯಲ್ಲಿಯೇ ಶಾಲೆಯಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆ ವಿರುದ್ಧ ಸಿಡಿದೆದ್ದಿದ್ದರು ಎಂದವರು ಹೇಳಿದರು.

ಮೌಲಿಕ ಕೊಡುಗೆ
ಉದ್ಘಾಟಿಸಿದ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಡಾಣ ಎಸ್‌.ಎಸ್‌. ಮಧುಕೇಶ್ವರ ಮಾತನಾಡಿ, ಎಪ್ರಿಲ್‌ ಶೋಷಿತರು, ದಮನಿತರ ಪರ ಧ್ವನಿಯೆತ್ತಿದ ಇಬ್ಬರು ಮಹನೀಯರಿಗೆ ಜನ್ಮ ನೀಡಿದ ತಿಂಗಳಾಗಿರುವುದು ವಿಶೇಷ. ದೇಶದ ಅಭಿವೃದ್ಧಿಯ ದೃಷ್ಟಿಯಲ್ಲಿ ಮೌಲಿಕವಾದಂತಹ ಕೊಡುಗೆ ನೀಡಿರುವ ಬಾಬು ಜಗಜೀವನ್‌ ರಾಂ ಅವರ ಸ್ಮರಣೆ ಪ್ರಸ್ತುತ ಎಂದರು.

ಕುಂದಾಪುರ ತಹಶೀಲ್ದಾರ್‌ ವಿರೇಂದ್ರ ಬಾಡ್ಕರ್‌ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೆ. ಕಿರಣ್‌ ಪೆಡೆ°àಕರ್‌, ಕುಂದಾಪುರ ಉಪ ವಿಭಾಗದ ಡಿವೈಎಸ್‌ಪಿ ಬಿ.ಪಿ. ದಿನೇಶ್‌ ಕುಮಾರ್‌, ಒಳನಾಡು ಮತ್ತು ಜಲಸಾರಿಗೆ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ದುರ್ಗಾದಾಸ್‌, ವಿವಿಧ ಇಲಾಖೆಯ ಅಧಿಕಾರಿಗಳು, ದಲಿತ ಮುಖಂಡರು, ಸಮಾಜ ಬಾಂಧವರು ಉಪಸ್ಥಿತರಿದ್ದರು.

Advertisement

ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕ ರಾಘವೇಂದ್ರ ಆರ್‌. ವರ್ಣೇಕರ್‌ ಸ್ವಾಗತಿಸಿದರು. ಇಲಾಖೆಯ ಮ್ಯಾನೇಜರ್‌ ರಮೇಶ್‌ ಕುಲಾಲ್‌ ನಿರೂಪಿಸಿದರು.

ಪಠ್ಯದಲ್ಲಿಯೂ ಬರಲಿ
ಕಾರ್ಮಿಕ ಸಚಿವರಾಗಿ ಕನಿಷ್ಠ ಕೂಲಿ, ಕಾರ್ಮಿಕ ಕಾಯ್ದೆ ಪರ ಧ್ವನಿಯೆತ್ತಿದವರು. ರಕ್ಷಣಾ ಸಚಿವರಾಗಿ ಬಾಂಗ್ಲಾ ವಿಮೋಚನೆ ಸಂದರ್ಭ ಸೈನಿಕರ ಪರ, ಕೃಷಿಯ ಅಭಿವೃದ್ಧಿಗೆ ಹಸಿರು ಕ್ರಾಂತಿ ಮಾಡಿದ ಇಂತಹ ಮಹಾನ್‌ ನಾಯಕರ ಜೀವನ ಚರಿತ್ರೆ ಶಾಲಾ  ಕಾಲೇಜುಗಳಲ್ಲಿ ಪಠ್ಯಪುಸ್ತಕಗಳಲ್ಲಿಯೂ ಮೂಡಿಬರುವಂತಾಗಲಿ.
 - ಪ್ರೊ.ಚೇತನ್‌ ಶೆಟ್ಟಿ ಕೋವಾಡಿ,
ಪ್ರಭಾರ ಪ್ರಾಂಶುಪಾಲರು, ಡಾಣ ಬಿ.ಬಿ. ಹೆಗ್ಡೆ ಕಾಲೇಜು

Advertisement

Udayavani is now on Telegram. Click here to join our channel and stay updated with the latest news.

Next