Advertisement

ಸೇವಾ ಭದ್ರತೆ ಕಲ್ಪಿಸಲು ಕಾರ್ಮಿಕರ ಆಗ್ರಹ

11:51 AM Jul 09, 2019 | Team Udayavani |

ರಾಯಚೂರು: ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ ಸೇವಾ ಭದ್ರತೆ ಕಲ್ಪಿಸಬೇಕು, 2019-20ನೇ ನಿಯಮದನ್ವಯ ವೇತನ ಪಾವತಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ವಸತಿ ನಿಲಯಗಳ ಕಾರ್ಮಿಕರ (ಟಿಯುಸಿಐ ಸಂಯೋಜಿತ) ಸಂಘದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಬಳಿಕ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಕಳೆದ 10 ತಿಂಗಳಿಂದ ಕಾರ್ಮಿಕರಿಗೆ ಸೂಕ್ತ ವೇತನ ಪಾವತಿಸಿಲ್ಲ. ವಸತಿ ನಿಲಯದ ಕಾರ್ಮಿಕರು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ನಿವಾರಣೆಗೆ ಕಳೆದ ಐದಾರು ವರ್ಷದಿಂದ ಹೋರಾಟ ಮಾಡಿಕೊಂಡು ಬರಲಾಗಿದೆ. ಆದರೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ನಿರ್ಲಕ್ಷ ್ಯ ವಹಿಸುತ್ತಿದ್ದಾರೆ ಎಂದು ದೂರಿದರು.

ಕನಿಷ್ಠ ವೇತನ ಕಾಯ್ದೆ-1948ರ ಸೆಕ್ಷನ್‌ 5 ಮತ್ತು 6ರ ಪ್ರಕಾರ ವೇತನ ಪಾವತಿಸಬೇಕು ಹಾಗೂ ಸಾರ್ವತ್ರಿಕ ರಜೆ ದಿನವಾದ ರವಿವಾರ ಕಡ್ಡಾಯವಾಗಿ ರಜೆ ನೀಡಬೇಕು. ದಿನದ 8 ಗಂಟೆಗೂ ಅಧಿಕ ಕೆಲಸ ನಿರ್ವಹಿಸಿದ ಕಾರ್ಮಿಕರಿಗೆ ಹೆಚ್ಚುವರಿ ಭತ್ಯೆ ನೀಡಬೇಕು. ಕಾರ್ಮಿಕರಿಗೆ ಕಿರುಕುಳ ನೀಡುವುದು ಹಾಗೂ ಕೆಲಸದಿಂದ ತೆಗೆದುಹಾಕುವುದು, ಕಾರ್ಮಿಕರಿಗೆ ಬೆದರಿಕೆ ಹಾಕುವುದನ್ನು ಕೂಡಲೇ ನಿಲ್ಲಿಸಬೇಕು. ಕಾರ್ಮಿಕರ ಹಕ್ಕುಗಳ ಪಾಲನೆಗೆ ಅವಕಾಶ ನೀಡಬೇಕು. ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಜಿ.ಅಮರೇಶ, ಉಪಾಧ್ಯಕ್ಷ ರಂಗನಾಥ, ಮುಖಂಡರಾದ ರವಿ ದಾದಾಸ್‌, ಕಾರ್ಮಿಕರಾದ ಕಮಲಮ್ಮ, ಲಕ್ಷ್ಮೀ ಲಿಂಗಸುಗೂರು, ನಾಗಮ್ಮ, ಮಹಾದೇವಿ, ಗುಂಡಮ್ಮ, ಹುಲಿಗೆಮ್ಮ, ಗದ್ದೆಮ್ಮ, ನಸ್ರೀನ್‌ ಬೇಗಂ, ಬಸವರಾಜ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next