Advertisement

ದುಡಿಯಲು ಹೋದ ಕಾರ್ಮಿಕರು ಮರಳಿ ತವರಿಗೆ

05:10 PM May 01, 2020 | Suhan S |

ಬಾಗಲಕೋಟೆ: ಮಂಗಳೂರು ಮತ್ತು ಉಡುಪಿಯಿಂದ ಬಸ್‌ಗಳ ಮೂಲಕ ಕಳುಹಿಸಲಾದ ಜಿಲ್ಲೆಯ ಕಾರ್ಮಿಕರು ಗುರುವಾರ ಬಾಗಲಕೋಟೆಗೆ ತಲುಪಿದ್ದು, ಅವರೆಲ್ಲರನ್ನು ಥರ್ಮಲ್‌ ಸ್ಕ್ರೀನಿಂಗ್‌ ಪರೀಕ್ಷೆಗೆ ಒಳಪಡಿಸಲಾಯಿತು.

Advertisement

ಮಂಗಳೂರಿನಿಂದ 10 ಹಾಗೂ ಉಡುಪಿಯಿಂದ ಮೂವರು ಸೇರಿ ಒಟ್ಟು 13 ಬಸ್‌ಗಳಲ್ಲಿ ಒಟ್ಟು 438 ಕಾರ್ಮಿಕರು ಮರಳಿ ಜಿಲ್ಲೆಗೆ ಆಗಮಿಸಿದ್ದಾರೆ. ಕಾರ್ಮಿಕರು ಬಾಗಲಕೋಟೆ, ಬಾದಾಮಿ, ಇಲಕಲ್ಲ, ಹುನಗುಂದ ತಾಲೂಕಿನವರಾಗಿದ್ದು, ನವನಗರದ ನೂತನ ಬಸ್‌ ನಿಲ್ದಾಣಕ್ಕೆ ಬಂದಿದ್ದು, ಆಗಮಿಸಿದ ಕಾರ್ಮಿಕರ ಹೆಸರು ಮತ್ತು ಮೊಬೈಲ್‌ ನಂಬರ್‌ ಗಳನ್ನು ಪಡೆದುಕೊಂಡು ಅವರನ್ನು ಅದೇ ಬಸ್‌ಗಳ ಮೂಲಕ ಅವರ ಊರುಗಳಿಗೆ ಕಳುಹಿಸಿ ಕೊಡಲಾಯಿತು.

ಬಂದಂತಹ ಕಾರ್ಮಿಕರನ್ನು ಕಡ್ಡಾಯವಾಗಿ 14 ದಿನಗಳ ಹೋಮ್‌ ಕ್ವಾರಂಟೆ„ನ್‌ ಮಾಡಿ, ಅವರ ಮನೆಯ ಬಾಗಿಲಿಗೆ ಸ್ಟಿಕರ್‌ ಸಹ ಅಂಟಿಸಲಾಗುತ್ತಿದೆ. ಅಲ್ಲದೇ 14 ದಿನಗಳ ಕಾಲ ಆರೋಗ್ಯದ ಮೇಲೆ ನಿಗಾ ವಹಿಸಲಾಗುವುದು ಎಂದು ಕೊವಿಡ್‌ ವಿಶೇಷ ಅಪರ ಜಿಲ್ಲಾಧಿಕಾರಿ ಬಸವರಾಜ ಸೋಮಣ್ಣವರ ತಿಳಿಸಿದರು.

ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಕಾರ್ಮಿಕರ ಮಾಹಿತಿ ಸಂಗ್ರಹಿಸಿಟ್ಟುಕೊಂಡು ನಿಗಾ ವಹಿಸಲು ಸೂಚಿಸಲಾಯಿತು. ಜಿಲ್ಲೆಗೆ ಆಗಮಿಸಿದ ಕಾರ್ಮಿಕರು ಬಾದಾಮಿ ತಾಲೂಕಿನ ಮುಷ್ಟಿಗೇರಿ, ಕರಡಿಗುಡ್ಡ, ತೋಗುಣಸಿ, ಕಬ್ಬಲಗೇರಿ, ಕೆಂದೂರ, ಹೊಸೂರ, ನರೇನೂರ, ಮುತ್ತಲಗೇರಿ, ಇಳಕಲ್ಲ ತಾಲೂಕಿನ ಕಂದಗಲ್ಲ, ಹುನಗುಂದ ತಾಲೂಕಿನ ಬೆನಕನಡೋಣಿ, ಬಲಕುಂದಿ, ಧಮ್ಮೂರ, ಬೀಳಗಿ ತಾಲೂಕಿನ ಗಿರಿಸಾಗರ, ಬಾಗಲಕೋಟೆ ತಾಲೂಕಿನ ಗಂಗೂರ, ಚಿಕ್ಕಕೊಡಗಲಿ, ಗುಳೇದಗುಡ್ಡ ತಾಲೂಕಿನ ಲಾಯದಗುಂದಿ, ನಾಗರಾಳ, ನಾಗರಾಳ ಎಸ್‌. ಕೆ ಗ್ರಾಮದವರಾಗಿದ್ದಾರೆ.ಮಂಗಳೂರು ಮತ್ತುಉಡುಪಿ ಜಿಲ್ಲಾಡಳಿತದಿಂದ ಬಂದ ಮಾಹಿತಿ ಮೇರೆಗೆ ಬಾಗಲಕೋಟೆ ಜಿಲ್ಲಾಡಳಿತ ನವನಗರದ ಬಸ್‌ ನಿಲ್ದಾಣಕ್ಕೆ ಆಗಮಿಸದ ಕಾರ್ಮಿಕರ ಮಾಹಿತಿ ಪಡೆದು ಸುರಕ್ಷಿತವಾಗಿ ಮನೆಯಲ್ಲಿಯೇ ಇರುವಂತೆ ತಿಳಿಸಲಾಯಿತು.

ತಾಲೂಕು ವೈದ್ಯಾಧಿಕಾರಿ ಡಾ| ಬಸವರಾಜ ಜಿ.ಹುಬ್ಬಳ್ಳಿ ಕಾರ್ಮಿಕರ ಥರ್ಮಲ್‌ ಸ್ಕ್ರೀನಿಂಗ್‌ ಪರೀಕ್ಷೆ ಮಾಡಿದರು. ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ, ತಹಶೀಲ್ದಾರ್‌ ಗುರುಸಿದ್ದಯ್ಯ ಹಿರೇಮಠ, ಜಿಲ್ಲಾ ಕಾರ್ಮಿಕ ಅ ಧಿಕಾರಿ ಬಿ.ಆರ್‌. ಜಾದವ, ಯೋಜನಾ ಸಂಸ್ಥೆ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next