Advertisement

ಪಕ್ಷ ಭೇದ ಮರೆತು ಕಾರ್ಯನಿರ್ವಹಿಸಿ: ದಡೇಸುಗೂರು

01:14 PM May 29, 2022 | Team Udayavani |

ಕನಕಗಿರಿ: ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪಕ್ಷ ಭೇದ ಮರೆತು ಎಲ್ಲ ವಾರ್ಡ್‌ಗಳ ಸದಸ್ಯರು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.

Advertisement

ಅವರು ಪಟ್ಟಣದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ನಗರಾಭಿವೃದ್ಧಿ ಹಾಗೂ ಪಪಂ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿವಿಧ ಸಾಲಿನಲ್ಲಿ ಮಂಜೂರಾದ ಯೋಜನೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ.ಪಂ. ವತಿಯಿಂದ 17 ವಾರ್ಡ್‌ಗಳಲ್ಲಿ ಬಡವರನ್ನು, ಮಧ್ಯಮ ವರ್ಗದವರನ್ನು ಗುರುತಿಸಿ ಮನೆ ಇಲ್ಲದವರಿಗೆ 2021-22ನೇ ಸಾಲಿನ ಡಾ| ಬಿ.ಆರ್‌. ಅಂಬೇಡ್ಕರ್‌ ಮತ್ತು ವಾಜಪೇಯಿ ವಸತಿ ಯೋಜನೆಯಡಿ 50 ಮನೆಗಳನ್ನು ಮಂಜೂರು ಮಾಡಿದ್ದು, ಜನರು ಈ ಯೋಜನೆಗಳ ಸದ್ಬಳಕೆ ಪಡೆದುಕೊಂಡು ಅಚ್ಚುಕಟ್ಟಾಗಿ ಮನೆಗಳನ್ನು ನಿರ್ಮಿಸಿ ನೆಮ್ಮದಿಯಿಂದ ಜೀವನ ನಡೆಸಬೇಕು. ಹಾಗೆಯೆ ನೂತನವಾಗಿ ಆಯ್ಕೆಯಾದ ಪಪಂ ಸದಸ್ಯರು ವಾರ್ಡ್‌ಗಳಲ್ಲಿ ಜನರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ಪಕ್ಷ ಭೇದ ಮರೆತು ಕಾರ್ಯನಿರ್ವಹಿಸುವ ಮೂಲಕ ಜನರ, ವಾರ್ಡ್‌ಗಳ ಅಭಿವೃದ್ಧಿಗೆ ಶ್ರಮಿಸಬೇಕೆಂದು ಹೇಳಿದರು.

ನಂತರ ಪಪಂ ಸದಸ್ಯ ಅನಿಲ ಬಿಜ್ಜಳ ಮಾತನಾಡಿ, ಈಗಾಗಲೇ ಪಟ್ಟಣದಲ್ಲಿ ಎಲ್ಲಾ ವಾರ್ಡ್‌ಗಳಲ್ಲಿ ಸಿ.ಸಿ. ರಸ್ತೆಗಳು ನಿರ್ಮಾಣಗೊಂಡಿದ್ದು, ಇನ್ನೂ ಒಂದೆರೆಡು ವಾರ್ಡ್‌ಗಳ ಸಿ.ಸಿ. ರಸ್ತೆಗಳನ್ನು ನಿರ್ಮಾಣ ಮಾಡಬೇಕಾಗಿದೆ. ಅಲ್ಲದೇ ಕುಡಿಯುವ ನೀರಿನ ಘಟಕ ಮುಂತಾದ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಲು ಕ್ಷೇತ್ರದ ಶಾಸಕರ ಸಹಕಾರ ಪ್ರಮುಖವಾಗಿದೆ. ವಾರ್ಡ್‌ಗಳಲ್ಲಿ ಜನರು ಹೆಚ್ಚಾನೆಚ್ಚು ಬೇಡಿಕೆಗಳನ್ನು ಪೂರೈಸಲು ಹೆಚ್ಚಿನ ಅನುದಾನವನ್ನು ಶಾಸಕರು ನೀಡಿ ಜನರ ಸೇವೆಗೆ ಪಾತ್ರರಾಗಲು ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.

ಇದೇ ವೇಳೆ ಎಸ್‌ಎಫ್‌ಸಿ ಅನುದಾನದ ಅಡಿಯಲ್ಲಿ 2016-17ರಿಂದ 2019-20ನೇ ಸಾಲಿನ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ವಿದ್ಯುತ್‌ ಸೋಲಾರ್‌ ದೀಪ ವಿತರಿಸಲಾಯಿತು. ಹಾಗೆಯೇ 2020-21ನೇ ಸಾಲಿನ ಎಸ್‌ಎಫ್‌ಸಿ ಅನುದಾನದಡಿಯಲ್ಲಿ ಅಂಗವಿಕಲ, ಬುದ್ಧಿ ಮಾಂದ್ಯ ಮಕ್ಕಳಿಗೆ ಎಂ.ಆರ್‌. ಕಿಟ್‌ ವಿತರಿಸಲಾಯಿತು.

Advertisement

ಈ ಸಂದರ್ಭದಲ್ಲಿ ಪಪಂ ಸದಸ್ಯರಾದ ಸಂಗಪ್ಪ ಸಜ್ಜನ್‌, ಹನುಮಂತ ಬಸರಿಗಿಡದ್‌, ಸಿದ್ದೇಶ ಕಲಾºಗಿಲಮಠ, ಕಂಠಿರಂಗ ನಾಯಕ, ರಾಕೇಶ ಕಂಪ್ಲಿ, ಶೇಷಪ್ಪ ಪೂಜಾರ, ರಾಜಾಸಾಬ್‌ ನಂದಾಪುರ, ನಂದಿನಿ ರೆಡ್ಡಿ, ಸರಸ್ವತಿ, ಹುಸೇನ್‌ ಚಳ್ಳಮರದ್‌, ಸುರೇಶ ಗುಗ್ಗಳಶೆಟ್ರ, ಶರಣೇಗೌಡ ಪಾಟೀಲ್‌, ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ನಾಮ ನಿರ್ದೇಶಿತ ಸದಸ್ಯ ರಾಚಪ್ಪ ಬ್ಯಾಳಿ, ಸಿಬ್ಬಂದಿಗಳಾದ ಪ್ರಕಾಶ ಮಹಿಪತಿ, ಪುರುಷೋತ್ತಮ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next