Advertisement
ನಗರದ ಕೋಚಿಮುಲ್ ಶಿಬಿರ ಕಚೇರಿ ಆವರಣದಲ್ಲಿ ತಾಲೂಕು ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮೈತ್ರಿ ಧರ್ಮದಂತೆ ಸಂಸದ ಕೆ.ಎಚ್.ಮುನಿಯಪ್ಪ ಅವರ ಸೂಚನೆ ಮೇರೆಗೆ, ತಾಲೂಕು ಕಾಂಗ್ರೆಸ್ ಮುಖಂಡರು ಪಕ್ಷ ಬೆಂಬಲಿತ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸದೇ, ತಮ್ಮ ಗೆಲುವಿಗೆ ಶ್ರಮಿಸಿದ್ದಾರೆ. ಯಾವುದೇ ಸಂಘಗಳೊಂದಿಗೆ ದ್ವೇಷ ಸಾಧಿಸದೇ ತಾಲೂಕಿನ 174 ಡೇರಿಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
Related Articles
Advertisement
ಗೆಲುವಿಗೆ ಶ್ರಮ: ಈ ಚುನಾವಣೆಯಲ್ಲಿ ತಾಲೂಕಿನಲ್ಲಿ ಸಂಸದ ಕೆ.ಎಚ್.ಮುನಿಯಪ್ಪ ಬೆಂಬಲಿತ ಕಾಂಗ್ರೆಸ್ ಮುಖಂಡರಾದ ಜಿ.ರಾಮಲಿಂಗಾರೆಡ್ಡಿ ಆವಣಿ ಬ್ಲಾಕ್ ಅಧ್ಯಕ್ಷ ಅನಂದ ರೆಡ್ಡಿ, ಜಿಪಂ ಸದಸ್ಯ ಅರವಿಂದ್, ಉತ್ತನೂರು ಶ್ರೀನಿವಾಸ್, ಪಕ್ಷದ ಮುಖಂಡರು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದು, ಧನ್ಯವಾದ ಸಲ್ಲಿಸಿದರು.
ಕೆಲವರಿಂದ ಕ್ಷೇತ್ರ ಕಲುಷಿತ: ಜೆಡಿಎಸ್ ಮುಖಂಡ ಆಲಂಗೂರು ಶಿವಣ್ಣ ಮತ್ತು ಯುವ ಮುಖಂಡ ಕಲ್ಲುಪಲ್ಲಿ ಪ್ರಕಾಶ್ ಮಾತನಾಡಿ, ಐದು ವರ್ಷಗಳಿಂದ ತಾಲೂಕಿನಲ್ಲಿದ್ದ ನಿರ್ದೇಶಕರ ದುರಾಡಳಿತದಿಂದ ಬೇಸತ್ತಿದ್ದ ಉತ್ಪಾದಕರ ಸಂಘಗಳ ಮತದಾರರು ಈ ಬಾರಿ ಜೆಡಿಎಸ್ ಅಭ್ಯರ್ಥಿ ಕಾಡೇನಹಳ್ಳಿ ನಾಗರಾಜ್‌ಗೆ ಮತ ನೀಡಿ ಗೆಲುವಿಗೆ ಶ್ರಮಿಸಿದ್ದಾರೆ. ಅಲ್ಲದೇ, ಸಹಕಾರಿ ಕ್ಷೇತ್ರದಲ್ಲಿ ಹಲವು ಮಹನೀಯರು ಶ್ರಮಿಸಿ ತಮ್ಮ ಹೆಸರನ್ನು ಉಳಿಸಿ ಹೋಗಿದ್ದಾರೆ. ಅಂತಹ ಕ್ಷೇತ್ರವನ್ನು ಕೆಲವರು ಹಣ, ಆಮಿಷಗಳ ಮೂಲಕ ಕಲುಷಿತಗೊಳಿಸಿದ್ದು ಸರಿಯಲ್ಲ ಎಂದರು. ತಾಲೂಕು ಜೆಡಿಎಸ್ ಕಾರ್ಯದರ್ಶಿ ನಲ್ಲೂರು ರಘುಪತಿರೆಡ್ಡಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ತೇಜೋರಮಣ, ಜಂಟಿ ಕಾರ್ಯದರ್ಶಿ ಕವತನಹಳ್ಳಿ ಮುನಿಶಾಮಿಗೌಡ, ಜಿಪಂ ಮಾಜಿ ಸದಸ್ಯರಾದ ಬಿ.ವಿ.ಶ್ಯಾಮೇಗೌಡ, ಶ್ರೀನಿವಾಸ್ ತಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಶ್ರೀನಿವಾಸರೆಡ್ಡಿ, ಆರ್‌ಎಂಸಿ ಮಾಜಿ ಅಧ್ಯಕ್ಷ ಸಿ.ರಘುಪತಿ, ಎಚ್.ಗೊಲ್ಲಹಳ್ಳಿ ಸತೀಶ್, ಸನ್ಯಾಸಪಲ್ಲಿ ತಿಮ್ಮರಾಜು, ರೋಟರಿ ಅಧ್ಯಕ್ಷ ಪಿ.ಎಸ್.ರಮೇಶ್, ರೆಡ್ಡಪ್ಪರೆಡ್ಡಿ, ಚಿನ್ನ ಹಳ್ಳಿ ಗೋಪಾಲ್, ನಾಗಮಂಗಲ ಶಂಕರಪ್ಪ ಇದ್ದರು.