Advertisement

ಸುಖೋಯ್‌ಗೆ ಬ್ರಹ್ಮೋಸ್‌ ಅಳವಡಿಕೆ ಕಾರ್ಯ ಶುರು

07:40 AM Dec 18, 2017 | Harsha Rao |

ಹೊಸದಿಲ್ಲಿ:  ಭಾರತೀಯ ವಾಯುಪಡೆ (ಐಎಎಫ್) ಯನ್ನು ತಾಂತ್ರಿಕವಾಗಿ ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ 40 ಸುಖೋಯ್‌ ವಿಮಾನಗಳಿಗೆ ಬ್ರಹ್ಮೋಸ್‌ ಸೂಪರ್‌ ಸಾನಿಕ್‌ ಕ್ಷಿಪಣಿಗಳನ್ನು ಅಳವಡಿಸುವ ಕಾರ್ಯ ಆರಂಭವಾಗಿದೆ. ನಿಗದಿತ ದಿನಾಂಕದ ಒಳಗಾಗಿ ಅದು ಮುಕ್ತಾಯವಾಗಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದೆ. ಆದರೆ ಯಾವಾಗ ಅದು ಮುಕ್ತಾಯವಾಗಲಿದೆ ಎಂಬ ಬಗ್ಗೆ ಮಾಹಿತಿಯನ್ನು ಐಎಎಫ್ ನೀಡಿಲ್ಲ. ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನ‌ ಎಂಜಿನಿಯರ್‌ಗಳು ವಿಮಾನದ ತಾಂತ್ರಿಕ ಭಾಗಗಳನ್ನು ಮೇಲ್ದರ್ಜೆಗೆ ಏರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. 2020ರ ವೇಳೆಗೆ ಅದು ಮುಕ್ತಾಯವಾಗಲಿದೆ. ನ.22ರಂದು ಈ ಸೂಪರ್‌ ಸಾನಿಕ್‌ ಕ್ಷಿಪಣಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next