Advertisement

ಜನರ ವಿಶ್ವಾಸ ಗಳಿಸಿ ಕೆಲಸ ಮಾಡಿ: ರಮೇಶ

05:30 PM Mar 30, 2020 | Suhan S |

ಗೋಕಾಕ: ಭಾರತ ಲಾಕ್‌ಡೌನ್‌ ಸಂಪೂರ್ಣ ಯಶಸ್ವಿಗೊಳಿಸಲು ಅಧಿಕಾರಿಗಳು ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

Advertisement

ಗƒಹ ಕಚೇರಿಯಲ್ಲಿ ರವಿವಾರ ತಾಲೂಕು ಆಡಳಿತ, ನಗರಸಭೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜನರಲ್ಲಿ ಕೋವಿಡ್ 19 ಭೀತಿ ಇದ್ದರೂ ಅದರಿಂದ ಹೇಗೆ ಬಚಾವಾಗಬೇಕು ಎಂಬ ಕುರಿತು ತಿಳಿವಳಿಕೆ ಇಲ್ಲವಾದ್ದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಷಯವನ್ನು ಮನದಟ್ಟು ಮಾಡಬೇಕಿದೆ. ಹೀಗಾಗಿ, ಅರಿವು ಮೂಡಿಸಲು ಪೊಲೀಸ್‌ ಇಲಾಖೆ ಒತ್ತು ನೀಡಬೇಕೇ ಹೊರತು ಹೆದರಿಸಿ ಇಲ್ಲವೇ ಬೆದರಿಸುವ ಮೂಲಕ ಅಲ್ಲ ಎಂದು ನುಡಿದರು.

ಸ್ಥಳೀಯ ಸದಸ್ಯರು ತಿಳಿವಳಿಕೆ ನೀಡಲಿ:  ನಗರ ಹಾಗೂ ತಾಲೂಕಿನ ಸ್ಥಳೀಯ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲಿ ಏ. 14 ರತನಕ ದಿನಂಪ್ರತಿ ಸಂಚರಿಸಿ ಲಾಕ್‌ ಡೌನ್‌ ಉಲ್ಲಂಘಿಸದಂತೆ ಜನತೆಗೆ ತಿಳಿವಳಿಕೆ ನೀಡಬೇಕು ಎಂದು ಕೋರಿದರು.

ಬಡಜನತೆಗೆ ಕಿರುಕಳ ಆಗದಂತಿರಲಿ: ಅಧಿಕಾರಿಗಳು ಕೋವಿಡ್‌-19 ನಿಯಂತ್ರಣಕ್ಕಾಗಿ ಎಂಥದ್ದೇ ಕ್ರಮ ಜರುಗಿಸಲಿ. ಆದರೆ ಬಡ ಜನತೆಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಚಿವ ರಮೇಶ ಜಾರಕಿಹೊಳಿ ಅ ಕಾರಿಗಳಿಗೆ ಸೂಚಿಸಿದರು.

ವರ್ತಕರು ಸಂಯಮತೆ ಪ್ರದರ್ಶಿಸಲಿ: ಜನತೆಗೆ ಜೀವನಾವಶ್ಯಕ ವಸ್ತುಗಳ ಸಿಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ವರ್ತಕರು ದರ ಹೆಚ್ಚಳ, ಕೃತಕ ಕೊರತೆ ಸೃಷ್ಟಿಸಬಾರದು ಎಂದು ಮನವಿ ಮಾಡಿದರು. ತಪ್ಪಿದಲ್ಲಿ ವ್ಯಾಪಾರ ವಹಿವಾಟನ್ನು ಎಪಿಎಂಸಿ ಸಮಿತಿ ವ್ಯಾಪ್ತಿಗೊಳಪಡಿಸಲಾಗುವುದು ಎಂದು ಸಚಿವರು ಎಚ್ಚರಿಸಿದರು. ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ಮತ್ತು ತಾಲೂಕು ಆರೋಗ್ಯ ಅಧಿಕಾರಿ ಡಾ| ರವೀಂದ್ರ ಅಂಟಿನ ತಾಲೂಕಿನ ಸದ್ಯದ ಸ್ಥಿತಿಗತಿ ವಿವರಿಸಿದರು. ಬೆಳಗ್ಗೆ 7ರಿಂದ 10ರವರೆಗೆ ನಿರಾತಂಕವಾಗಿ ಅಗತ್ಯ ವಸ್ತುಗಳ ಮಾರಾಟ ನಡೆಯುತ್ತಿದ್ದು, ಅಗತ್ಯ ಎನಿಸಿದರೆ ಇನ್ನೂ ಸಮಯ ಹೆಚ್ಚಿಸುವ ಕುರಿತು ಪರಿಶೀಲಿಸಲಾಗುವುದು. ಯಾವುದೇ ಕೋವಿಡ್ 19  ಸೋಂಕು ಪ್ರಕರಣ ತಾಲೂಕಿನಲ್ಲಿ ವರದಿಯಾಗಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಡಿವೈಎಸ್ಪಿ ಪ್ರಭು ಡಿ.ಟಿ., ಗೋಕಾಕ ನಗರಸಭೆ ಪ್ರಭಾರಿ ಪೌರಾಯುಕ್ತ ಶಿವಾನಂದ ಹಿರೇಮಠ, ಇತರರು ಇದ್ದರು. ನಂತರ ಸಚಿವರು ನಗರಸಭೆ ಸದಸ್ಯ ಎಸ್‌.ಎ.ಕೋತವಾಲ ಜೊತೆ ನಗರದಾದ್ಯಂತ ಬೈಕ್‌ ಮೇಲೆ ಸಂಚರಿಸಿ ಪರಿಸ್ಥಿತಿ ವೀಕ್ಷಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next