Advertisement
ಮಳೆ ಕೊಯ್ಲಿನ ಬಗ್ಗೆ ರಾಜೇಂದ್ರ ಕಲಾºವಿ ಮಾತನಾಡಿದರು. ನೀರಿಂಗಿಸುವಿಕೆ ಮತ್ತು ನೀರುಳಿತಾಯದ ಆವಶ್ಯಕತೆ, ನೀರಿಂಗಿಸುವಿಕೆಯಿಂದ ಭವಿಷ್ಯಕ್ಕಾಗುವ ಪ್ರಯೋಜನಗಳು, ಮಳೆಕೊಯ್ಲು ಅಳವಡಿಕೆಯ ಅಗತ್ಯ, ಮಳೆಕೊಯ್ಲು ಅಳವಡಿಸುವ ಸರಳ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಅಲ್ಲದೆ, ನೆರೆದಿದ್ದ ಜನರಿಗೆ ಮಳೆಕೊಯ್ಲು ಬಗ್ಗೆ ಇದ್ದ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿದರು.
Related Articles
ಹಳೆಯಂಗಡಿ ತೋಕೂರು ನಿವಾಸಿ ನಾರಾಯಣ್ ಜಿ. ಕೆ. ಅವರು ಕಳೆದ ಒಂದು ತಿಂಗಳ ಹಿಂದೆ ತಮ್ಮ ಮನೆಯ ಬಾವಿಗೆ ಮಳೆಕೊಯ್ಲು ಅಳವಡಿಸಿದ್ದಾರೆ. ದೊಡ್ಡ ಸ್ಲಾಬ್‌ನಿಂದ ಸಿಟೌಟ್ ಸ್ಲಾಬ್‌ಗ ನೀರು ಹಾಯಿಸಿ ಅಲ್ಲಿಂದ ಟ್ಯಾಂಕ್‌ಗೆ ನೀರು ಬಿಟ್ಟು, ಶುದ್ಧೀಕೃತ ನೀರನ್ನು ಬಾವಿಗೆ ಬೀಳುವಂತೆ ನೋಡಿಕೊಂಡಿದ್ದಾರೆ. “ಉದಯವಾಣಿ ಮಳೆಕೊಯ್ಲು ಅಭಿಯಾನ ಮಳೆಕೊಯ್ಲು ಅಳವಡಿಕೆಗೆ ಸಹಕಾರಿಯಾಯಿತು. ಮುಂದಿನ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಬಗ್ಗೆ ಆತಂಕ ಎದುರಾಗುವುದಿಲ್ಲ ಎನ್ನುವ ವಿಶ್ವಾಸವಿದೆ’ ಎನ್ನುತ್ತಾರೆ.
Advertisement
ನೀವೂ ಅಳವಡಿಸಿ, ವಾಟ್ಸಪ್ ಮಾಡಿಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆ, ಸಂಘ- ಸಂಸ್ಥೆ, ಧಾರ್ಮಿಕ ಕೇಂದ್ರಗಳಲ್ಲಿ ಅಳವಡಿಸುತ್ತಿದ್ದಾರೆ. “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆ, ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000