ಗೌರಿಬಿದನೂರು: ಇತಿಹಾಸ, ಶಿಕ್ಷಣ, ಸಾಹಿತ್ಯಕ್ಕೆ ಹೆಸರಾದ ಗೌರಿಬಿದನೂರಿನಲ್ಲಿ ದಶಕದಿಂದ ನಿರ್ಮಿಸುತ್ತಿರುವ ಸಾಹಿತ್ಯ ಸದನ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸುತ್ತಿಲ್ಲ.
ನಾಡಿನ ಹಿರಿಯ ಸಾಹಿತಿಗಳ ಪರಿಚಯ, ಸಾಹಿತ್ಯ ಚಟುವಟಿಕೆಗಳ ಉದ್ದೇಶ ಹೊತ್ತು ನಗರದ ಡಾ.ಎಚ್.ಎನ್.ಭವನ ಮುಂಭಾಗದಲ್ಲಿ ಸುಸಜ್ಜಿತ ಸಾಹಿತ್ಯ ಸದನ ನಿರ್ಮಾಣಕ್ಕೆ ಶಾಸಕ ಎನ್. ಎಚ್.ಶಿವಶಂಕರ ರೆಡ್ಡಿ ಅಡಿಗಲ್ಲು ಹಾಕಿದ ನಂತರ ನಿರ್ಮಿತಿ ಕೇಂದ್ರ ಸಂಸ್ಥೆಯು ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿತ್ತು.
ಇದನ್ನೂ ಓದಿ;- ಎಸಿಬಿಯಿಂದ ಭ್ರಷ್ಟರ ಬೇಟೆ: ನೀರಿನ ಪೈಪ್ ನಿಂದ ಉದುರಿದ ನೋಟಿನ ಕಂತೆಗಳು
ನೆಲ ಅಂತಸ್ತು ಮುಗಿದ ನಂತರ ಕಾಮಗಾರಿ ದಿಢೀರ್ ನಿಂತುಹೋಗಿದೆ. ಏಳೆಂಟು ವರ್ಷ ಗಳಿಂದ ಇದರ ನಿರ್ಮಾಣ ಕಾರ್ಯದ ಬಗ್ಗೆ ಯಾರೊಬ್ಬರೂ ಆಸಕ್ತಿ ವಹಿಸಲಿಲ್ಲ ಎಂದು ನಾಮ ನಿರ್ದೇಶಿತ ನಗರಸಭಾ ಸದಸ್ಯ ಡಿ.ಜೆ.ಚಂದ್ರಮೋಹನ್ ತಿಳಿಸಿದ್ದಾರೆ. ನಗರದಲ್ಲಿ ಸಾಹಿತ್ಯ ಚಟುವಟಿಕೆಗಳಿಗೆ ಸದನ ಅತ್ಯವಶ್ಯಕವಾಗಿದೆ. ಜೊತೆಗೆ ಇಂದಿನ ಯುವ ಪೀಳಿಗೆಗೆ ಈ ಭವನದಿಂದ ಸಾಹಿತಿ ಗಳ ಬಗ್ಗೆ ಸಮಗ್ರ ಮಾಹಿತಿಯೊಂದಿಗೆ ಒಂದು ರೀತಿ ಜ್ಞಾನ ಸೌಧವಾಗಿ ಅದು ಈ ವೇಳೆಗೆ ಮಾರ್ಪಾಟಾಗಬೇಕಿತ್ತು. ಶಾಸಕ ಶಿವಶಂಕ ರರೆಡ್ಡಿ ಈ ಬಗ್ಗೆ ಗಮನ ಹರಿಸಬೇಕಿತ್ತು.
ಎಲ್ಲಕ್ಕೂ ಮಿಗಿಲಾಗಿ ಸಮಸ್ತ ಕನ್ನಡಿಗರ ಪ್ರಾತಿ ನಿಧಿಕ ಸಂಸ್ಥೆಯಾದ ಜೊತೆಗೆ ಶತಮಾನ ಪೂರೈಸಿದ ಕನ್ನಡ ಸಾಹಿತ್ಯ ಪರಿಷತ್ ಇಲ್ಲಿನ ಘಟಕಕ್ಕೆ ಸೂಕ್ತ ಕಚೇರಿ ಕೂಡ ಇಲ್ಲ. ಹಾಗಾಗಿ ಪರಿಷತ್ತಿನ ಸಣ್ಣ ಪುಟ್ಟ ಚಟುವಟಿಕೆಗಳಿಗೂ ಸಾಹಿತ್ಯ ಸದನ ಅನುಕೂಲ ಆಗುತ್ತೆ. ಸಂಬಂ ಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.