Advertisement

ಅಶಕ್ತರಿಗೆ ಮನೆ ನಿರ್ಮಾಣದ ಕೆಲಸವು ದೇವ ಕಾರ್ಯ: ಸತೀಶ್‌ ಅಡಪ್ಪ

11:17 PM Apr 29, 2019 | Team Udayavani |

ಮಹಾನಗರ: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು, ಸೋಮೇಶ್ವರ ಬಂಟರ ಸಂಘ, ಲಯನ್ಸ್‌ ಕ್ಲಬ್‌ ಕಾವೇರಿ, ಮಂಗಳೂರು ಸಹಯೋಗ ದೊಂದಿಗೆ ಸೋಮೇಶ್ವರ ಗ್ರಾಮದ ಪಿಲಾರ್‌ ದಾರಂದ ಬಾಗಿಲಿನಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರ ಬಹುರೂಪಿತ ಕನಸಿನ “ಆಶ್ರಯ’ ಯೋಜನೆಯ ಮುಖಾಂತರ ವಿನೋದ ಶೆಟ್ಟಿ ಅವರಿಗೆ ಅವರ 2.5 ಸೆಂಟ್ಸ್‌ ಜಾಗದ ನಿವೇಶನದಲ್ಲಿ ನೂತನವಾಗಿ ನಿರ್ಮಿಸಿದ ಮನೆ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

Advertisement

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಗೌರವ ಜತೆ ಕಾರ್ಯದರ್ಶಿ ಸತೀಶ್‌ ಅಡಪ್ಪ ಸಂಕಬೈಲ್‌ ಮಾತನಾಡಿ, ಅಶಕ್ತ ಫಲಾನುಭವಿಗಳಿಗೆ ಮನೆಯನ್ನು ನಿರ್ಮಿಸಿಕೊಡುವ ಕೆಲಸವು ಒಂದು ದೇವ ಕಾರ್ಯ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಭಾಗವಹಿಸಿ ಇಂತಹ ಯೋಜನೆಗಳು ಫಲಿಸುವುದು ಸ್ತುತ್ಯಾರ್ಹವಾದ ಒಂದು ಮಾದರಿ ನಡೆ ಎಂದು ಹೇಳಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿಕಟಪೂರ್ವ ಗೌರವ ಕಾರ್ಯದರ್ಶಿ ವಿಜಯ ಪ್ರಸಾದ್‌ ಆಳ್ವ, ಲಯನ್ಸ್‌ ಜಿಲ್ಲಾ ಗವರ್ನರ್‌ ದೇವದಾಸ್‌ ಭಂಡಾರಿ, ಮಾಜಿ ಜಿಲ್ಲಾ ಲಯನ್‌ ಗವರ್ನರ್‌ ಕವಿತಾ ಶಾಸ್ತ್ರಿ ಶುಭ ಹಾರೈಸಿದರು.

ಸೋಮೇಶ್ವರ ಬಂಟರ ಸಂಘದ ಗೌರವ ಅಧ್ಯಕ್ಷ ಯು. ಸುಧಾಕರ್‌ ಭಂಡಾರಿ, ಅಧ್ಯಕ್ಷ ಪದ್ಮನಾಭ ಶೆಟ್ಟಿ ವರ್ಕಾಡಿ, ಪ್ರಧಾನ ಸಂಚಾಲಕ ಗಂಗಾಧರ ಶೆಟ್ಟಿ ಉಳ್ಳಾಲ, ಲಯನ್ಸ್‌ ಕ್ಲಬ್‌ ಕಾವೇರಿ ಅಧ್ಯಕ್ಷೆ ಶಾಲಿನಿ ರೈ, ಸೋಮೇಶ್ವರ ಬಂಟರ ಸಂಘದ ಯುವ ವಿಭಾಗದ ಅಧ್ಯಕ್ಷ ಯಶು ಪಕ್ಕಳ ತಲಪಾಡಿ, ಸದಸ್ಯರುಗಳಾದ ಮೋಹನ್‌ ಶೆಟ್ಟಿ ಕುಂಪಲ, ಗಣೇಶ್‌ ಶೆಟ್ಟಿ ಬೋಡಂಗಿಲ, ಆನಂದ್‌ ಶೆಟ್ಟಿ, ಪ್ರದೀಪ್‌ ಕಿಲ್ಲೆ, ರಾಜಾರಾಮ ಅಡ್ಯಂತಾಯ, ರವೀಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಒಕ್ಕೂಟದ ಸದಸ್ಯ ಪ್ರತಿನಿಧಿ ಚಂದ್ರಶೇಖರ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next