Advertisement

ಮೀನುಗಾರಿಕಾ ಪುನರ್ವಸತಿ ಯೋಜನೆ ಭರದ ಕಾಮಗಾರಿ

09:13 PM May 24, 2019 | sudhir |

ವಿದ್ಯಾನಗರ: ರಾಜ್ಯದಲ್ಲಿ ಮೀನುಗಾರರಿಗೆ ಎದುರಾಗುವ ವಾಸ್ತವ್ಯ ಸಮಸ್ಯೆಯನ್ನು ಹೋಗಲಾಡಿಸಿ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಮೀನುಗಾರಿಕಾ ಇಲಾಖೆಯು ಪುನರ್ವಸತಿ ಯೋಜನೆ ಕೈಗೊಂಡಿದ್ದು ಜಿಲ್ಲೆಯಲ್ಲಿ ಮನೆಗಳ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ.

Advertisement

ಪಾರೆಕಟ್ಟ್ ಸಮೀಪ ಮೀನುಗಾರರಿಗಾಗಿ 35 ಮನೆಗಳ ನಿರ್ಮಾಣ ಕಾರ್ಯವು ಈಗಾಗಲೇ ಪ್ರಾರಂಭವಾಗಿದ್ದು ಇಲಾಖೆಯು ಪ್ರತಿಯೊಂದು ಮನೆಗೆ 10ಲಕ್ಷ ರೂ.ನಂತೆ 3.50 ಕೋಟಿ ಮೊತ್ತವನ್ನು ಮೀಸಲಿಟ್ಟಿದೆ. ಮೂರು ತಿಂಗಳಿಂದ ಮನೆಗಳ ಕಾಮಗಾರಿಯು ಗುತ್ತಿಗೆದಾರರ ನೇತƒತ್ವದಲ್ಲಿ ನಡೆಯುತ್ತಿದೆ. ಎಲ್ಲಾ 35 ಮನೆಗಳ ಕಾಮಗಾರಿಯು ಒಂದೇ ಹಂತದಲ್ಲಿ ನಡೆಯುತ್ತಿದ್ದು 8 ತಿಂಗಳೊಳಗೆ ಕೆಲಸ ಪೂರ್ತಿ ಗೊಳಿಸಿ ಮನೆಯನ್ನು ಮೀನುಗಾರರಿಗೆ ಬಿಟ್ಟುಕೊಡುವಂತೆ ಇಲಾಖೆ ಆದೇಶಿಸಿದೆ. ಇನ್ನು 5 ತಿಂಗಳಲ್ಲಿ ಮನೆಗಳ ನಿರ್ಮಾಣ ಕಾರ್ಯ ಪೂರ್ತಿಯಾಗಲಿದೆ.

ಕಡಲ್ಕೊರೆತ, ಜಲಪ್ರಳಯದಿಂದ ಉಂಟಾದ ನಾಶದಿಂದಾಗಿ ಹಲವರು ವಸತಿರಹಿತರಾಗಿದ್ದಾರೆ. ಇನ್ನು ಕೆಲವರ ಮನೆಗಳು ಕುಸಿದು ಬೀಳುವ ಸ್ಥಿತಿಯಲ್ಲಿವೆೆ. ಮೀನುಗಾರಿಕಾ ಇಲಾಖೆಯು ಪ್ರತಿ ಫಲಾನುಭವಿಗೂ ರೂ. 10 ಲಕ್ಷದಂತೆ ಧನಸಹಾಯ ಒದಗಿಸಲು ಮುಂದಾಗಿದ್ದು ಈಗಾಗಲೇ ಮೊದಲ ಸುತ್ತಿನ ಮೊತ್ತ ಖಾತೆಗೆ ಜಮಾ ಮಾಡಲಾಗಿದೆ. ಇದರಿಂದಾಗಿ ಮನೆಗಳ ನಿರ್ಮಾಣ ಕಾರ್ಯವೂ ವೇಗವಾಗಿ ಸಾಗುತ್ತಿದೆ. ಒಂದೇ ಪ್ರದೇಶದಲ್ಲಿ 35 ಮನೆಗಳ ನಿರ್ಮಾಣವಾಗುತ್ತಿದೆ. ಫಿಶರೀಸ್‌ ಕಾಲನಿಯಾಗಿ ಅಭಿವೃದ್ದಿ ಹೊಂದುತ್ತಿರುವ ಈ ಪ್ರದೇಶದಲ್ಲಿ ಬೋರ್‌ವೆಲ್‌ ಸ್ಥಾಪಿಸಿ ಆ ಮೂಲಕ ಪ್ರತಿಯೊಂದು ಮನೆಗೂ ನೀರಿ ಸರಬರಾಜು ಮಾಡಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next