Advertisement
ಅವುಗಳಲ್ಲೊಂದು ಮನೆಯಿಂದಲೇ ಕೆಲಸ ಅರ್ಥಾತ್ ವರ್ಕ್ ಫ್ರಂ ಹೋಂ. ಮನೆಯಿಂದ ಆಫೀಸ್ ಕೆಲಸ ಮಾಡುವುದೇನೋ ಸರಿ. ಆದರೆ ಮಧ್ಯಾಹ್ನದ ಹನ್ನೆರಡಕ್ಕೂ ರಾತ್ರಿಯ ಹನ್ನೆರಡಕ್ಕೂ ವ್ಯತ್ಯಾಸವೇ ತಿಳಿಯ ದಂತಾಗಿದೆ. ಜತೆಗೆ ಉಂಡದ್ದೇ ಊಟ, ಮಲಗಿದ್ದೇ ನಿದ್ದೆ ಎನ್ನುವಂತಾಗಿದೆ. ಹೀಗಾ ಗಿ ದೈಹಿಕ ಚಟುವಟಿಕೆ ಅಂತೂ ಸಂಪೂರ್ಣ ಶೂನ್ಯ. ಪರಿಣಾಮ ದೇಹದ ಸಕ್ಕರೆಯ ಅಂಶ, ರಕ್ತದೊತ್ತಡದ ಸಂಪೂರ್ಣ ಏರುಪೇರು, ಶರೀರದಲ್ಲಿ ಕೊಲೆಸ್ಟ್ರಾಲ್ಶೇಖರಣೆ. ಇನ್ನು ನಿದ್ರೆಯ ಸಮಯದ ಬದಲಾವಣೆಯೂ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಶರೀರದ ಜೈವಿಕ ಗಡಿಯಾರದಲ್ಲಾಗುವ ವ್ಯತ್ಯಾಸ ರೋಗನಿರೋಧಕ ಶಕ್ತಿಯು ಕಡಿಮೆಯಾಗಲೂ ಮೂಲ ಕಾರಣ ವಾಗಬಹುದು.
ಬೆಳಗಿನ ವಾಕಿಂಗ್: ಮನೆಯೊಳಗೇ ಅತ್ತಿಂದಿತ್ತ ನಡೆದಾಡುತ್ತಾ ವಾಕಿಂಗ್ ಮಾಡುವುದು ಶರೀರವನ್ನು ಜಾಗೃತ ಗೊಳಿಸುವುದಕ್ಕೆ ಸಹಾಯಕಾರಿ. ಬೆಳಗಿನ ಸಮಯ ಹಲ್ಲುಜ್ಜುತ್ತಾ ನಡೆದಾಡು ವುದರಿಂದ ಸಮಯದ ಸದುಪ ಯೋಗವೂ ಆಗುತ್ತದೆ. ಸೂರ್ಯನಮಸ್ಕಾರ: ಇದಂತೂ ಪೂರ್ತಿ ಶರೀರಕ್ಕೊಂದು ಸಂಪೂರ್ಣ ವ್ಯಾಯಾಮವೆಂದೇ ಹೇಳಬಹುದು. ಹಿಂದೆ ಬಾಗುವುದು, ಮುಂದೆ ಬಾಗುವುದರ ಜತೆಗೆ ಕಾಲುಗಳನ್ನೂ ಸ್ಟ್ರೆಚ್ ಮಾಡುವುದರಿಂದ ಸೊಂಟ, ಕಾಲುಗಳಲ್ಲಿ ರಕ್ತದ ಚಲನೆ ಸರಾಗವಾಗುವುದು. ಇದರಿಂದ ಸೊಂಟ ನೋವು, ಕುತ್ತಿಗೆಯ ಬಿಗಿತ, ಭುಜದ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಸೂರ್ಯ ನಮಸ್ಕಾರವು ಶರೀರದಲ್ಲಿ ಶೇಖರಣೆ ಗೊಂಡಿರುವ ಕೊಲೆಸ್ಟ್ರಾಲ್, ಸಕ್ಕರೆಯ
ಅಂಶ ಕರಗಿಸಲೂ ಸಹಾಯಕಾರಿ.
Related Articles
Advertisement
ಅಷ್ಟೇಕೆ ಕುರ್ಚಿಯಲ್ಲಿ ಕುಳಿತುಕೊಂಡು ಸೂರ್ಯನಮಸ್ಕಾರ ಮಾಡಲೂ ಸಾಧ್ಯವಿದೆ. ಪುರುಸೊತ್ತಿದ್ದಾಗ ಯೂಟ್ಯೂಬ್‌ನಲ್ಲೊಮ್ಮೆ ಜಾಲಾಡಿ.
ಪ್ರಾಣಾಯಾಮ: ಕೆಲವೊಂದು ಸರಳ ಪ್ರಾಣಾಯಾಮದ ಅಭ್ಯಾಸ ಮನಸ್ಸನ್ನು ಸಮಸ್ಥಿತಿಯಲ್ಲಿಡುವುದರ ಜತೆಗೆ ಶ್ವಾಸಕೋಶದ ಕಾರ್ಯಕ್ಷಮತೆ ಹೆಚ್ಚಿಸಲೂ ಅಷ್ಟೇ ಅವಶ್ಯ. ಕುಳಿತಲ್ಲೇ ಕುಳಿತು ಕೆಲಸ ಮಾಡುವುದರಿಂದ ಅಜೀರ್ಣ ಹಾಗೂ ವಾಯುವಿನ ಸಮಸ್ಯೆ ಬಲು ಬೇಗನೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ನಾಲಗೆಯ ಮೂಲಕ ಉಸಿರಾಡೋ ಶೀತಲೀ ಪ್ರಾಣಾಯಾಮ ಅತ್ಯಂತ ಸೂಕ್ತ.
ಜತೆಗೆ ಮಾನಸಿಕ ಒತ್ತಡ ನಿರ್ವಹಣೆಗೆ ಮೂಗಿನ ಹೊಳ್ಳೆಗಳಲ್ಲಿ ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಉಸಿರಾಡುವ ನಾಡೀಶುದ್ಧಿ ಉತ್ತಮ. ಏನೋ ಒಂದು ಜಟಿಲ ಸಮಸ್ಯೆ, ಕೋಡಿಂಗ್ ಏನೋ ಹೊಳೆಯುತ್ತಿಲ್ಲ ಎಂದಾದಲ್ಲಿ ತತ್‌ಕ್ಷಣವೇ ಐದು ನಿಮಿಷ ಈ ಅಭ್ಯಾಸ ಮಾಡಿ. ಮನಸ್ಸು ಚುರುಕಾಗುವು ದು. ಜತೆಗೆ ಮನಸ್ಸನ್ನು ಆಲೋಚನಾರಹಿತ ಸ್ಥಿತಿಗೆ ಕೊಂಡೊ ಯ್ಯುವ ಭ್ರಾಮರೀ ಪ್ರಾಣಾಯಾಮ ಮನಸ್ಸಿನ ಸಮಸ್ಥಿತಿ ಕಾಪಾಡಿಕೊಳ್ಳಲು ಅತ್ಯಂತ ಪರಿಣಾಮಕಾರಿ.
ನಡೆಯುತ್ತ ಮಾತನಾಡುವುದು: ಕೆಲವೊಂದು ಮೀಟಿಂಗ್‌ಗಳನ್ನು ಕುಳಿತಲ್ಲೇ ಕೇಳುವ ಬದಲು ಆಚೀಚೆ ನಡೆದಾಡುತ್ತಾ ಇರಬಹುದು.