Advertisement

ಝರಿಯಲ್ಲಿ  ಸಿಲುಕಿದ ಮರದ ದಿಮ್ಮಿ 

10:33 AM Aug 19, 2018 | Team Udayavani |

ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಜೋಡಿಸುವ ಬಿಸಿಲೆ ಘಾಟ್‌ ರಸ್ತೆಗೆ ಅಲ್ಲಲ್ಲಿ ಬೃಹತ್‌ ಗಾತ್ರದ ಮರಗಳು ಬಿದ್ದು ಸಂಚಾರ ಕಡಿತಗೊಂಡಿದೆ. ಈ ರಸ್ತೆಯ ಪ್ರಸಿದ್ಧ ಶ್ರೀ ಚಾಮುಂಡೇಶ್ವರಿ ಗುಡಿಗೆ ಸ್ವಲ್ಪ ಮಟ್ಟಿನ ಹಾನಿ ಉಂಟಾಗಿದೆ. ಗುಡಿ ಪಕ್ಕ ರಸ್ತೆ ಬದಿ ಇರುವ ನೀರಿನ ಝರಿಯಲ್ಲಿ ಬೃಹತ್‌ ಗಾತ್ರದ ಮರದ ದಿಮ್ಮಿಗಳು ಕೊಚ್ಚಿಕೊಂಡು ಬಂದು ಅಪಾರ ಪ್ರಮಾಣದಲ್ಲಿ ಸಿಕ್ಕಿಹಾಕಿಕೊಂಡಿದೆ. ಇದರ ತೆರವು ಕಾರ್ಯದಲ್ಲಿ ಸುಬ್ರಹ್ಮಣ್ಯ ಪರಿಸರದ ನಾಗರಿಕರು ತೊಡಗಿಕೊಂಡಿದ್ದಾರೆ.

Advertisement

ಚೌಡಮ್ಮನ ಗುಡಿ ಪಕ್ಕದ ಝರಿಯಲ್ಲಿ ಇಷ್ಟೊಂದು ಪ್ರಮಾಣದ ಮರದ ದಿಮ್ಮಿಗಳು ಸಂಗ್ರವಾಗಿರುವುದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ. ಕೆಲವರು ಝರಿಯ ಮೂಲ ಹುಡುಕುತ್ತ ಗುಡ್ಡ ಹತ್ತಿ ಸುಮಾರು ಏಳೆಂಟು ಕಿ.ಮೀ. ದೂರ ಕ್ರಮಿಸಿದ್ದು, ಈ ವೇಳೆ ಅರಣ್ಯದ ಮೇಲಿನ ಗುಡ್ಡದಲ್ಲಿ ಬೃಹತ್‌ ಗಾತ್ರದ ನೀರಿನ ಒರತೆ ಸೃಷ್ಟಿಯಾಗಿ ನೀರು ಉಕ್ಕಿ ಹರಿಯುತ್ತಿರುವುದು ಗೋಚರಿಸಿದೆ. ಇದರ ಪಕ್ಕದಲ್ಲಿ ಗುಡ್ಡ ಜರಿದಿರುವುದು ಮತ್ತು ಮರಗಳು ಧರಾಶಾಯಿಯಾಗಿರುವುದು ಗೋಚರಿಸಿದೆ. ಸ್ಥಳಕ್ಕೆ ತೆರಳಿದ್ದ ವೇಳೆ ಕೂಡ ಅಲ್ಲಿ ಗುಡ್ಡ ಜರಿಯುತ್ತಿತ್ತು ಎಂದು ಸ್ಥಳಕ್ಕೆ ತೆರಳಿದವರು ತಿಳಿಸಿದ್ದಾರೆ. ಸುಮಾರು ಎರಡು ಎಕರೆ ಪ್ರದೇಶದಷ್ಟು ವಿಸ್ತಾರದಲ್ಲಿ ಭೂಕುಸಿತ ಆಗಿರಬಹುದು ಎಂದವರು ಹೇಳಿದ್ದಾರೆ. ದೇವಿ ಗುಡಿ ಪಕ್ಕ ಬಿಸಿಲೆ ರಸ್ತೆಯಲ್ಲಿ ಇತ್ತೀಚೆಗೆ ಕಾಮಗಾರಿ ನಡೆಸಿದ ಸೇತುವೆಯಲ್ಲಿ ಕೂಡ ದಿಮ್ಮಿಗಳು ಸಿಕ್ಕಿ ಹಾಕಿಕೊಂಡಿದೆ. ಇದರಿಂದ ಸೇತುವೆಗೂ ಹಾನಿಯಾಗಿವೆ.

ಗುಡ್ಡದಿಂದ ರಸ್ತೆ ಮೇಲೆ ಗುಡ್ಡದ ಮಣ್ಣು ಮತ್ತು ಮರಗಳ ತೆರವು ಕಾರ್ಯ ಶನಿವಾರ ನಡೆದಿದೆ. ಸಂಗ್ರಹಗೊಂಡ ಮರದ ದಿಮ್ಮಿಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾದರು.

Advertisement

Udayavani is now on Telegram. Click here to join our channel and stay updated with the latest news.

Next