Advertisement

Ayodhya Ram: ನನ್ನ ರಾಮನನ್ನು ಬಿಜೆಪಿಗೆ ಬಿಟ್ಟುಕೊಡುವುದಿಲ್ಲ… ಶಶಿ ತರೂರ್ ಪ್ರತಿಕ್ರಿಯೆ

08:40 AM Feb 05, 2024 | Team Udayavani |

ನವದೆಹಲಿ: ರಾಮ ಮಂದಿರದ ಸಮರ್ಪಣಾ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕರು ಭಾಗವಹಿಸದಿರುವ ಬಗ್ಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯಿಸಿದ್ದಾರೆ. ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದರೆ ಕಾಂಗ್ರೆಸ್ ದೇವರನ್ನು ಕೈಬಿಡುತ್ತಿದೆ ಎಂದರ್ಥವಲ್ಲ ಎಂದು ತರೂರ್ ಹೇಳಿದ್ದಾರೆ. ಇಂಡಿಯಾ ಟುಡೇಗೆ ಶಶಿ ತರೂರ್ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಇಂಡಿಯಾ ಟುಡೆ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತರೂರ್, “ಬಾಲ್ಯದಿಂದಲೂ ರಾಮನನ್ನು ಪ್ರಾರ್ಥಿಸುತ್ತಿರುವವನಾಗಿ ನಾನು ನನ್ನ ರಾಮನನ್ನು ಬಿಜೆಪಿಗೆ ಒಪ್ಪಿಸಲು ಹೋಗುವುದಿಲ್ಲ. ಬಿಜೆಪಿಯು ರಾಮನ ಮೇಲೆ ಯಾವುದೇ ಹಕ್ಕುಸ್ವಾಮ್ಯವನ್ನು ಹೊಂದಿದೆ ಅಥವಾ ದೈವಿಕತೆಯ ಯಾವುದೇ ಅಭಿವ್ಯಕ್ತಿಯನ್ನು ಹೊಂದಿದೆ ಎಂದು ನಾನು ಭಾವಿಸುವುದಿಲ್ಲ ಎಂದು ಹೇಳಿದ್ದಾರೆ.

ಪಕ್ಷದ ಮುಖ್ಯಸ್ಥರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ಅಧೀರ್ ರಂಜನ್ ಚೌಧರಿ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಇದು “ಆರ್‌ಎಸ್‌ಎಸ್ / ಬಿಜೆಪಿ ಕಾರ್ಯಕ್ರಮ” ಆಗಿರುವುದರಿಂದ ಶಂಕುಸ್ಥಾಪನೆ ಸಮಾರಂಭದಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ಹೇಳಿದ್ದರು ಅದರಲ್ಲಿ ತಪ್ಪೇನಿದೆ.

ರಾಮ ಮಂದಿರಕ್ಕೆ ಹೋಗುತ್ತೇನೆ ಆದರೆ ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ ರಾಮನ ಭಕ್ತನಾಗಿ ಹೋಗುತ್ತಿದ್ದೇನೆ ಹೊರತು ಬೇರೆ ಯಾವುದೇ ರಾಜಕೀಯ ವಿಚಾರ ಇರುವುದಿಲ್ಲ ಅಲ್ಲದೆ “ನಾನು ದೇವಸ್ಥಾನಗಳಿಗೆ ಪ್ರಾರ್ಥನೆ ಮಾಡಲು ಹೋಗುವುದರಿಂದ ಬಹುಶಃ ರಾಜಕೀಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ನಾನು ರಾಜಕೀಯ ಮಾಡಲು ಹೋಗುವುದಿಲ್ಲ.

ಜನವರಿ 22 ರಂದು ನಡೆದ ಕಾರ್ಯಕ್ರಮಡಾ ಕುರಿತು ಮಾತನಾಡಿದ ಅವರು ಪ್ರಾಣಪ್ರತಿಷ್ಠೆ ಕಾರ್ಯವನ್ನು ಅರ್ಚಕರು ನಡೆಸಬೇಕಿತ್ತು ಆದರೆ ಇಲ್ಲಿ ಪ್ರಧಾನಿ ಅವರಿಂದ ಮಾಡಿಸಲಾಗಿದೆ ಹಾಗಾಗಿ ಇದು ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ ಎಂದು ಕಿಡಿಕಾರಿದರು. ಅಲ್ಲದೆ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಗೈರಾಗಿರುವುದಕ್ಕೆ ಹಲವರು ಹಿಂದೂ ವಿರೋಧಿಗಳು ಎಂದು ದೂರಿದ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ ತರೂರ್ ನಾವು ಕಾರ್ಯಕ್ರಮಕ್ಕೆ ಬಂದಿಲ್ಲ ಎಂದರೆ ಅದು ಹಿಂದೂ ವಿರೋಧಿ ಎಂದಲ್ಲ ಹಾಗೆ ನೋಡಲು ಹೋದರೆ ನಮ್ಮ ಪಕ್ಷದಲ್ಲಿ ಶೇಕಡಾ 80 ರಷ್ಟು ಮಂದಿ ಇರುವುದು ಹಿಂದುಗಳೇ ಎಂದು ಹೇಳಿದ್ದಾರೆ.

Advertisement

ಇದನ್ನೂ ಓದಿ: Belthangady ಅಕ್ರಮವಾಗಿ 42 ಸಿಮ್‌ಕಾರ್ಡ್‌ ಖರೀದಿಸಿ ಸಿಕ್ಕಿಬಿದ್ದ ಯುವಕರು

Advertisement

Udayavani is now on Telegram. Click here to join our channel and stay updated with the latest news.

Next