Advertisement

Airbags ಕಾರುಗಳಿಗೆ ಆರು ಏರ್‌ಬ್ಯಾಗ್ ನಿಯಮವನ್ನು ಕಡ್ಡಾಯ ಮಾಡುವುದಿಲ್ಲ: ನಿತಿನ್ ಗಡ್ಕರಿ

06:35 PM Sep 13, 2023 | Team Udayavani |

ನವದೆಹಲಿ: ಸರ್ಕಾರ ಕಾರುಗಳಿಗೆ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವುದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿದ್ದಾರೆ.

Advertisement

ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಯಾಣಿಕರ ಸುರಕ್ಷತೆಗಾಗಿ 2023ರ ಅಕ್ಟೋಬರ್‌ನಿಂದ ಆರು ಏರ್‌ಬ್ಯಾಗ್‌ಗಳ ಸುರಕ್ಷತಾ ಮಾನದಂಡವನ್ನು ಜಾರಿಗೆ ತರಲು ಸರ್ಕಾರ ಕಳೆದ ವರ್ಷ ಪ್ರಸ್ತಾಪಿಸಿತ್ತು. ಆದರೆ “ನಾವು ಕಾರುಗಳಿಗೆ ಆರು ಏರ್‌ಬ್ಯಾಗ್‌ಗಳ ನಿಯಮವನ್ನು ಕಡ್ಡಾಯಗೊಳಿಸಲು ಬಯಸುವುದಿಲ್ಲಎಂದು ಸ್ಪಷ್ಟಪಡಿಸಿದರು.

ಕಳೆದ ವರ್ಷ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪ್ರಕಟಣೆಯಲ್ಲಿ ಮೋಟಾರು ವಾಹನದ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು, ಕೇಂದ್ರ ಮೋಟಾರು ವಾಹನಗಳ ನಿಯಮಗಳಿಗೆ ತಿದ್ದುಪಡಿ ಮಾಡುವ ಮೂಲಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿತ್ತು.

ಏಪ್ರಿಲ್ 1, 2021 ರಂದು ಮತ್ತು ನಂತರ ತಯಾರಿಸಲಾದ ವಾಹನಗಳಲ್ಲಿ ಎರಡೂ ಮುಂಭಾಗದ ಆಸನಗಳಿಗೆ ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಲಾಗಿತ್ತು.

ಏರ್‌ಬ್ಯಾಗ್ ಎನ್ನುವುದು ವಾಹನದ ಪ್ರಯಾಣಿಕರ-ಸಂಯಮ ವ್ಯವಸ್ಥೆಯಾಗಿದ್ದು,ಕಾರು ಅಪಘಾತದ ಸಂದರ್ಭಗಳಲ್ಲಿ ಏರ್‌ಬ್ಯಾಗ್‌ಗಳು ಕಾರು ಚಾಲಕರನ್ನು ಹಾಗೂ ಅವರೊಂದಿಗೆ ಪ್ರಯಾಣಿಸುವ ಇತರ ಪ್ರಯಾಣಿಕರ ಜೀವವನ್ನು ರಕ್ಷಿಸುತ್ತವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next