Advertisement

ವಂಡರ್‌ಲಾದಿಂದ ಕೋವಿಡ್ ಸೈನಿಕರಿಗೆ ಪ್ರೋತ್ಸಾಹ

05:23 AM May 09, 2020 | Suhan S |

ರಾಮನಗರ: ಕೋವಿಡ್‌-19 ಸೋಂಕು ತಡೆಗೆ ಬಿಡದಿ ಬಳಿಯಿರುವ ವಂಡರ್‌ ಲಾ ಅಮ್ಯೂಸ್‌ಮೆಂಟ್‌ ಪಾರ್ಕ್‌ ಕೋವಿಡ್ 19 ಸೈನಿಕರನ್ನು ಪ್ರೋತ್ಸಾಹಿಸುವುದನ್ನು ಮುಂದುವರಿಸಿದೆ.

Advertisement

ಬೆಂಗಳೂರಿನ ಅಟ್‌ ತೊಡಬಾಹಟ್‌ ಸಂಸ್ಥೆಗೆ 95 ಪರ್ಸನಲ್‌ ಪ್ರೊಟೆಕ್ಷನ್‌ ಕಿಟ್‌ (ಪಿಪಿಇ)ಗಳನ್ನು ಕೊಡುಗೆ ನೀಡಿದೆ. ಅಟ್‌ ತೋಡಬಾಹಟ್‌ ಸಂಸ್ಥೆಯ ಮೂಲಕ ಆರೋಗ್ಯ ಕಾರ್ಯಕರ್ತರನ್ನು ಬೆಂಬಲಿಸುವುದು ತಮ್ಮ ಉದ್ದೇಶ ಎಂದು ವಂಡರ್‌ಲಾದ ಪ್ರಕಟಣೆ ತಿಳಿಸಿದೆ. ವಂಡರ್‌ ಲಾ ತನ್ನ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಚಟುವಟಿಕೆ ಅಡಿಯಲ್ಲಿ ಈ ಕಿಟ್‌ ವಿತರಿಸಿದೆ ಎಂದು ವಂಡರ್‌ ಲಾ ತಿಳಿಸಿದೆ. ಅಟ್‌ ತೋಡಾºಹಟ್‌ ಸಂಸ್ಥೆ ಪ್ರಕಾಶ್‌ ಮಿಶ್ರ ಪಿಪಿಇ ಕಿಟ್‌ ಸ್ವೀಕರಿಸಿ ವಂಡರ್‌ಲಾದ ಕೊಡುಗೆಗೆ ಕೃತಜ್ಞತೆ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next