Advertisement

ವಿಂಡೀಸಿಗೆ ಸಡ್ಡು ಹೊಡೆದ ವಿಹಾರಿ

02:03 AM Sep 01, 2019 | sudhir |

ಕಿಂಗ್‌ಸ್ಟನ್‌ (ಜಮೈಕಾ): ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಹನುಮ ವಿಹಾರಿ ಮತ್ತೂಂದು ಅಮೋಘ ಪ್ರದರ್ಶನ ನೀಡುವ ಮೂಲಕ ಕಿಂಗ್‌ಸ್ಟನ್‌ ಟೆಸ್ಟ್‌ ಪಂದ್ಯದಲ್ಲಿ ಭಾರತ ದೊಡ್ಡ ಮೊತ್ತದತ್ತ ಸಾಗುತ್ತಿದೆ. ದ್ವಿತೀಯ ದಿನದಾಟದ ಭೋಜನ ವಿರಾಮದ ವೇಳೆ 7 ವಿಕೆಟಿಗೆ 336 ರನ್‌ ಪೇರಿಸಿದೆ.

Advertisement

ರಿಷಭ್‌ ಪಂತ್‌ ಅವರನ್ನು ದಿನದ ಮೊದಲ ಎಸೆತದಲ್ಲೇ ಕಳೆದುಕೊಂಡ ಭಾರತಕ್ಕೆ ಭಾರೀ ಆಘಾತ ಎದುರಾಗಿತ್ತು. ಹೋಲ್ಡರ್‌ ಎಸೆತದಲ್ಲಿ ಪಂತ್‌ ಕ್ಲೀನ್‌ಬೌಲ್ಡ್ ಆಗಿದ್ದರು. ಆದರೆ ವಿಹಾರಿ-ಜಡೇಜ ಸೇರಿಕೊಂಡು ಪರಿಸ್ಥಿತಿಯನ್ನು ನಿಭಾಯಿಸಿದರು. ವಿಹಾರಿ 84, ಇಶಾಂತ್‌ 11 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಅಗರ್ವಾಲ್, ಕೊಹ್ಲಿ ಅರ್ಧ ಶತಕ

ಟೆಸ್ಟ್‌ ಪಂದ್ಯದ ಮೊದಲ ದಿನ ಭಾರತ 5 ವಿಕೆಟಿಗೆ 264 ರನ್‌ ಪೇರಿಸಿತ್ತು. ಬ್ಯಾಟಿಂಗಿಗೆ ಅಷ್ಟೇನೂ ನೆರವು ನೀಡದ ‘ಸಬೀನಾ ಪಾರ್ಕ್‌’ ಟ್ರ್ಯಾಕ್‌ನಲ್ಲಿ ಆರಂಭಕಾರ ಮಾಯಾಂಕ್‌ ಅಗರ್ವಾಲ್, ನಾಯಕ ವಿರಾಟ್ ಕೊಹ್ಲಿ ತಾಳ್ಮೆಯ ಆಟವಾಡಿ ಹೋರಾಟ ಜಾರಿಯಲ್ಲಿರಿಸಿದರು.

ಮೊದಲ ಟೆಸ್ಟ್‌ ಪಂದ್ಯದಲ್ಲಿ ವೈಫ‌ಲ್ಯ ಕಂಡ ಅಗರ್ವಾಲ್ ಇಲ್ಲಿ ಜವಾಬ್ದಾರಿಯುತ ಆಟವಾಡಿ 55 ರನ್‌ ಹೊಡೆದರು. ಅವರ 127 ಎಸೆತಗಳ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಒಳಗೊಂಡಿತ್ತು. ಅಗರ್ವಾಲ್-ಕೊಹ್ಲಿ ಜೋಡಿಯಿಂದ 3ನೇ ವಿಕೆಟಿಗೆ 69 ರನ್‌ ಒಟ್ಟುಗೂಡಿತು. ಭಾರತದ 2 ವಿಕೆಟ್ 46 ರನ್ನಿಗೆ ಉರುಳಿತ್ತು.

Advertisement

ವಿರಾಟ್ ಕೊಹ್ಲಿ ವಿಂಡೀಸ್‌ ದಾಳಿಗೆ ದೊಡ್ಡ ತಡೆಯಾಗಿ ನಿಂತು ಬಹುಮೂಲ್ಯ 76 ರನ್‌ ಕೊಡುಗೆ ಸಲ್ಲಿಸಿದರು. ಎದುರಿಸಿದ್ದು 163 ಎಸೆತ. ಇದರಲ್ಲಿ 10 ಬೌಂಡರಿ ಒಳಗೊಂಡಿತ್ತು.

ಮೊದಲ ಟೆಸ್ಟ್‌ ಪಂದ್ಯದ ಶತಕವೀರ ಅಜಿಂಕ್ಯ ರಹಾನೆ ಗಳಿಕೆ 24 ರನ್‌ ಮಾತ್ರ (55 ಎಸೆತ, 4 ಬೌಂಡರಿ). ಕೊಹ್ಲಿ-ರಹಾನೆ ಜತೆಯಾಟದಲ್ಲಿ 49 ರನ್‌ ಬಂದರೆ, ದ್ವಿತೀಯ ಅವಧಿಯ 29 ಓವರ್‌ಗಳ ಆಟದಲ್ಲಿ 85 ರನ್‌ ಹರಿದು ಬಂತು.

ಆದರೆ ಅಂತಿಮ ಅವಧಿಯ ಆಟದಲ್ಲಿ ರಹಾನೆ ಮತ್ತು ಕೊಹ್ಲಿ ಅವರ ಎರಡು ಬಿಗ್‌ ವಿಕೆಟ್‌ಗಳು ಉರುಳುವುದರೊಂದಿಗೆ ವಿಂಡೀಸ್‌ ಬೌಲರ್‌ಗಳು ಮೇಲುಗೈ ಸಾಧಿಸಿದರು. ಮೊದಲ ದಿನ ಉರುಳಿದ 5 ವಿಕೆಟ್‌ಗಳಲ್ಲಿ 3 ಜಾಸನ್‌ ಹೋಲ್ಡರ್‌ ಪಾಲಾಗಿತ್ತು.

ಹನುಮ ವಿಹಾರಿ 42 ಮತ್ತು ರಿಷಭ್‌ ಪಂತ್‌ 27 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು. ಕೊಹ್ಲಿ ನಿರ್ಗಮನದ ಬಳಿಕ ಇವರಿಬ್ಬರೂ ಎಚ್ಚರಿಕೆಯ ಆಟವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next