ಚೀನಾದ 101 ವರ್ಷದ ಶತಾಯುಷಿ ಅಜ್ಜಿಯ ಹಣೆ ಮೇಲೆ ಕೋಡು! ವಿಧ ವಿಧದ 8 ಸಾವಿರ ಲಗ್ನ ಪತ್ರಿಕೆಗಳು! ಲಕ್ಷ ವರ್ಷಗಳನ್ನು ಲೆಕ್ಕ ಹಾಕುವ ಕ್ಯಾಲೆಂಡರ್… ಹೀಗೆ ಹಲವು ವಿಸ್ಮಯಗಳ ವಿಭಿನ್ನ ವಸ್ತುಗಳನ್ನು ನೀವು ನೋಡಬೇಕೆ? ಹಾಗಾದರೇ ಬನ್ನಿ, “ವಿಸ್ಮಯ ಪ್ರಪಂಚ’ ವಸ್ತು ಪ್ರದರ್ಶನಕ್ಕೆ!
ಜೆ. ದಶರಥಸಿಂಗ್ ಎಂಬ ಅಪರೂಪ ಸಂಗ್ರಹಕಾರನ 48 ವರ್ಷಗಳ ವಿಭಿನ್ನ, ವೈವಿಧ್ಯಮಯ ವಸ್ತುಗಳ ಸಂಗ್ರಹವೇ “ವಿಸ್ಮಯ ಪ್ರಪಂಚ’! ದಶರಥ ಸಿಂಗ್ ವೃತ್ತಿಯಲ್ಲಿ ಸರ್ಕಾರಿ ಔಷಧ ನಿಯಂತ್ರಣ ಇಲಾಖೆಯ ಆಧೀಕ್ಷರಾಗಿದ್ದು, ತಮ್ಮ ಬಿಡುವಿನ ಸಮಯದಲ್ಲಿ ವಿಭಿನ್ನ ವಸ್ತುಗಳ ಸಂಗ್ರಹದಲ್ಲಿ ತೊಡಗಿದ್ದಾರೆ.
ಅಲ್ಲಿ ಏನೇನಿದೆ?
ಇತಿಹಾಸ ಸಾರುವ ಪಾರಂಪರಿಕ ವಸ್ತುಗಳು, ಪ್ರಾಚೀನ ಕಾಲದ ಕತ್ತಿ, ಖಡ್ಗ ಮತ್ತು ವಿವಿಧ ವಿನ್ಯಾಸಗಳ ಕಲಾತ್ಮಕ 8 ಸಾವಿರ ಲಗ್ನಪತ್ರಿಕೆಗಳು ಮತ್ತು ದೇಶ- ವಿದೇಶಗಳ ಪುರಾತನ ನಾಣ್ಯಗಳು, ಬ್ರಿಟಿಷರ ಕಾಲದಲ್ಲಿ ಬಳಸುತ್ತಿದ್ದ ಲೋಹದ ಪಾತ್ರೆ, ಲೋಟ ಮುಂತಾದ ವಸ್ತುಗಳು, ಸಿಗರೇಟು ಪೆಟ್ಟಿಗೆ, ಪಿಂಗಾಣಿ ಬೊಂಬೆಗಳು, ರಾಜ ಮಹಾರಾಜರ ಕಾಲದ ವಸ್ತುಗಳ ಸಂಗ್ರಹ, ಮೊಟ್ಟ ಮೊದಲ ಮಹಾಚುನಾವಣೆಯಲ್ಲಿ ಬಳಸಿದ ಮತಪೆಟ್ಟಿಗೆ, ಹಿತ್ತಾಳೆ ತಕ್ಕಡಿ ಇಂಥ ಹಲವು ವೈವಿಧ್ಯಮಯ ಪ್ರಾಚೀನ ಕಾಲದ ವಸ್ತುಗಳು. ಮೈಸೂರು ಅರಸರ ವಂಶಾವಳಿಯ ಕುರಿತಾದ ಲೇಖನಗಳು ಮತ್ತು ಉದ್ದದ ಕಣೆÅಪ್ಪೆಯ ಚೀನಾದ ಹುಡುಗಿ… ಹೀಗೆ ವಿಶ್ವದಾಖಲೆ ಚಿತ್ರಣಗಳ ಲೇಖನಗಳು ಇಲ್ಲಿವೆ.
ಎಲ್ಲಿ?: ತರಳಬಾಳು ಕೇಂದ್ರ, ಆರ್.ಟಿ. ನಗರ
ಯಾವಾಗ?: ಆ.19ರಿಂದ 21, ಬೆ.10- ಸಂ.7
ಪ್ರವೇಶ: ಉಚಿತ