Advertisement

Wonder Woman: ಸೇನಾಧಿಕಾರಿಯನ್ನು ಹೊಗಳಿದ ಆನಂದ್‌ ಮಹೀಂದ್ರ; ಯಾರು ಈ ಮೇಜರ್‌ ಸೀತಾ

12:55 PM Aug 05, 2024 | Team Udayavani |

ವಯನಾಡ್: ‌ಭೀಕರ ಗುಡ್ಡ ಕುಸಿತಕ್ಕೆ ಸಾಕ್ಷಿಯಾದ ಕೇರಳದ ವಯನಾಡಿನ (Wayanad) ಚೂರಮಲಾ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಿದ ಬೈಲಿ ಸೇತುವೆಯ ರೈಲಿಂಗ್‌ ನಲ್ಲಿ ನಿಂತಿರುವ ಮಹಿಳಾ ಸೇನಾ ಅಧಿಕಾರಿಯ ಫೋಟೋವೊಂದು ಇದೀಗ ಭಾರಿ ವೈರಲ್‌ ಆಗುತ್ತಿದೆ.

Advertisement

ಭೂಕುಸಿತದಿಂದ ಭಾರೀ ನಷ್ಟ ಸಂಭವಿಸಿದ ಚೂರಮಲಾದಲ್ಲಿ ಸೇನೆಯು ಕೇವಲ 31 ಗಂಟೆಯ ಅವಧಿಯೊಳಗೆ ನೂತನ ಸೇತುವೆಯನ್ನು ನಿರ್ಮಿಸಿದೆ. ಈ ಸೇನಾ ತಂಡದಲ್ಲಿರುವ ಏಕೈಕ ಮಹಿಳೆ ಮೇಜರ್‌ ಸೀತಾ ಅಶೋಕ್‌ ಶೆಲ್ಕೆ (Major Sita Ashok Shelke) ಅವರ ಫೋಟೋ ಇದೀಗ ಇಂಟರ್ನೆಟ್‌ ಸೆನ್ಸೇಶನ್‌ ಆಗಿದೆ.

ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮೇಜರ್ ಶೆಲ್ಕೆ ಮತ್ತು ಭಾರತೀಯ ಸೇನೆಯ ಬಗ್ಗೆ ಬಳಕೆದಾರರು ಮೆಚ್ಚುಗೆ ಸೂಚಿಸುತಿದ್ದಾರೆ.

ಉದ್ಯಮಿ ಆನಂದ್‌ ಮಹೀಂದ್ರ (Anand Mahindra) ಅವರು ಮೇಜರ್‌ ಸೀತಾ ಶೆಲ್ಕೆ ಅವರ ಫೋಟೋವನ್ನು ಶೇರ್‌ ಮಾಡಿದ್ದು, ಸೇನಾಧಿಕಾರಿಯನ್ನು ʼವಂಡನ್‌ ವುಮನ್‌ʼ ಎಂದು ಹೇಳಿದ್ದಾರೆ.

Advertisement

“ದಿ ವಂಡರ್‌ ವುಮನ್‌ ಆಫ್‌ ವಯನಾಡ್.‌ ಡಿಸಿ ಸೂಪರ್‌ ಹೀರೋಸ್‌ ಗಳ ಅಗತ್ಯವಿಲ್ಲ. ನಾವು ಅವರನ್ನು ಇಲ್ಲಿ ನಿಜ ಜೀವನದಲ್ಲಿ ಹೊಂದಿದ್ದೇವೆ.” ಎಂದು ಆನಂದ್‌ ಮಹೀಂದ್ರ ಹೇಳಿದರು.

ಮೇಜರ್‌ ಸೀತಾ ಅಶೋಕ್‌ ಶೆಲ್ಕೆ ಅವರು ಮಹಾರಾಷ್ಟ್ರದ ಅಹಮದ್‌ ನಗರದ ಗಾಡಿಲ್ಗೌನ್‌ ಗ್ರಾಮದವರಾಗಿದ್ದಾರೆ. ಬೆಂಗಳೂರಿನಲ್ಲಿರುವ ಸೇನೆಯ ಮದ್ರಾಸ್‌ ಇಂಜಿನಿಯರಿಂಗ್‌ ಗ್ರೂಪ್‌ (ಎಂಇಜಿ) 70 ಜನರ ತಂಡದಲ್ಲಿರುವ ಏಕೈಕ ಮಹಿಳಾ ಅಧಿಕಾರಿಯಾಗಿದ್ದಾರೆ.

ಸೇತುವೆಯ ನಿರ್ಮಾಣವನ್ನು ಕೇವಲ 31 ಗಂಟೆಗಳಲ್ಲಿ ಪೂರ್ಣಗೊಳಿಸಲು ಮದ್ರಾಸ್ ಇಂಜಿನಿಯರ್ ಗ್ರೂಪ್ (MEG) ಬೃಹತ್ ಅವಶೇಷಗಳು, ಬೇರುಸಹಿತ ಮರಗಳು ಮತ್ತು ವೇಗವಾಗಿ ಹರಿಯುವ ನದಿಯನ್ನು ಎದುರಿಸಿ ದೃಢತೆ ಮತ್ತು ಕೌಶಲ್ಯವನ್ನು ಪ್ರದರ್ಶಿಸಿತು. ಇದರಲ್ಲಿ ಮೇಜರ್ ಸೀತಾ ಅಶೋಕ್ ಶೆಲ್ಕೆ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸಿದರು.

ಇದರ ಬಗ್ಗೆ ಪಿಟಿಐ ಸುದ್ದಿಸಂಸ್ಥೆ ಜತೆಗೆ ಮಾತನಾಡಿದ ಮೇಜರ್ ಸೀತಾ‌ ಶೆಲ್ಕೆ, “ನಾನು ಇಲ್ಲಿ ಏಕೈಕ ಮಹಿಳೆ ಎಂದು ಭಾವಿಸುವುದಿಲ್ಲ. ನಾನಿಲ್ಲ ಸೈನಕರಾಗಿದ್ದೇವೆ. ಭಾರತೀಯ ಸೇನೆಯನ್ನು ಪ್ರತಿನಿಧಿಸಿಕೊಂಡು ಇಲ್ಲಿದ್ದೇವೆ, ಈ ಕಾರ್ಯಾಚರಣೆ ತಂಡದ ಭಾಗವಾಗಲು ಹೆಮ್ಮೆ ಎನಿಸುತ್ತದೆ” ಎಂದರು.

ಸೇತುವೆ ನಿರ್ಮಾಣದ ಬಗ್ಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳು, ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನಮಗೆ ಸಹಾಯ ಮಾಡಿ ಎಲ್ಲರಿಗೂ ಧನ್ಯವಾದ ಹೇಳ ಬಯಸುತ್ತೇನೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next