Advertisement

ಕಾಲು ಮುರಿದರೂ ಕೈಬಿಡದ ಮತದಾರ

03:01 PM Jan 03, 2021 | Team Udayavani |

ಮುಧೋಳ: ಚುನಾವಣೆಯಲ್ಲಿ ಗೆಲ್ಲಲು ಹಗಲು ರಾತ್ರಿ ಶ್ರಮವಹಿಸಬೇಕು. ತಮ್ಮ ಎಲ್ಲ ರಾಜಕೀಯ ತಂತ್ರಗಾರಿಕೆ ಬಳಸಬೇಕು. ಅಭ್ಯರ್ಥಿ ಪ್ರತಿಕ್ಷಣ ಮತದಾರರೊಂದಿಗೆ ಸಂಪರ್ಕದಲ್ಲಿರಬೇಕು. ಆದರೆ ಮೇಲಿನ ಮಾತಿಗೆ ಅಪವಾದವೆಂಬಂತೆ ಚುನಾವಣೆಗೂ ಮುನ್ನ ಕಾಲು ಮುರಿದುಕೊಂಡ ಅಭ್ಯರ್ಥಿಯೊಬ್ಬರು ಚುನಾವಣೆಯಲ್ಲಿ ಗ್ರಾಮದಲ್ಲಿಯೇ ಎರಡನೇ ಅತಿ ಹೆಚ್ಚು ಮತ (594) ಪಡೆದು ಜಯಗಳಿಸುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

Advertisement

ಹಲಗಲಿ ಗ್ರಾಮದ ಮೂರನೇ ವಾರ್ಡ್‌ ನಿಂದ ಸ್ಪರ್ಧಿಸಿದ್ದ ಕೃಷ್ಣಪ್ಪ ಭೀಮಪ್ಪಚಿಕ್ಕೂರ ಅವರು ಚುನಾವಣೆಗೆ ಮುನ್ನ ತಮ್ಮ ಬಲಗಾಲು ಮುರಿದುಕೊಂಡಿದ್ದರು. ಚುನಾವಣೆ ಪ್ರಚಾರದಲ್ಲಿ ತೊಡಗದೆಯಿದ್ದರೂ ಮತದಾರರು ಕೃಷ್ಣಪ್ಪ ಚಿಕ್ಕೂರ ಅವರಿಗೆ ಆಶೀರ್ವದಿಸಿ, ಗ್ರಾಮ ಪಂಚಾಯತ ಚುನಾವಣೆಯಲ್ಲಿ ಭರ್ಜರಿ ಗೆಲುವು ನೀಡಿದ್ದಾರೆ.

ಚುನಾವಣೆ ದಿನಾಂಕ ಘೋಷಣೆಯಾದಾಗ ಜಮೀನು ಕೆಲಸಕ್ಕೆ ಹೊರಟಾಗ ಬೈಕ್‌ ಮೇಲಿಂದ ಬಿದ್ದು ಬಲಗಾಲು ಮುರಿದುಕೊಂಡಿದ್ದರು. ಮನೆಯವರಸಹಾಯದಿಂದ ನಾಮಪತ್ರ ಸಲ್ಲಿಸಿದ ಬಳಿಕ ಕೊನೆಯ ದಿನ ಮಾತ್ರ ಪ್ರಚಾರಮಾಡಿದ್ದರು. ಆದರೆ, ವಾರ್ಡ್‌ನಲ್ಲಿ ಅವರು ಗಳಿಸಿದ್ದ ಹೆಸರಿಗೆ ಮಾತ್ರ ಮತದಾರ ಮೋಸ ಮಾಡಲಿಲ್ಲ. ಕೃಷ್ಣಪ್ಪ ಸ್ಪರ್ಧಿಸಿದ್ದ ವಾರ್ಡ್‌ನಲ್ಲೇ ಹೆಚ್ಚು ಮತಗಳಿಸಿ ಜಯಭೇರಿ ಗಳಿಸಿದ್ದಾರೆ.

ಚುನಾವಣೆ ಘೋಷಣೆಯಾದಾಗ ನನ್ನ ಕಾಲು ಮುರಿದಿತ್ತು. ನನ್ನ ಪರ ಮನೆಯವರೇ ಪ್ರಚಾರ ಮಾಡಿದ್ದಾರೆ. ಮತದಾರರು ನನ್ನ ಮೇಲೆ ಹೆಚ್ಚಿನ ಭರವಸೆ ಇಟ್ಟು ಮತ ಹಾಕಿ ಆಶೀರ್ವದಿಸಿದ್ದಾರೆ. ಅವರ ಸೇವೆಗೆ ಹಗಲಿರುಳು ಶ್ರಮಿಸುವೆ. – ಕೃಷ್ಣಪ್ಪ ಭೀಮಪ್ಪ ಚಿಕ್ಕೂರ, ಗ್ರಾಪಂ. ನೂತನ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next