Advertisement

ನೆದರ್ಲೆಂಡ್‌ಗೆ ಮಣಿದ ಕಿವೀಸ್‌

01:41 AM Jun 12, 2019 | mahesh |

ಲೇ ಹಾವ್ರೆ (ಫ್ರಾನ್ಸ್‌): ಇಲ್ಲಿನ ‘ಸ್ಟೇಡ್‌ ಓಶಿಯನ್‌ ಸ್ಟೇಡಿ ಯಂ’ನಲ್ಲಿ ನಡೆದ ಮಂಗಳವಾರದ ವನಿತಾ ವಿಶ್ವಕಪ್‌ ಫ‌ುಟ್ಬಾಲ್ ಪಂದ್ಯಾವಳಿಯಲ್ಲಿ ನೆದರ್ಲೆಂಡ್‌ 1-0 ಅಂತರದಿಂದ ನ್ಯೂಜಿಲ್ಯಾಂಡನ್ನು ಮಣಿಸಿದೆ.

Advertisement

ಇದು ‘ಇ’ ವಿಭಾಗದ ದ್ವಿತೀಯ ಪಂದ್ಯವಾಗಿತ್ತು. ಮೊದಲ ಮುಖಾಮು ಖೀಯಲ್ಲಿ ಕೆನಡಾ ಇಷ್ಟೇ ಅಂತರದಿಂದ ಕ್ಯಾಮರೂನ್‌ಗೆ ಸೋಲುಣಿಸಿತ್ತು.

ಸೋಮವಾರ ರಾತ್ರಿ ನಡೆದ ಆರ್ಜೆಂಟೀನಾ-ಜಪಾನ್‌ ಪಂದ್ಯ ಗೋಲು ಕಾಣದೆ ಡ್ರಾಗೊಂಡಿತು (‘ಡಿ’ ವಿಭಾಗ). ಇನ್ನೊಂದು ಪಂದ್ಯದಲ್ಲಿ ಕೆನಡಾ 1-0 ಗೋಲಿನಿಂದ ಕ್ಯಾಮರೂನ್‌ಗೆ ಸೋಲುಣಿಸಿತು (‘ಇ’ ವಿಭಾಗ).

ಸದ್ಯ ‘ಎ’ ವಿಭಾಗದಲ್ಲಿ ಫ್ರಾನ್ಸ್‌, ‘ಬಿ’ ವಿಭಾಗದಲ್ಲಿ ಸ್ಪೇನ್‌, ‘ಸಿ’ ವಿಭಾಗದಲ್ಲಿ ಬ್ರಝಿಲ್, ‘ಡಿ’ ವಿಭಾಗದಲ್ಲಿ ಇಂಗ್ಲೆಂಡ್‌, ‘ಇ’ ವಿಭಾಗದಲ್ಲಿ ಕೆನಡಾ ಅಗ್ರಸ್ಥಾನದಲ್ಲಿದೆ. ‘ಎಫ್’ ವಿಭಾಗದ 2 ಪಂದ್ಯಗಳು ಮಂಗಳವಾರ ರಾತ್ರಿ ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next