Advertisement

ವನಿತಾ ವಿಶ್ವಕಪ್‌: ಸತತ 2 ಪಂದ್ಯ ಗೆದ್ದ ಆಸ್ಟ್ರೇಲಿಯ

10:39 PM Mar 08, 2022 | Team Udayavani |

ಮೌಂಟ್‌ ಮೌಂಗನುಯಿ: ವನಿತಾ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ನೆಚ್ಚಿನ ಆಸ್ಟ್ರೇಲಿಯ ಸತತ ಎರಡು ಪಂದ್ಯಗಳನ್ನು ಜಯಿಸಿದೆ. ಇನ್ನೊಂದೆಡೆ ಪಾಕಿಸ್ಥಾನ ಸತತ ಎರಡನೇ ಸೋಲನುಭವಿಸಿದೆ.\

Advertisement

ಮಂಗಳವಾರದ ಮುಖಾಮುಖಿಯಲ್ಲಿಬಲಿಷ್ಠ ಆಸ್ಟ್ರೇಲಿಯ 7 ವಿಕೆಟ್‌ಗಳಿಂದ ಪಾಕಿಸ್ಥಾನವನ್ನು ಕೆಡವಿತು. ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನಕ್ಕೆ ಗಳಿಸಲು ಸಾಧ್ಯವಾದದ್ದು 6ಕ್ಕೆ 190 ರನ್‌ ಮಾತ್ರ. ಆಸ್ಟ್ರೇಲಿಯ ಕೇವಲ 34.4 ಓವರ್‌ಗಳಲ್ಲಿ 3 ವಿಕೆಟಿಗೆ 193 ರನ್‌ ಬಾರಿಸಿ ಗೆದ್ದು ಬಂದಿತು. ಪಾಕಿಸ್ಥಾನ ಮೊದಲ ಪಂದ್ಯದಲ್ಲಿ ಭಾರತಕ್ಕೆ 107 ರನ್ನುಗಳಿಂದ ಶರಣಾಗಿತ್ತು. ಆಸ್ಟ್ರೇಲಿಯ 12 ರನ್ನುಗಳಿಂದ ಇಂಗ್ಲೆಂಡನ್ನು ಮಣಿಸಿತ್ತು.

ಈ ಜಯದೊಂದಿಗೆ ಆಸ್ಟ್ರೇಲಿಯ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದೆ. ಕೂಟದಲ್ಲಿ 2 ಪಂದ್ಯ ಗೆದ್ದ ಮೊದಲ ತಂಡವೆಂಬಂದು ಕಾಂಗರೂ ಪಡೆಯ ಹೆಗ್ಗಳಿಕೆ.

ಮರೂಫ್‌, ಅಲಿಯಾ ಹೋರಾಟ
ಆಸ್ಟ್ರೇಲಿಯದ ದಾಳಿಯನ್ನು ತಡೆದು ನಿಲ್ಲಲು ಸಾಧ್ಯವಾದದ್ದು ಇಬ್ಬರಿಗೆ ಮಾತ್ರ. ನಾಯಕಿ ಬಿಸ್ಮಾ ಮರೂಫ್‌ ಅಜೇಯ 78 ರನ್‌ ಹಾಗೂ ಅಲಿಯಾ ರಿಯಾಜ್‌ 53 ರನ್‌ ಹೊಡೆದರು. ಆದರೆ ಇಬ್ಬರ ಆಟವೂ ನಿಧಾನ ಗತಿಯಿಂದ ಕೂಡಿತ್ತು. ಬಿಸ್ಮಾ 122 ಎಸೆತ ನಿಭಾಯಿಸಿದರೆ, ಅಲಿಯಾ 109 ಎಸೆತ ಎದುರಿಸಿದರು. ಕ್ರಮವಾಗಿ 8 ಮತ್ತು 4 ಬೌಂಡರಿ ಹೊಡೆದರು. ಕಾಂಗರೂ ಪಡೆ ಸಾಂಘಿಕ ಬೌಲಿಂಗ್‌ ಮೂಲಕ ಪಾಕಿಸ್ಥಾನವನ್ನು ಕಟ್ಟಿಹಾಕಿತು.

ಚೇಸಿಂಗ್‌ ವೇಳೆ ಕೀಪರ್‌ ಕಂ ಓಪನರ್‌ ಅಲಿಸ್ಸಾ ಹೀಲಿ 72 ರನ್‌ ಬಾರಿಸಿ ತಂಡಕ್ಕೆ ನಿರಾಯಾಸ ಗೆಲುವನ್ನು ತಂದಿತ್ತರು. ರಶೆಲ್‌ ಹೇನ್ಸ್‌ 34, ನಾಯಕಿ ಮೆಗ್‌ ಲ್ಯಾನಿಂಗ್‌ 35, ಎಲ್ಲಿಸ್‌ ಪೆರ್ರಿ ಅಜೇಯ 26 ಹಾಗೂ ಬೆತ್‌ ಮೂನಿ ಅಜೇಯ 23 ರನ್‌ ಹೊಡೆದರು.

Advertisement

ಸಂಕ್ಷಿಪ್ತ ಸ್ಕೋರ್‌
ಪಾಕಿಸ್ಥಾನ-7 ವಿಕೆಟಿಗೆ 190 (ಬಿಸ್ಮಾ 78, ಅಲಿಯಾ 53, ಅಲಾನಾ ಕಿಂಗ್‌ 24ಕ್ಕೆ 2). ಆಸ್ಟ್ರೇಲಿಯ-34.4 ಓವರ್‌ಗಳಲ್ಲಿ 3 ವಿಕೆಟಿಗೆ 193 (ಹೀಲಿ 72, ಲ್ಯಾನಿಂಗ್‌ 35, ಹೇನ್ಸ್‌ 34, ಒಮೈಮಾ ಸೊಹೈಲ್‌ 39ಕ್ಕೆ 2).

ಪಂದ್ಯಶ್ರೇಷ್ಠ: ಅಲಿಸ್ಸಾ ಹೀಲಿ.

ಇಂದಿನ ಪಂದ್ಯ
ಇಂಗ್ಲೆಂಡ್‌-ವೆಸ್ಟ್‌ ಇಂಡೀಸ್‌
ಸ್ಥಳ: ಡ್ಯುನೆಡಿನ್‌, ಆರಂಭ: ಬೆಳಗ್ಗೆ 3.30
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next