Advertisement
ಶನಿವಾರದ 48 ಕೆಜಿ ವಿಭಾಗದ ಫೈನಲ್‌ನಲ್ಲಿ ನೀತು ಘಂಘಾಸ್ ಮಂಗೋಲಿಯಾದ ಲುಸೈಖಾನ್ ಅಲ್ತಾನ್ಸೆತ್ಸೆಗ್ ವಿರುದ್ಧ 5-0 ಅಂತರದ ಅಧಿಕಾರಯುತ ಜಯ ಸಾಧಿಸಿದರು.
Related Articles
Advertisement
ನಿಖತ್, ಲವ್ಲಿನಾಗೆ ಏಷ್ಯಾಡ್ ಅರ್ಹತೆಸ್ಟಾರ್ ಬಾಕ್ಸರ್‌ಗಳಾದ ನಿಖತ್ ಜರೀನ್ ಮತ್ತು ಲವ್ಲಿನಾ ಬೊರ್ಗೊಹೇನ್ ಏಷ್ಯಾಡ್ ಅರ್ಹತೆ ಗಳಿಸಿದ್ದಾರೆ. ಭಾರತದ ಹೈ ಪರ್ಫಾರ್ಮೆನ್ಸ್ ಡೈರೆಕ್ಟರ್ (ಎಚ್‌ಪಿಡಿ) ಬರ್ನಾರ್ಡ್ ಡ್ನೂನೆ ಇದನ್ನು ಪ್ರಕಟಿಸಿದರು. ಈ ವರ್ಷಾಂತ್ಯ ಚೀನದ ಹಾಂಗ್‌ಝೂನಲ್ಲಿ ನಡೆಯುವ ಏಷ್ಯನ್ ಗೇಮ್ಸ್, 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಮೊದಲ ಅರ್ಹತಾ ಪಂದ್ಯಾವಳಿಯೂ ಆಗಿದೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಅಥವಾ ಬೆಳ್ಳಿ ಪದಕ ಗೆದ್ದವರು ನೇರವಾಗಿ ಏಷ್ಯಾಡ್ ಅರ್ಹತೆ ಪಡೆಯಲಿದ್ದಾರೆ ಎಂಬುದಾಗಿ ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ತಿಳಿಸಿದೆ. ನಿಖತ್ ಜರೀನ್ (50 ಕೆಜಿ) ಮತ್ತು ಲವಿÉನಾ ಬೊರ್ಗೊಹೇನ್ (75 ಕೆಜಿ) ಪ್ರಸಕ್ತ ಸಾಗುತ್ತಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿದ್ದು, ಚಿನ್ನ ಅಥವಾ ಬೆಳ್ಳಿ ಪದಕವನ್ನು ಖಾತ್ರಿಗೊಳಿಸಿದ್ದಾರೆ.