Advertisement
ಭಾರತ-ಪಾಕಿಸ್ಥಾನ ನಡುವಿನ ಯಾವುದೇ ಪಂದ್ಯವಾಗಿರಲಿ, ಅದರ ಜೋಶ್ ಬೇರೆಯೇ ಆಗಿರುತ್ತದೆ. ಈ ಸೆಣಸಾಟ ಕ್ಕಾಗಿ ಅಭಿಮಾನಿಗಳು ತುದಿಗಾಲಲ್ಲಿ ಕಾದಿರು ತ್ತಾರೆ. ಇಂಥದೇ ಒಂದು ಸನ್ನಿವೇಶಕ್ಕೆ ರವಿವಾರದ ಕೇಪ್ ಟೌನ್ ಮುಖಾಮುಖಿ ಸಾಕ್ಷಿಯಾಗುವುದರಲ್ಲಿ ಅನುಮಾನವಿಲ್ಲ.
Related Articles
“ಫಿನಿಶಿಂಗ್ ಟಚ್ ಟೆಕ್ನಿಕ್’ ಎನ್ನುವುದು ಭಾರತದ ಪಾಲಿಗೆ ಶಾಪವಾಗಿ ಕಾಡು ತ್ತಿದೆ. ಈ ಸಲವಾದರೂ ಇದರಿಂದ ಮುಕ್ತವಾಗ ಬೇಕಿದೆ. ಆದರೆ ಆರಂಭಿಕ ಪಂದ್ಯಕ್ಕೂ ಮೊದಲೇ ಭಾರತಕ್ಕೆ ದೊಡ್ಡದೊಂದು ಸಂಕಟ ಎದುರಾಗಿದೆ. ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಕೈಬೆರಳಿನ ಗಾಯದಿಂದ ಪಾಕ್ ವಿರುದ್ಧ ಆಡುವುದು ಅನುಮಾನ ಎಂಬುದಾಗಿ ಕೋಚ್ ಹೃಷಿಕೇಶ್ ಕಾನಿಟ್ಕರ್ ತಿಳಿಸಿದ್ದಾರೆ. ಆದರೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಭುಜದ ನೋವಿನಿಂದ ಚೇತರಿಸಿಕೊಂಡಿದ್ದು, ಆಡಲು ಲಭ್ಯರಿರುವುದು ಸಮಾಧಾನಕರ ಸಂಗತಿ.
Advertisement
ಭಾರತದ ಗುಂಪಿನಲ್ಲಿರುವ ಮತ್ತೊಂದು ಪ್ರಬಲ ತಂಡ ಇಂಗ್ಲೆಂಡ್. ಆದರೂ ಕೌರ್ ಬಳಗದ ಸೆಮಿಫೈನಲ್ ಪ್ರವೇಶವನ್ನು ನಿರೀಕ್ಷಿಸಲಡ್ಡಿಯಿಲ್ಲ. ಆದರೆ ನಾಕೌಟ್‌ನ ಒಂದು ಹಂತದಲ್ಲಿ ಪ್ರಬಲ ಆಸ್ಟ್ರೇಲಿಯ ಎದುರಾಗುವುದು ನಿಶ್ವಿತ. ಆಸ್ಟ್ರೇಲಿಯವನ್ನು ಸೋಲಿಸಿದವರಿಗೆ ವಿಶ್ವಕಪ್ ಎಂಬುದು ಎಲ್ಲರ ಲೆಕ್ಕಾಚಾರ.
ಪಾಕಿಸ್ಥಾನವನ್ನು ಮಣಿಸಿ ಶುಭಾರಂಭ ಮಾಡುವುದು ಭಾರತದ ಪಾಲಿನ ಮೊದಲ ಆದ್ಯತೆ. ಇದರಿಂದ ಕಳೆದ ವರ್ಷದ ಏಷ್ಯಾ ಕಪ್‌ನಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿದಂತೆಯೂ ಆಗುತ್ತದೆ. ಶಫಾಲಿ, ರಿಚಾ, ಕೌರ್, ದೀಪ್ತಿ, ರೇಣುಕಾ, ಯಾಸ್ತಿಕಾ, ಜೆಮಿಮಾ ಮೊದಲಾದವರ ಸಾಧನೆ ಭಾರತದ ಪಾಲಿಗೆ ನಿರ್ಣಾಯಕವಾಗಿದೆ.
ಪಾಕಿಸ್ಥಾನ ಕೂಡ ಆಭ್ಯಾಸ ಪಂದ್ಯದಲ್ಲಿ 1-1 ಫಲಿತಾಂಶ ದಾಖಲಿಸಿದೆ. ಬಾಂಗ್ಲಾವನ್ನು ಮಣಿಸಿದ ಬಳಿಕ ದಕ್ಷಿಣ ಆಫ್ರಿಕಾಕ್ಕೆ ಶರಣಾಗಿತ್ತು. ನಿದಾ ದಾರ್, ನಾಯಕಿ ಬಿಸ್ಮಾ ಮರೂಫ್ ಅವರನ್ನು ಪಾಕ್ ಹೆಚ್ಚು ಅವಲಂಬಿಸಿದೆ.
ಲಂಕಾ, ಇಂಗ್ಲೆಂಡ್ ಗೆಲುವುವಿಶ್ವಕಪ್ ಉದ್ಘಾಟನ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಆಘಾತ ಅನುಭವಿಸಿದೆ. ಶ್ರೀಲಂಕಾ ವಿರುದ್ಧದ ಪಂದ್ಯವನ್ನು 3 ರನ್ನುಗಳಿಂದ ಕಳೆದುಕೊಂಡಿದೆ. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾ 4 ವಿಕೆಟಿಗೆ 129 ರನ್ ಗಳಿಸಿದರೆ, ದಕ್ಷಿಣ ಆಫ್ರಿಕಾ 9 ವಿಕೆಟಿಗೆ 126 ರನ್ ಗಳಿಸಿ ನಂಬಲಾಗದ ಸೋಲನುಭವಿಸಿತು. ಇನೋಕಾ ರಣವೀರ (18ಕ್ಕೆ 3), ಒಶಾದಿ ರಣಸಿಂಘೆ (20ಕ್ಕೆ 2), ಸುಗಂಧಿಕಾ ಕುಮಾರಿ (28ಕ್ಕೆ 2) ಸೇರಿಕೊಂಡು ಆತಿಥೇಯರಿಗೆ ಕಡಿವಾಣ ಹಾಕಿದರು. 3 ಓವರ್‌ಗಳಲ್ಲಿ 33 ರನ್, 2 ಓವರ್‌ಗಳಲ್ಲಿ 20 ರನ್, ಅಂತಿಮ ಓವರ್‌ನಲ್ಲಿ 13 ರನ್ ತೆಗೆಯುವ ಸವಾಲನ್ನು ಸ್ವೀಕರಿಸಲು ಆತಿಥೇಯರಿಂದ ಸಾಧ್ಯವಾಗಲಿಲ್ಲ. ನಾಯಕಿ ಸುನೆ ಲುಸ್ ಸರ್ವಾಧಿಕ 28 ರನ್ ಮಾಡಿದರು. ಲಂಕೆಯ ಬ್ಯಾಟಿಂಗ್ ಸರದಿಯಲ್ಲಿ ಮಿಂಚಿದವರು ನಾಯಕಿ ಚಾಮರಿ ಅತಪಟ್ಟು (68) ಮತ್ತು ವಿಶ್ಮಿ ಗುಣರತ್ನೆ (35). ಇಂಗ್ಲೆಂಡ್ ಜಯಭೇರಿ
ಶನಿವಾರದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ 7 ವಿಕೆಟ್‌ಗಳಿಂದ ವೆಸ್ಟ್ ಇಂಡೀಸ್‌ಗೆ ಸೋಲುಣಿಸಿತು. ವಿಂಡೀಸ್ 7 ವಿಕೆಟಿಗೆ 135 ರನ್ ಹೊಡೆದರೆ, ಇಂಗ್ಲೆಂಡ್ ಕೇವಲ 14.3 ಓವರ್‌ಗಳಲ್ಲಿ 3 ವಿಕೆಟಿಗೆ 138 ರನ್ ಬಾರಿಸಿತು. ಆರಂಭ: ಸಂ. 6.30
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್