ಸೆಮಿ ಪ್ರವೇಶಕ್ಕೆ ನಾಲ್ಕರಲ್ಲಿ ಕನಿಷ್ಠ 3 ಪಂದ್ಯಗಳನ್ನು ಗೆಲ್ಲುವುದು ಅಗತ್ಯ. ಹೀಗಾಗಿ ಭಾರತಕ್ಕೆ ಬಾಕಿ ಇರುವುದು ಇನ್ನೊಂದು ಮೆಟ್ಟಿಲು ಮಾತ್ರ.
Advertisement
ಆರಂಭದಲ್ಲೇ ಕಾಂಗರೂ ಬೇಟೆಹರ್ಮನ್ಪ್ರೀತ್ ನೇತೃತ್ವದ ಭಾರತ ಈವರೆಗೆ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿರುವ ಏಕೈಕ ತಂಡ. ಇದಕ್ಕಿಂತ ಮಿಗಿಲಾಗಿ, ಹಾಲಿ ಚಾಂಪಿಯನ್ ಖ್ಯಾತಿಯ ಆತಿಥೇಯ ಆಸ್ಟ್ರೇಲಿಯ ವನ್ನು ಮೊದಲ ಪಂದ್ಯದಲ್ಲೇ ನೆಲಕ್ಕೆ ಕೆಡವಿದ್ದು ಭಾರತದ ಮಹಾನ್ ಸಾಧನೆಯಾಗಿ ದಾಖಲಾಗಿದೆ. ಇದು ಹೈ ವೋಲ್ಟೆàಜ್ ಪಂದ್ಯವಾದ್ದರಿಂದ, ಇಲ್ಲಿ ಗೆದ್ದವರಿಗೆ ಮುಂದಿನ ಹಾದಿ ಸುಗಮ ಎಂಬುದು ಎಲ್ಲರ ಲೆಕ್ಕಾಚಾರವಾಗಿತ್ತು. ಇದರ ಲಾಭವೀಗ ಭಾರತಕ್ಕೆ ಲಭಿಸಿದೆ.
Related Articles
ಭಾರತ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ಸಮತೂಕ ಹೊಂದಿರುವ ತಂಡ. ಶಫಾಲಿ, ಮಂಧನಾ, ಜೆಮಿಮಾ, ಕೌರ್, ದೀಪ್ತಿ, ವೇದಾ ಅವರೆಲ್ಲ ಈಗಾಗಲೇ ತಮ್ಮ ಬ್ಯಾಟಿಂಗ್ ಸಾಹಸ ಪ್ರದರ್ಶಿಸಿದ್ದಾರೆ. ಆದರೆ ಮೊದಲು ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಇವರು ಯಶಸ್ವಿಯಾದರೆ ಬೌಲರ್‌ಗಳ ಕೆಲಸವನ್ನು ಹಗುರಗೊಳಿಸಬಹುದು.
Advertisement
ಸ್ಪಿನ್ ಬೌಲಿಂಗ್ ಭಾರತದ ಪ್ರಮುಖ ಅಸ್ತ್ರವಾಗಿದೆ. ಪೂನಂ, ರಾಜೇಶ್ವರಿ, ದೀಪ್ತಿ ಅವರ ತ್ರಿವಳಿ ಸ್ಪಿನ್ ದಾಳಿ ಎದುರಾಳಿಗಳ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಪ್ರಧಾನ ವೇಗಿ ಶಿಖಾ ಪಾಂಡೆ ಕೂಡ ಲಯದಲ್ಲಿದ್ದಾರೆ. ಕೀಪಿಂಗ್, ಫೀಲ್ಡಿಂಗ್ ಕೂಡ ಉತ್ತಮ ಮಟ್ಟದಲ್ಲಿದೆ. ಮುಂದಿನದ್ದೆಲ್ಲ ಅದೃಷ್ಟದ ಆಟ!