Advertisement
ನ್ಯೂಜಿಲ್ಯಾಂಡ್ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ 132 ರನ್ ಗಳಿಸಿದ ರೋಡ್ರಿಗಸ್ 2ನೇ ಸ್ಥಾನಕ್ಕೆ ಏರಿದ್ದಾರೆ. ಕಳೆದ ವಾರ ಬಿಡುಗಡೆಯಾದ ಏಕದಿನ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕ್ಕೇರಿದ್ದ ಸ್ಮತಿ ಮಂಧನಾ ಟಿ20 ರ್‍ಯಾಂಕಿಂಗ್‌ನಲ್ಲಿ 4 ಸ್ಥಾನಗಳ ಏರಿಕೆ ಕಂಡು 6ನೇ ಸ್ಥಾನಕ್ಕೆ ಜಿಗಿದಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ್ತಿ ಎನಿಸಿಕೊಂಡಿರುವ ಮಂಧನಾ 2 ಅರ್ಧಶತಕ ಬಾರಿಸಿದ್ದರು.
Related Articles
ವಿಂಡೀಸ್‌ನ ಡಿಯಾಂಡ್ರ ಡೊಟಿನ್ ಅಲ್‌ರೌಂಡರ್ ವಿಭಾಗದಲ್ಲಿ ಅಗ್ರಸ್ಥಾನ ಸಂಪಾದಿಸಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಡೊಟಿನ್ 3ನೇ ಸ್ಥಾನ ಸಂಪಾದಿಸಿದ್ದರೆ, ಬೌಲಿಂಗ್ ವಿಭಾಗದಲ್ಲಿ 29ನೇ ಸ್ಥಾನದಲ್ಲಿದ್ದಾರೆ. ಪಾಕಿಸ್ಥಾನದ ನಾಯಕಿ ಬಿಸ್ಮಾ ಮರೂಫ್ ಬ್ಯಾಟಿಂಗ್ ವಿಭಾಗದಲ್ಲಿ 15ನೇ ಸ್ಥಾನ ಸಂಪಾದಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಸನಾ ಮಿರ್ 28ನೇ ಸ್ಥಾನ ಗಳಿಸಿದ್ದಾರೆ.
Advertisement
ನಂ. 4ರಲ್ಲಿ ಭಾರತತಂಡಗಳ ರ್‍ಯಾಂಕಿಂಗ್‌ನಲ್ಲಿ ನ್ಯೂಜಿ ಲ್ಯಾಂಡ್ ತಂಡ ಇಂಗ್ಲೆಂಡನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದೆ. ಆಸ್ಟ್ರೇಲಿಯ ಅಗ್ರಸ್ಥಾನ ವನ್ನು ಉಳಿಸಿಕೊಂಡಿದೆ. ಭಾರತ, ವೆಸ್ಟ್ ಇಂಡೀಸ್ ತಂಡ 4 ಹಾಗೂ 5ನೇ ಸ್ಥಾನದಲ್ಲಿದೆ.