Advertisement

ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ವನಿತಾ ಟಿ20 ಕ್ರಿಕೆಟ್‌?

06:10 AM Nov 27, 2018 | Team Udayavani |

ದುಬಾೖ: 2022ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ವನಿತಾ ಟಿ20 ಕ್ರಿಕೆಟನ್ನು ಸೇರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಹರಾಜು ಪ್ರಕ್ರಿಯೆಲ್ಲಿ ಭಾಗಿಯಾಗಲಿದೆ ಎಂದು ಐಸಿಸಿ ಮುಖ್ಯ ಕಾರ್ಯದರ್ಶಿ ಡೇವಿಡ್‌ ರಿಚರ್ಡ್‌ಸನ್‌ ತಿಳಿಸಿದ್ದಾರೆ.

Advertisement

“ಕ್ರಿಕೆಟ್‌ ಹಾಗೂ ಕಾಮನ್ವೆಲ್ತ್‌ ಗೇಮ್ಸ್‌ ಒಂದಕ್ಕೊಂದು ಬೆಸೆದುಕೊಂಡಿದೆ. ವನಿತಾ ಕ್ರಿಕೆಟ್‌ ಹಾಗೂ ಗೇಮ್ಸ್‌ ನಡುವಿನ ಒಡಂಬಡಿಕೆ ಕಾಮನ್ವೆಲ್ತ್‌ನಲ್ಲಿ ವನಿತಾ ಕ್ರೀಡೆಯ ಅಭಿವೃದ್ಧಿ, ಸಮಾನತೆ, ನ್ಯಾಯ ಹಾಗೂ ಅವಕಾಶ ನೀಡುವಲ್ಲಿ ಪೂರಕವಾಗಲಿದೆ. ಕ್ರಿಕೆಟ್‌ ಹಾಗೂ ಕಾಮನ್ವೆಲ್ತ್‌ ಗೇಮ್ಸ್‌ನ ಪಾಲುದಾರಿಕೆತಯನ್ನು ಆರಂಭಿಸಲು ಬರ್ಮಿಂಗ್‌ಹ್ಯಾಮ್‌ ಒಂದು ಉತ್ತಮ ಸ್ಥಳವಾಗಿದೆ. ಈ ನಗರ ಕ್ರಿಕೆಟಿನ ಶ್ರೀಮಂತಿಕೆ, ವೈವಿಧ್ಯಮಯ ಸಂಸ್ಕೃತಿ ಹಾಗೂ ಸಂಪ್ರದಾಯದಿಂದ ಕೂಡಿದೆ. 

ಕ್ರಿಕೆಟ್‌ ಹಾಗೂ ಬರ್ಮಿಂಗ್‌ಹ್ಯಾಮ್‌ ನಡುವಿನ ಸಂಪರ್ಕ ಜನರನ್ನು ಒಗ್ಗೂಡಿಸುವುದಲ್ಲದೆ ವನಿತಾ ಕ್ರಿಕೆಟಿನ ಅಭಿವೃದ್ಧಿಗೆ ನೆರವಾಗಲಿದೆ’ ಎಂದು ಡೇವಿಡ್‌ ರಿಚರ್ಡ್‌ಸನ್‌ ಹೇಳಿದ್ದಾರೆ.1998ರಲ್ಲಿ ಮಲೇಶ್ಯದಲ್ಲಿ ನಡೆದ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಕ್ರಿಕೆಟನ್ನು ಪರಿಚಯಿಸಲಾಗಿತ್ತು. ದಕ್ಷಿಣ ಆಫ್ರಿಕಾ ಚಿನ್ನದ ಪದಕ ಗೆದ್ದರೆ, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್‌ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿತ್ತು. ಅನಂತರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ  ಕ್ರಿಕೆಟನ್ನು ಕೈಬಿಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next