Advertisement
ರವಿವಾರ ಕ್ಯಾನ್‌ಬೆರಾದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ 9 ವಿಕೆಟಿಗೆ ಕೇವಲ 103 ರನ್ ಗಳಿಸಿತು. ಜವಾಬಿತ್ತ ಆಸ್ಟ್ರೇಲಿಯ 18.5 ಓವರ್‌ಗಳಲ್ಲಿ 6 ವಿಕೆಟಿಗೆ 104 ರನ್ ಬಾರಿಸಿತು. ಇದು ಈ ಕೂಟದಲ್ಲಿ ಆಸ್ಟ್ರೇಲಿಯಕ್ಕೆ ಒಲಿದ ಮೊದಲ ಜಯವಾದರೆ, ಭಾರತಕ್ಕೆ ಎದುರಾದ ಮೊದಲ ಸೋಲು. ಮೊದಲ ಪಂದ್ಯದಲ್ಲಿ ಭಾರತ ಇಂಗ್ಲೆಂಡನ್ನು ಸೋಲಿಸಿದರೆ, ಇಂಗ್ಲೆಂಡ್ ಆಸ್ಟ್ರೇಲಿಯವನ್ನು ಸೂಪರ್ ಓವರ್‌ನಲ್ಲಿ ಮಣಿಸಿತ್ತು.
ಮಧ್ಯಮ ವೇಗಿ ಎಲ್ಲಿಸ್ ಪೆರ್ರಿ ಘಾತಕ ದಾಳಿ ಸಂಘಟಿಸಿ ಭಾರತವನ್ನು ಕಾಡಿದರು. ಪೆರ್ರಿ ಸಾಧನೆ 13ಕ್ಕೆ 4 ವಿಕೆಟ್. ಅವರು ಒಂದೇ ಓವರಿನಲ್ಲಿ ಕೌರ್, ತನಿಯಾ ಭಾಟಿಯಾ ಮತ್ತು ದೀಪ್ತಿ ಶರ್ಮ ವಿಕೆಟ್ ಉಡಾಯಿಸಿದರು. ಮತ್ತೋರ್ವ ಮಧ್ಯಮ ವೇಗಿ ಟಯ್ಲ ಲಾಮಿನಿಕ್ 13 ರನ್ನಿಗೆ 3 ವಿಕೆಟ್ ಉರುಳಿಸಿದರು. ಭಾರತದ ಬ್ಯಾಟಿಂಗ್ ಸರದಿಯಲ್ಲಿ 35 ರನ್ ಮಾಡಿದ ಸ್ಮತಿ ಮಂಧನಾ ಅವರದೇ ಸರ್ವಾಧಿಕ ಗಳಿಕೆ. ಬಿರುಸಿನ ಆಟಕ್ಕಿಳಿದ ಅವರು 23 ಎಸೆತ ಎದುರಿಸಿ 3 ಬೌಂಡರಿ, 2 ಸಿಕ್ಸರ್ ಹೊಡೆದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಗಳಿಕೆ 28 ರನ್ (32 ಎಸೆತ, 4 ಬೌಂಡರಿ). ಎರಡಂಕೆಯ ಗಡಿ ತಲುಪಿದ ಮತ್ತೋರ್ವ ಆಟಗಾರ್ತಿ ರಾಧಾ ಯಾದವ್ (11).
Related Articles
Advertisement