Advertisement

ಮಹಿಳಾ ಸ್ವೋದ್ಯೋಗಕ್ಕೆ ವ್ಯಾಪಕ ಸ್ಪಂದನೆ

11:33 PM Mar 08, 2020 | Sriram |

ವಿಶೇಷ ವರದಿ-ಉಡುಪಿ: ಜಿಲ್ಲೆಯಲ್ಲಿ ಮಹಿಳಾ ಸಶಕ್ತೀಕರಣ ಯೋಜನೆಗಳಿಗೆ ಉತ್ತಮ ಸ್ಪಂದನೆ ಲಭಿಸುತ್ತಿದೆ. ಉದ್ಯೋಗಿನಿ ಯೋಜನೆಗೆ ಆಯ್ಕೆಯಾದ ಫ‌ಲಾ ನುಭವಿಗಳಿಗೆ ಅನುದಾನ ಬಿಡುಗಡೆಗೊಳಿಸಲಾಗಿದ್ದು, ಈ ವರ್ಷ 100ಕ್ಕೂ ಅಧಿಕ ಮಹಿಳೆಯರಿಗೆ ವಿವಿಧ ಯೋಜನೆಗಳಲ್ಲಿ ಸೌಲಭ್ಯಗಳನ್ನು ನೀಡಲಾಗಿದೆ.

Advertisement

2017-18ರಲ್ಲಿ 48 ಫ‌ಲಾನುಭವಿಗಳು ಪ್ರಯೋಜನ ಪಡೆದರೆ, 2019-20ನೇ ಸಾಲಿನಲ್ಲಿ 70 ಮಹಿಳೆಯರಿಗೆ ಸರಕಾರದ ಸಹಾಯಧನ ಲಭಿಸಿದೆ.

ಉದ್ಯೋಗಿನಿ ಯೋಜನೆಯಲ್ಲಿ 18ರಿಂದ 55 ವರ್ಷ ವಯಸ್ಸಿನ ಪರಿಶಿಷ್ಟ ಜಾತಿ ಮತ್ತು ಪಂಗಡದ 2 ಲಕ್ಷ ರೂ. ಆದಾಯ ಮಿತಿ ಹೊಂದಿರುವ ಮಹಿಳೆಯರಿಗೆ ರಾಷ್ಟ್ರೀಕೃತ ಬ್ಯಾಂಕ್‌ನಿಂದ ಗರಿಷ್ಠ 3 ಲಕ್ಷ ಸಾಲಕ್ಕೆ ಶೇ. 50 ಸಹಾಯಧನ ಹಾಗೂ ಇತರ ಸಮುದಾಯದ 1.50 ಲಕ್ಷದವರೆಗೆ ಆದಾಯ ಮಿತಿ ಹೊಂದಿರುವ ಮಹಿಳೆಯರಿಗೆ ಶೇ.30 ಸಹಾಯಧನ ನೀಡಲಾಗುತ್ತದೆ. ಆಯ್ಕೆಯಾದ ಫ‌ಲಾನುಭವಿಗಳಿಗೆ 6 ದಿನಗಳ ತರಬೇತಿಯೂ ಇದೆ.

ಟೈಲರಿಂಗ್‌, ಬ್ಯೂಟೀಷಿಯನ್‌, ಪರಂಪರಾಗತ ಗುಡಿ ಕೈಗಾರಿಕೆಗಳಲ್ಲಿ ತೊಡಗಿರುವ ಮಹಿಳೆಯರು ಇದರಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದಾರೆ. ಈ ಯೋಜನೆಯಲ್ಲಿ 2017-18ನೇ ಸಾಲಿನಲ್ಲಿ 48 ಮಹಿಳೆಯರಿಗೆ 16.5 ಲಕ್ಷರೂ. ಹಾಗೂ 2018-19ನೇ ಸಾಲಿನಲ್ಲಿ 30 ಮಹಿಳೆಯರಿಗೆ 31.3 ಲಕ್ಷ ರೂ. ಸಹಾಯಧನ ವಿತರಿಸಲಾಗಿದೆ. 2019- 2020ನೇ ಸಾಲಿನಲ್ಲಿ 77 ಮಹಿಳೆಯರನ್ನು ಆಯ್ಕೆ ಮಾಡಲಾಗಿದ್ದು, 70 ಮಂದಿ ತರಬೇತಿಗೆ ಹಾಜರಾಗಿದ್ದಾರೆ.

ಸಮೃದ್ಧಿ ಯೋಜನೆಗೆ 89 ಫ‌ಲಾನುಭವಿಗಳು
ಸಮೃದ್ಧಿ ಯೋಜನೆಯಲ್ಲಿ 18 ರಿಂದ 60 ವಯೋಮಿತಿಯ ನಗರ ಹಾಗೂ ಗ್ರಾಮೀಣ ಪ್ರದೇಶದ ಬಿಪಿಎಲ್‌ ಕಾರ್ಡ್‌ ಹೊಂದಿರುವ ಬೀದಿ ಬದಿ ಮಹಿಳಾ ವ್ಯಾಪಾರಿಗಳಿಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಈ ವರ್ಷ 89 ಫ‌ಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. 2017-18ರಲ್ಲಿ 48 ಮಹಿಳೆಯರಿಗೆ 4.80 ಲಕ್ಷ ರೂ. ಹಾಗೂ 2018-19ರಲ್ಲಿ 82 ಮಹಿಳೆಯರಿಗೆ 8.20 ಲಕ್ಷ ರೂ. ನೀಡಲಾಗಿದೆ.

Advertisement

ಮಹಿಳೆಯರು ಸಶಕ್ತೀಕರಣವಾದಾಗ ನೈಜ ಪ್ರಗತಿ ಸಾಧ್ಯವಾಗುತ್ತದೆ. ಮನೆ ನಿರ್ವಹಣಾ ಜವಾಬ್ದಾರಿಯೊಂದಿಗೆ ಸ್ವೋದ್ಯೋಗದಲ್ಲಿ ತೊಡಗಿಸಿಕೊಂಡಾಗ ಆರ್ಥಿಕವಾಗಿಯೂ ಮಹಿಳೆ ಸಶಕ್ತಳಾಗುವುದರಲ್ಲಿ ಸಂದೇಹವಿಲ್ಲ.

ಲಿಂಗತ್ವ ಅಲ್ಪ ಸಂಖ್ಯಾಕ‌
ಪುನರ್ವಸತಿ ಯೋಜನೆ
ಲಿಂಗತ್ವ ಅಲ್ಪ ಸಂಖ್ಯಾಕ‌ ಪುನರ್ವಸತಿ ಯೋಜನೆಯಲ್ಲಿ ಸ್ವೋದ್ಯೋಗ ಕೈಗೊಳ್ಳಲು 25 ಸಾವಿರ ರೂ. ಗಳ ಬಡ್ಡಿ ರಹಿತ ನೇರ ಸಾಲ ಹಾಗೂ 25 ಸಾವಿರ ರೂ. ಗಳ ಸಹಾಯಧನವನ್ನು 12 ಫ‌ಲಾನುಭವಿಗಳು ಹಾಗೂ ಕಿರು ಸಾಲ ಯೋಜನೆಯಲ್ಲಿ ಸ್ತ್ರೀ ಶಕ್ತಿ ಗುಂಪುಗಳು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು 2 ಲಕ್ಷ ರೂ. ಬಡ್ಡಿ ರಹಿತ ಸಾಲ ನೀಡಲಾಗುತ್ತಿದ್ದು 5 ಸ್ತ್ರೀ ಶಕ್ತಿ ಗುಂಪುಗಳು ಈ ಯೋಜನೆಯ ಪ್ರಯೋಜನ ಪಡೆದಿರುತ್ತಾರೆ.

ಬಡ್ಡಿರಹಿತ ಸಾಲ
ಕಿರು ಸಾಲ ಯೋಜನೆಯಲ್ಲಿ ಸ್ತ್ರೀ ಶಕ್ತಿ ಗುಂಪುಗಳು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು 2 ಲಕ್ಷ ರೂ. ಬಡ್ಡಿ ರಹಿತ ಸಾಲ ನೀಡಲಾಗುತ್ತಿದ್ದು, 2019-20ನೇ ಸಾಲಿನಲ್ಲಿ 5 ಸ್ತ್ರೀ ಶಕ್ತಿ ಗುಂಪುಗಳು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ. 2017-18ನೇ ಸಾಲಿನಲ್ಲಿ 8 ಗುಂಪುಗಳಿಗೆ 16 ಲಕ್ಷ ರೂ., ಹಾಗೂ 2018-19ನೇ ಸಾಲಿನಲ್ಲಿ 5 ಗುಂಪುಗಳಿಗೆ 10 ಲಕ್ಷ ರೂ. ಸಾಲ ವಿತರಿಸಲಾಗಿತ್ತು.

ಧನಶ್ರೀ ಯೋಜನೆಯಡಿ
25 ಸಾವಿರ ರೂ. ಸಹಾಯಧನ
ಧನಶ್ರೀ ಯೋಜನೆಯಲ್ಲಿ 18 ರಿಂದ 60 ವಯೋಮಿತಿಯ ಎಚ್‌ಐವಿ ಸೋಂಕಿತ ಮಹಿಳೆಯರು ಸ್ವ-ಉದ್ಯೋಗ ಕೈಗೊಳ್ಳಲು 25 ಸಾವಿರ ರೂ. ಬಡ್ಡಿ ರಹಿತ ನೇರ ಸಾಲ ಹಾಗೂ 25 ಸಾವಿರ ರೂ. ಸಹಾಯಧನ ವಿತರಿಸಲಾಗುತ್ತಿದ್ದು, ಈ ವರ್ಷ 21 ಫ‌ಲಾನುಭವಿಗಳು ಆಯ್ಕೆಯಾಗಿದ್ದಾರೆ. 2017-18ರಲ್ಲಿ 38 ಮಂದಿಗೆ 19 ಲಕ್ಷ ರೂ., 18-19ರಲ್ಲಿ 21 ಮಹಿಳೆಯರಿಗೆ 9.50 ಲಕ್ಷ ರೂ. ನೀಡಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಲ್ಲಿ ಸ್ವ-ಉದ್ಯೋಗ ಕೈಗೊಳ್ಳಲು 25 ಸಾವಿರ ರೂ. ಬಡ್ಡಿ ರಹಿತ ನೇರ ಸಾಲ ಹಾಗೂ 25 ಸಾವಿರ ರೂ. ಸಹಾಯಧನಕ್ಕೆ ಈ ವರ್ಷ 12 ಫ‌ಲಾನುಭವಿಗಳನ್ನು ಆರಿಸಲಾಗಿದೆ. 2017-18ರಲ್ಲಿ 5 ಮಂದಿಗೆ 2.5 ಲಕ್ಷ ರೂ. ಹಾಗೂ 18-19ರಲ್ಲಿ 8 ಮಂದಿಗೆ 4 ಲಕ್ಷ ರೂ. ವಿತರಿಸಲಾಗಿದೆ.

ಪೂರ್ಣಮಟ್ಟದಲ್ಲಿ ಸದುಪಯೋಗ
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮಹಿಳೆಯರಿಗಾಗಿ ಜಾರಿಗೆ ತಂದ ಯೋಜನೆಗಳು ಜಿಲ್ಲೆಯಲ್ಲಿ ಪೂರ್ಣಮಟ್ಟದಲ್ಲಿ ಉಪಯೋಗವಾಗುತ್ತಿವೆ. ಉದ್ಯೋಗಿನಿ ಯೋಜನೆಗೆ ಆಯ್ಕೆಯಾದ ಫ‌ಲಾನುಭವಿಗಳಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ. ಈ ವರ್ಷ 100ಕ್ಕೂ ಅಧಿಕ ಮಹಿಳೆಯರಿಗೆ ವಿವಿಧ ಯೋಜನೆಗಳಲ್ಲಿ ಸೌಲಭ್ಯಗಳನ್ನು ನೀಡಲಾಗಿದೆ.
– ಚಂದ್ರಿಕಾ ,ಯೋಜನಾಧಿಕಾರಿ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ

Advertisement

Udayavani is now on Telegram. Click here to join our channel and stay updated with the latest news.

Next